ಸಿಡಿಲು ಬಡಿದು ಬಿಎಸ್ಎಫ್ ಯೋಧ ಹುತಾತ್ಮ
ಸಿಡಿಲು ಬಡಿದು ಬಿಎಸ್ಎಫ್ ಯೋಧ ಹುತಾತ್ಮ
Vishwavani News
June 5, 2022
ಬಾಗಲಕೋಟೆ: ಅಸ್ಸಾಂನಲ್ಲಿ ಸಿಡಿಲು ಬಡಿದು ಕರ್ನಾಟಕದ ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ಬಿಎಸ್ ಎಫ್ ಯೋಧ ಹುತಾತ್ಮರಾಗಿದ್ದಾರೆ.
ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ರಾತ್ರಿ ಸುಮಾರಿಗೆ ಸಿಡಿಲು ಬಡಿದು ಯೋಧ ಅಶೋಕ್ ಮೃತಪಟ್ಟಿದ್ದಾರೆ. ಅಶೋಕ್ ಬಿಎಸ್ ಎಫ್ 31 ಬೆಟಾಲಿಯನ್ ಅಸ್ಸಾಂ-ಬಾಂಗ್ಲಾ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಯೋಧ ಅಶೋಕ್ ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದು, ಪಾರ್ಥೀವ ಶರೀರ ನಾಳೆ ಸ್ವಗ್ರಾಮ ಶಿರೂರಿಗೆ ಆಗಮಿಸುವ ಸಾಧ್ಯತೆ ಇದೆ.