ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಾಡಿಕೆಗಿಂತ ಮುಂಗಾರು ಜೋರು

ಮೇ ತಿಂಗಳ ಕೊನೆಯ ವಾರದಲ್ಲಿ ಅಥವಾ ಜೂನ್‌ನಲ್ಲಿ ಮುಂಗಾರು ಮಳೆ ಆರಂಭ ವಾಗುತ್ತದೆ ಎನ್ನಲಾಗಿದೆ. ವಾಡಿಕೆಗಿಂತ ಕೊಂಚ ಮಳೆ ಹೆಚ್ಚಾಗಲಿದೆ ಎಂದು ಹೇಳಲಾಗಿದ್ದು, ಸುಮಾರು ಶೇ.105 ರಷ್ಟು ಮಳೆಯಾಗಲಿದೆ. ಈ ಬಾರಿಯ ಮುಂಗಾರು ಮಾರುತಗಳು, ಮೇ ಕೊನೆಯ ವಾರದಲ್ಲಿ ದಕ್ಷಿಣದ ಕೇರಳ ಪ್ರವೇಶಿಸಿ, ಸೆಪ್ಟೆಂಬರ್‌ವರೆಗೂ ಮಳೆಯಾಗಲಿದೆ ಎನ್ನಲಾಗುತ್ತಿದೆ.

ಮೇ ಅಂತ್ಯ, ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು

Profile Ashok Nayak Apr 18, 2025 10:37 AM

ಅಪರ್ಣಾ ಎ.ಎಸ್ ಬೆಂಗಳೂರು

ಪೂರ್ವ ಮುಂಗಾರಿನ ಮಳೆ ಪ್ರಮಾಣದಲ್ಲಿಯೂ ಭಾರಿ ಏರಿಕೆ

ಬಿಸಿಲ ಬೇಗೆಯಿಂದ ಬೆಂದಿದ್ದ ರಾಜ್ಯದ ಜನರಿಗೆ ಪೂರ್ವ ಮುಂಗಾರು ತಂಪೆರೆಯುವ ಮೂಲಕ ಖುಷಿ ನೀಡಿದೆ. ಇದೀಗ ಮುಂಗಾರು ಮಳೆಯೂ ವಾಡಿಕೆಗಿಂತ ಅಧಿಕವಾಗಲಿದೆ ಎನ್ನುವ ಮತ್ತೊಂ ದು ಸಿಹಿ ಸುದ್ದಿ ಸಿಕ್ಕಿದೆ. ಎರಡು ವರ್ಷಗಳ ಹಿಂದೆ ತೀವ್ರ ಬರಗಾಲಕ್ಕೆ ತುತ್ತಾಗಿದ್ದ ಕರ್ನಾಟಕದಲ್ಲಿ ಕಳೆದ ವರ್ಷ ಮುಂಗಾರು ಮಳೆ ಕೈ ಹಿಡಿದಿತ್ತು. ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅತಿವೃಷ್ಟಿಯಿಂದ ಪ್ರವಾಹ ಪರಿಸ್ಥಿತಿಯೂ ನಿರ್ಮಾಣ ವಾಗಿತ್ತು. ಇದೀಗ ಪ್ರಸಕ್ತ ವರ್ಷವೂ ಕಳೆದ ವರ್ಷದಂತೆ ವಾಡಿಕೆಗಿಂತ ತುಸು ಹೆಚ್ಚೇ ಮಳೆ ಯಾಗಲಿದೆ ಎಂದು ಹವಮಾನ ಇಲಾಖೆ ತಜ್ಞರು ಹೇಳಿದ್ದಾರೆ.

ಈ ಬಾರಿ ಪೂರ್ವ ಮುಂಗಾರು ಮಳೆಯು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಲಿದೆ. ಮೂಲಗಳ ಪ್ರಕಾರ ಮೇ ತಿಂಗಳ ಕೊನೆಯ ವಾರದಲ್ಲಿ ಅಥವಾ ಜೂನ್‌ನಲ್ಲಿ ಮುಂಗಾರು ಮಳೆ ಆರಂಭ ವಾಗುತ್ತದೆ ಎನ್ನಲಾಗಿದೆ. ವಾಡಿಕೆಗಿಂತ ಕೊಂಚ ಮಳೆ ಹೆಚ್ಚಾಗಲಿದೆ ಎಂದು ಹೇಳಲಾಗಿದ್ದು, ಸುಮಾರು ಶೇ.105ರಷ್ಟು ಮಳೆಯಾಗಲಿದೆ. ಈ ಬಾರಿಯ ಮುಂಗಾರು ಮಾರುತಗಳು, ಮೇ ಕೊನೆಯ ವಾರದಲ್ಲಿ ದಕ್ಷಿಣದ ಕೇರಳ ಪ್ರವೇಶಿಸಿ, ಸೆಪ್ಟೆಂಬರ್‌ವರೆಗೂ ಮಳೆಯಾಗಲಿದೆ ಎನ್ನಲಾಗುತ್ತಿದೆ. ಪ್ರಮುಖವಾಗಿ ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗದಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ಕೈಹಿಡಿದ ಪೂರ್ವ ಮುಂಗಾರು: ಭಾರಿ ಬಿಸಿಲಿನಿಂದ ಬಳಲಿದ್ದ ರಾಜ್ಯದಲ್ಲಿ ಈಗಾಗಲೇ ಪೂರ್ವ ಮುಂಗಾರು ಚುರುಕುಗೊಂಡಿದ್ದು, ವಾಡಿಕೆಗಿಂತ ಎರಡು ಪಟ್ಟು ಹೆಚ್ಚು ಪೂರ್ವ ಮುಂಗಾರು ಮಳೆ ಸುರಿದಿದೆ. ರಾಜ್ಯದಲ್ಲಿ ಈ ವರ್ಷ ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ದುಪ್ಪಟ್ಟು ಸುರಿದಿದ್ದು, 49 ಸೆಂ.ಮೀ ಮಳೆಯಾಗಿದೆ. ಇದು ನಿರೀಕ್ಷಿತ 25 ಸೆಂ.ಮೀಗಿಂತ ಶೇ.98ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಮಾರ್ಚ್‌ನಿಂದ ಆರಂಭಗೊಳ್ಳುವ ಪೂರ್ವ ಮುಂಗಾರು ಮಳೆ ಜೂನ್‌ವರೆಗೂ ಮುಂದುವರಿಯಲಿದ್ದು, ಈ ಮಳೆಯಿಂದ ಉಷ್ಣಾಂಶ, ಬಿಸಿಗಾಳಿ ಹಾಗೂ ಸೆಖೆಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಪೂರ್ವ ಮುಂಗಾರಿನ ಸಮಯದಲ್ಲಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ವಾಡಿಕೆಯಂತೆ ಈ ಅವಧಿಗೆ 22.7 ಸೆಂ. ಮೀ. ಮಳೆಯಾಗಬೇಕು. ಆದರೆ, 43.1 ಸೆಂ.ಮೀ.ಮಳೆಯಾಗಿದೆ. ಅಂದರೆ ಶೇ.90ರಷ್ಟು ಮಳೆ ಹೆಚ್ಚಾಗಿದೆ. ದಕ್ಷಿಣ ಒಳನಾಡಿ ನಲ್ಲಿ 30.5 ಸೆಂ.ಮೀ. ಮಳೆಯಾಗಬೇಕು. ಆದರೆ, 62.7 ಸೆಂ.ಮೀ. ನಷ್ಟು ಮಳೆ ಸುರಿಯುವ ಮೂಲಕ ಮಳೆ ಪ್ರಮಾಣ ಶೇ.106ರಷ್ಟು ಹೆಚ್ಚಾಗಿದೆ. ಉತ್ತರ ಒಳನಾಡಿನ ಜಿಗಳಲ್ಲಿ 19.2 ಸೆಂ.ಮೀ. ಮಳೆಯಾಗ ಬೇಕು. ಆದರೆ, ಈ ಬಾರಿ 33.8 ಸೆಂ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.76ರಷ್ಟು ಹೆಚ್ಚುವರಿ ಮಳೆ ಸುರಿದಿದೆ ಎಂದು ವರದಿಯಲ್ಲಿ ತಿಳಿಸಿದೆ.

ಅನಾಹುತ ನಿಭಾಯಿಸಲು ಕ್ರಮ

ಕರ್ನಾಟಕದಲ್ಲಿ ಕಳೆದ ಐವತ್ತು ವರ್ಷದಲ್ಲಿ ಸರಾಸರಿ ಮಳೆಯ ಪ್ರಮಾಣ 87 ಸೆ. ಮೀ ಆಗಿದ್ದು, ಈ ಬಾರಿ ಶೇ.105ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಆದ್ದರಿಂದ ಕಂದಾಯ ಇಲಾಖೆ ಈಗಾಗಲೇ ಮುಂಗಾರು ಮಳೆಗೆ ಸಂಬಂಧಿಸಿದಂತೆ ಸರಣಿ ಸಭೆಗಳನ್ನು ನಡೆಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರೊಂದಿಗೆ, ಅತಿವೃಷ್ಟಿ ಯಿಂದಾಗುವ ಅನಾಹುತವನ್ನು ನಿಭಾಯಿಸಲು ಜಿಲ್ಲಾಧಿಕಾರಿಗಳ ಖಾತೆಗೆ ಅಗತ್ಯ ಅನುದಾನ ಮೀಸಲಿಡುವುದಕ್ಕೆ ಕ್ರಮ ವಹಿಸಲಾಗಿದೆ.

*

ಒಂದೂವರೆ ತಿಂಗಳಲ್ಲಿ ಶೇ.98ರಷ್ಟು ಹೆಚ್ಚು ಮಳೆ; ಉಷ್ಣ ಅಲೆ, ಸೆಖೆ ಕಡಿಮೆ

ಈ ಬಾರಿ ವಾಡಿಕೆ ಗಿಂತ ಸುಮಾರು ಶೇ.105ರಷ್ಟು ಹೆಚ್ಚಿನ ಮಳೆಯಾಗಲಿದೆ.

ಕರಾವಳಿ, ದಕ್ಷಿಣ ಕರ್ನಾಟಕ ಭಾಗದಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗಲಿದೆ.