Japan Open 2025: ಮೊದಲ ಸುತ್ತಿನಲ್ಲೇ ಹೊರಬಿದ್ದ ಸಿಂಧು; 16 ರ ಸುತ್ತಿಗೆ ಲಗ್ಗೆಯಿಟ್ಟ ಲಕ್ಷ್ಯ ಸೇನ್
PV Sindhu: ಮಾಜಿ ವಿಶ್ವ ಚಾಂಪಿಯನ್ ಆಗಿರುವ 30 ವರ್ಷದ ಸಿಂಧು, ಸೂಪರ್ 750 ಟೂರ್ನಮೆಂಟ್‌ನಲ್ಲಿ ಕೊರಿಯಾದ ಸಿಮ್ ಯು ಜಿನ್ ವಿರುದ್ಧ 15-21, 14-21 ಅಂತರದಲ್ಲಿ ಸೋತರು. ಇದು ಸಿಂಧು ಅವರ ಈ ವರ್ಷ ಐದನೇ ಮೊದಲ ಸುತ್ತಿನ ನಿರ್ಗಮನವಾಗಿದೆ.


ಟೋಕಿಯೊ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು(PV Sindhu) ಮತ್ತೊಮ್ಮೆ ಮೊದಲ ಸುತ್ತಿನಲ್ಲೇ ಸೋಲು ಕಂಡಿದಾರೆ. ಬುಧವಾರ ನಡೆದ ಜಪಾನ್ ಓಪನ್ ಬ್ಯಾಡ್ಮಿಂಟನ್(Japan Open 2025) ಪಂದ್ಯಾವಳಿಯ ಮಹಿಳಾ ಸಿಂಗಲ್ಸ್‌ನ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು. ಆದರೆ, ಲಕ್ಷ್ಯ ಸೇನ್ ಮತ್ತು ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಎರಡನೇ ಸುತ್ತಿಗೆ ಸುಲಭವಾಗಿ ಮುನ್ನಡೆದರು.
ಮಾಜಿ ವಿಶ್ವ ಚಾಂಪಿಯನ್ ಆಗಿರುವ 30 ವರ್ಷದ ಸಿಂಧು, ಸೂಪರ್ 750 ಟೂರ್ನಮೆಂಟ್‌ನಲ್ಲಿ ಕೊರಿಯಾದ ಸಿಮ್ ಯು ಜಿನ್ ವಿರುದ್ಧ 15-21, 14-21 ಅಂತರದಲ್ಲಿ ಸೋತರು. ಇದು ಸಿಂಧು ಅವರ ಈ ವರ್ಷ ಐದನೇ ಮೊದಲ ಸುತ್ತಿನ ನಿರ್ಗಮನವಾಗಿದೆ.
ಪುರುಷರ ಡಬಲ್ಸ್‌ನಲ್ಲಿ, ಪ್ರಸ್ತುತ ವಿಶ್ವದ 15 ನೇ ಶ್ರೇಯಾಂಕದಲ್ಲಿರುವ ಸಾತ್ವಿಕ್ ಮತ್ತು ಚಿರಾಗ್ ಜೋಡಿಯು ಕೊರಿಯಾದ ಕಾಂಗ್ ಮಿನ್ ಹ್ಯುಕ್ ಮತ್ತು ಕಿಮ್ ಡಾಂಗ್ ಜು ಅವರನ್ನು ಕೇವಲ 42 ನಿಮಿಷಗಳಲ್ಲಿ 21-18, 21-10 ಸೆಟ್‌ಗಳಿಂದ ಸೋಲಿಸಿತು.
ಇದನ್ನೂ ಓದಿ IND vs ENG: ಲಾರ್ಡ್ಸ್ ಟೆಸ್ಟ್‌ನಲ್ಲಿ ವಿವಾದಾತ್ಮಕ ತೀರ್ಪು ನೀಡಿದ ಅಂಪೈರ್ ವಿರುದ್ಧ ಆರ್ ಅಶ್ವಿನ್ ಕಿಡಿ!
ಹಾಲಿ ವರ್ಷದಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ, ಮೊದಲ ಸುತ್ತಿನಲ್ಲಿ ಹಲವಾರು ಸೋಲುಗಳಿಂದ ಕಂಗೆಟ್ಟಿದ್ದ ಲಕ್ಷ್ಯ ಜಪಾನ್ ಓಪನ್‌ನಲ್ಲಿ ಚೀನಾದ ವಾಂಗ್ ಝೆಂಗ್ ಕ್ಸಿಂಗ್ ಅವರನ್ನು 21-11, 21-18 ಅಂತರದಿಂದ ಸೋಲಿಸಿ ಉತ್ತಮ ಆರಂಭ ಪಡೆದಿದ್ದಾರೆ. ಅವರು ಮುಂದಿನ 16 ರ ಸುತ್ತಿನಲ್ಲಿ ಏಳನೇ ಶ್ರೇಯಾಂಕದ ಮತ್ತು ಸ್ಥಳೀಯ ಆಟಗಾರ ಕೊಡೈ ನರೋಕಾ ಅವರನ್ನು ಎದುರಿಸಲಿದ್ದಾರೆ.