ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶಿಕ್ಷಕರಿಗೆ ಮಕ್ಕಳ ವೇಕ್‌ಅಪ್‌ ಟಾಸ್ಕ್

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ವೃದ್ಧಿಗೆ ಸಿದ್ಧಪಡಿಸಿರುವ ಈ ಮಾರ್ಗಸೂಚಿಯಲ್ಲಿ ಕೆಲ ಅಂಶ ಗಳಿಗೆ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ನಿತ್ಯ ಮುಂಜಾನೆ ವೇಕ್‌ಅಪ್ ಕಾಲ್ ಮಾಡಲು ಹೇಗೆ ಸಾಧ್ಯ? ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವ ಜತೆಗೆ ಈ ರೀತಿ ಬೆಳ್ಳಂಬೆಳ್ಳಗೆ ನಿತ್ಯ ಕರೆ ಮಾಡಿ ಕೊಂಡು ಕೂರಬೇಕು ಎನ್ನುವುದು ಸರಿಯಲ್ಲ ಎನ್ನುವ ಮಾತುಗಳನ್ನು ಶಿಕ್ಷಕರು ಹೇಳಿ ದ್ದಾರೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ಸರಕಾರದಿಂದ 29 ಅಂಶಗಳ ಮಾರ್ಗಸೂಚಿ

Profile Ashok Nayak Jul 11, 2025 10:52 AM

ಬೆಂಗಳೂರು: ಸರಕಾರಿ ಶಾಲಾ ಶಿಕ್ಷಕರಿಗೆ ಪಾಠ ಹೊರತಾಗಿ ಹತ್ತಾರು ಜವಾಬ್ದಾರಿ ಹೊರಿಸಿದ್ದ ಶಿಕ್ಷಣ ಇಲಾಖೆ ಇದೀಗ ಮತ್ತೊಂದು ಜವಾಬ್ದಾರಿ ಹೊರಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರು ಹಾಗೂ ಮುಖ್ಯಶಿಕ್ಷಕರು ಮಕ್ಕಳನ್ನು ಬೆಳಿಗ್ಗೆ ಬೇಗನೇ ‘ಎಬ್ಬಿಸಿ’ ಓದಿಸುವ ಕೆಲಸವನ್ನೂ ಮಾಡಬೇಕಾಗಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ಹಲವು ಅಂಶಗಳ ಮಾರ್ಗಸೂಚಿಯನ್ನು ಪ್ರಕಟಿಸಿರುವ ಶಿಕ್ಷಣ ಇಲಾಖೆ, ಈ ಮಾರ್ಗಸೂಚಿಯಲ್ಲಿ ಮಕ್ಕಳಿಗೆ ವೇಕ್ಅಪ್ ಕಾಲ್ ಮಾಡುವಂತೆ ಸೂಚನೆ ನೀಡಿದೆ. ಒಟ್ಟು 29 ಅಂಶಗಳ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿರುವ ಶಿಕ್ಷಣ ಇಲಾಖೆ, ಇನ್ನು ಮುಂದೆ ಶಿಕ್ಷಕರು ಹಾಗೂ ಮುಖ್ಯಶಿಕ್ಷಕರು ಪ್ರತಿದಿನ ಮುಂಜಾನೆ ವಿದ್ಯಾರ್ಥಿಗಳು ಸಕ್ರಿಯವಾಗಿ ಅಭ್ಯಾಸ ಮಾಡುತ್ತಿರುವುದನ್ನು ಪರಿಶೀಲಿಸಲು ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ವೇಕ್ ಅಪ್ ಕಾಲ್ ಮಾಡಬೇಕೆಂದು ಸೂಚನೆ ನೀಡಿದೆ.

ಇದನ್ನೂ ಓದಿ:Vishweshwar Bhat Column: ಆಟೋ ಪೈಲಟ್‌ ಬಗ್ಗೆ ಸಂದೇಹ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ವೃದ್ಧಿಗೆ ಸಿದ್ಧಪಡಿಸಿರುವ ಈ ಮಾರ್ಗಸೂಚಿಯಲ್ಲಿ ಕೆಲ ಅಂಶಗಳಿಗೆ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ನಿತ್ಯ ಮುಂಜಾನೆ ವೇಕ್‌ಅಪ್ ಕಾಲ್ ಮಾಡಲು ಹೇಗೆ ಸಾಧ್ಯ? ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವ ಜತೆಗೆ ಈ ರೀತಿ ಬೆಳ್ಳಂಬೆಳ್ಳಗೆ ನಿತ್ಯ ಕರೆ ಮಾಡಿಕೊಂಡು ಕೂರಬೇಕು ಎನ್ನುವುದು ಸರಿಯಲ್ಲ ಎನ್ನುವ ಮಾತುಗಳನ್ನು ಶಿಕ್ಷಕರು ಹೇಳಿ ದ್ದಾರೆ.

ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿ: ಬೆಳಗಿನ ಪ್ರಾರ್ಥನಾ ಅವಧಿಯಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಆರೋಗ್ಯಕರ ಜೀವನ ಶೈಲಿ, ಮೊಬೈಲ್ ಪೋನ್ ಬಳಕೆಯನ್ನು ಸೀಮಿತ ಗೊಳಿಸುವುದು, ಪೌಷ್ಟಿಕ ಆಹಾರ ಸೇವನೆಯ ಮಹತ್ವ, ಪ್ರತಿದಿನ ಬೆಳಗಿನ ಅವಧಿಯಲ್ಲಿ ನೀಡುವ ರಾಗಿ ಮಾಲ್ಟ ಹಾಲು, ಊಟದ ಸಂದರ್ಭದಲ್ಲಿ ನೀಡುವ ಬಾಳೆಹಣ್ಣು, ಮೊಟ್ಟೆ ಹಾಗೂ ತರಕಾರಿ ಗಳ ಬಳಕೆ ಇಂತಹ ವಿಷಯಗಳಿಗೆ ಒತ್ತು ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಇಲಾಖೆ ಸೂಚನೆ ನೀಡಿದೆ.

ಮೊಬೈಲ್ ಗೀಳನ್ನು ತಪ್ಪಿಸಿ

ಮೊಬೈಲ್ ಫೋನ್ ಹಾಗೂ ಜಾಲತಾಣಗಳ ಬಳಕೆಯ ಗೀಳಿನಿಂದ ಉಂಟಾಗುವ ಅನಾಹುತಗಳ ಬಗ್ಗೆ ಶಿಕ್ಷಕರು ವಾರದಲ್ಲಿ ಕನಿಷ್ಠ ಎರಡು ಬಾರಿ ಎಚ್ಚರಿಕೆ ನೀಡಿ, ಅವುಗಳನ್ನು ಹೆಚ್ಚಾಗಿ ಬಳಸ ದಂತೆ ಸಲಹೆ ನೀಡುವುದು. ಹತ್ತನೇ ತರಗತಿಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಪರೀಕ್ಷೆಯ ಕಡೆಗೆ ಹೆಚ್ಚಿನ ಗಮನ ಕೇಂದ್ರೀಕರಿಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಎಂದು ಸೂಚನೆ ನೀಡಲಾಗಿದೆ.

ಆರೋಗ್ಯ ಇಲಾಖೆಯ ರಾಷ್ಟ್ರೀಯ ಬಾಲ ಸ್ವಾಸ ಕಾರ್ಯಕ್ರಮದ ಮೂಲಕ ಹತ್ತನೇ ತರಗತಿಯ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಜುಲೈ ತಿಂಗಳಲ್ಲಿಯೇ ಮುಗಿಸಬೇಕು. ಪೌಷ್ಟಿಕ ನ್ಯೂನತೆ ಇದ್ದರೆ ಇತರೆ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರೋಪಾಯಗಳನ್ನು ಕಂಡು ಕೊಳ್ಳುವುದು. ಜಂತು ಹುಳು ನಿವಾರಣೆಗೂ ಅಗತ್ಯ ಕ್ರಮವಹಿಸುವುದು. ಈ ಕುರಿತು ಜಿ.ಪಂ ಸಿಇಒ ಗಳು ಅಗತ್ಯ ಸಹಕಾರ ಒದಗಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಫಲಿತಾಂಶ ವೃದ್ಧಿಗೆ ಇಲಾಖೆ ಸೂತ್ರ

ಎಸ್‌ಎಸ್‌ಎಲ್‌ಸಿ ಪಠ್ಯಕ್ರಮ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ

ಜುಲೈ ತಿಂಗಳಿನಿಂದಲೇ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆರಂಭಿಸಿ

ಪ್ರತಿ ಎರಡು ತಿಂಗಳಿಗೊಮ್ಮೆ ಪೋಷಕರು-ಶಿಕ್ಷಕರ ಸಭೆಗಳನ್ನು ಆಯೋಜಿಸಿ

ಫಲಿತಾಂಶ ಕುಸಿತವಿರುವ ಶಾಲೆಗಳ ಮೇಲೆ ವಿಶೇಷ ಮುತುವರ್ಜಿ ವಹಿಸಿ.