ಜೈನ ಸಾಹಿತ್ಯವು ಭಾರತದ ಬೌದ್ಧಿಕ ವೈಭವದ ಬೆನ್ನೆಲುಬು
ನೀರನ್ನು ಉಳಿಸುವುದು, ತಾಯಿಯ ಹೆಸರಿನಲ್ಲಿ ಮರವೊಂದನ್ನು ಪೋಷಿಸುವುದು, ಸ್ವಚ್ಛತೆಯ ಧ್ಯೇಯ, ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ, ದೇಶೀಯ ಪ್ರವಾಸೋದ್ಯಮ, ನೈಸರ್ಗಿಕ ಕೃಷಿ, ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವುದು, ಯೋಗ ಮತ್ತು ಕ್ರೀಡೆಗಳನ್ನು ಜೀವನದ ಭಾಗವಾಗಿಸುವುದು ಮತ್ತು ಬಡವರಿಗೆ ಸಹಾಯ ಮಾಡುವುದು ಇದರಲ್ಲಿ ಸೇರಿವೆ


ಬೆಂಗಳೂರು: ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ – ಜೀತೊ ನಿಂದ ವಿಶ್ವ ನವಕಾರ ಮಂತ್ರ ದಿನಕ್ಕಾಗಿ ಮೆಗಾ ಜಾಗತಿಕ ಪಠಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು. ಬೆಳಿಗ್ಗೆ 8 ರಿಂದ 9:36 ರವರೆಗೆ ಪವಿತ್ರ ನವಕಾರ ಮಂತ್ರವನ್ನು ಒಗ್ಗಟ್ಟಿನಿಂದ ಪಠಿಸಿತು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೇಶದ 6 ಸಾವಿರ ಮತ್ತು ವಿವಿಧ 108 ದೇಶಗಳಲ್ಲಿ ಏಕಕಾಲದಲ್ಲಿ ಮಂತ್ರಪಠಣ ನಡೆಯಿತು.
ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ನವಕರ್ ಮಹಾಮಂತ್ರದ ತತ್ವಶಾಸ್ತ್ರವು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನಕ್ಕೆ ಪೂರಕವಾಗಿದೆ. ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಅಗತ್ಯವಿದೆ. ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು ಮಾಡುವಂತೆ ಜನತೆಗೆ ಮನವಿ ಮಾಡಿ ದರು.
ಇದನ್ನೂ ಓದಿ: Bangalore News: ಅಂಗಾಂಗ ದಾನ ಮಾಡುವುದರಿಂದ ಮತ್ತೊಬ್ಬರಿಗೆ ಜೀವದಾನ ಮಾಡಿದಂತೆ
ನೀರನ್ನು ಉಳಿಸುವುದು, ತಾಯಿಯ ಹೆಸರಿನಲ್ಲಿ ಮರವೊಂದನ್ನು ಪೋಷಿಸುವುದು, ಸ್ವಚ್ಛತೆಯ ಧ್ಯೇಯ, ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ, ದೇಶೀಯ ಪ್ರವಾಸೋದ್ಯಮ, ನೈಸರ್ಗಿಕ ಕೃಷಿ, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು, ಯೋಗ ಮತ್ತು ಕ್ರೀಡೆಗಳನ್ನು ಜೀವನದ ಭಾಗವಾಗಿಸುವುದು ಮತ್ತು ಬಡವರಿಗೆ ಸಹಾಯ ಮಾಡುವುದು ಇದರಲ್ಲಿ ಸೇರಿವೆ ಎಂದರು.
ಭಾರತದ ಇತಿಹಾಸ, ಹೆಗ್ಗುರುತು ಮತ್ತು ಆಧ್ಯಾತ್ಮಿಕ ಪ್ರಯಾಣದಲ್ಲಿ ಜೈನ ಧರ್ಮದ ಮಹತ್ವವನ್ನು ಪ್ರಸ್ತಾಪಿಸಿದ ಅವರು, ಜೈನ ಸಾಹಿತ್ಯವು ಭಾರತದ ಬೌದ್ಧಿಕ ವೈಭವದ ಬೆನ್ನೆಲುಬಾಗಿದೆ. ಜ್ಞಾನವನ್ನು ಸಂರಕ್ಷಿಸುವ ಸರ್ಕಾರದ ಬದ್ಧತೆಯಂತೆ ಪ್ರಾಕೃತ್ ಮತ್ತು ಪಾಲಿ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲಾಗಿದೆ. ಜೈನ ಸಮುದಾಯವು ಶತಮಾನಗಳಿಂದ ಸುಸ್ಥಿರ ಜೀವನಶೈಲಿ ಪಾಲಿಸಿ ಕೊಂಡು ಬಂದಿದೆ. ಇದು ಭಾರತದ ಮಿಷನ್ ಲೈಫ್‌ಗೆ ಹೊಂದಾಣಿಕೆಯಾಗುತ್ತದೆ ಎಂದರು.
ಇದು "ವಿಶ್ವ ಶಾಂತಿ ಮತ್ತು ಆಧ್ಯಾತ್ಮಿಕ ಏಕತೆಯತ್ತ ಸ್ಪೂರ್ತಿದಾಯಕ ಪ್ರಯತ್ನ" ಎಂದು ಬಣ್ಣಿಸಿ ದರು ಮತ್ತು ಎಲ್ಲಾ ನಾಗರಿಕರು ಸೇರುವಂತೆ ಒತ್ತಾಯಿಸಿದರು. ಪ್ರಧಾನ ಮಂತ್ರಿಗಳು ಮಿಷನ್ ಲೈಫ್ ಪರಿಕಲ್ಪನೆಯನ್ನು ಜೈನ ಸಮುದಾಯದ ಜೀವನಶೈಲಿಗೆ ಜೋಡಿಸಿದರು, ಇದು ಯುವ ಪೀಳಿಗೆಗೆ ಹೊಸ ದಿಕ್ಕಿನ ಸಂಕೇತ ಎಂದು ಕರೆದರು.
ಈ ಸಂದರ್ಭದಲ್ಲಿ, ಅಂಚೆ ಇಲಾಖೆಯು ವಿಶ್ವ ನವಕಾರ ದಿನದ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಿತು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಐಪಿಒಎಸ್ ಎಸ್. ರಾಜೇಂದ್ರ ಕುಮಾರ್ ಮತ್ತು ಜಿಐಟಿಒ ಗಣ್ಯರು ಉಪಸ್ಥಿತರಿದ್ದರು.
ಜಿತೋ ಬೆಂಗಳೂರು ದಕ್ಷಿಣ ಚಾಪ್ಟರ್ ಅಧ್ಯಕ್ಷ ರಣಜೀತ ಸೋಲಂಕಿ ಮಾತನಾಡಿ, ಜೀತೊದ ಚಟುವಟಿಕೆಗಳು ಇಂದು ವಿಶ್ವವ್ಯಾಪಿಯಾಗಿವೆ. ವಿಶ್ವಶಾಂತಿಗೆ ಆದ್ಯತೆ ನೀಡುವುದು ನಮ್ಮ ಗುರಿಯಾಗಿದೆ ಎಂದರು.
ಜಿತೋ ದಕ್ಷಿಣ ಚಾಪ್ಟರ್ ಆಧ್ಯಕ್ಷ ವಿಮಲ್ ಕಟಾರಿಯಾ ಮಾನತಾಡಿ, ಜೀತೊ ನವ ಮಾಧ್ಯಮ ವಾಗಿದೆ ಮತ್ತು ಈ ಕಾರ್ಯಕ್ರಮವು ಎಲ್ಲಾ ಸದಸ್ಯರ ಸಾಮೂಹಿಕ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಪವಿತ್ರ ಜೈನ ನವಕಾರ ಮಂತ್ರದ ಮೂಲಕ ವಿಶ್ವ ಶಾಂತಿಯನ್ನು ಉತ್ತೇಜಿಸುವ ಉದ್ದೇಶವಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಜೈನ ಪಂಗಡಗಳು ಮತ್ತು ವಿವಿಧ ಧರ್ಮಗಳ ಪ್ರತಿನಿಧಿಗಳು ಭಾಗವಹಿಸಿದ್ದರು.