ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಪಹಲ್ಗಾಮ್ ಭಯೋತ್ಪಾದಕರ ದಾಳಿಗೆ ಸದ್ಗುರು ತೀವ್ರ ಖಂಡನೆ

Pahalgam Terror Attack: ಭಯೋತ್ಪಾದನೆಯ ಉದ್ದೇಶ ಯುದ್ಧ ಅಲ್ಲ, ಸಮಾಜದಲ್ಲಿ ಭಯವನ್ನು ಉಂಟುಮಾಡಿ ಅದರ ಶಕ್ತಿಗುಂದಿಸುವುದು. ಆತಂಕವನ್ನು ಹರಡಿ, ಸಮಾಜವನ್ನು ಒಡೆದು, ದೇಶದ ಆರ್ಥಿಕ ಪ್ರಗತಿಯನ್ನು ತಡೆದು ಎಲ್ಲಾ ಹಂತದಲ್ಲೂ ನಿರಂಕುಶತೆಯನ್ನು ನಿರ್ಮಿಸುವುದು. ಈ ದೇಶದ ಸ್ವಾಯತ್ತತೆಯನ್ನು ಕಾಪಾಡಿ ಅದನ್ನು ಪೋಷಿಸಬೇಕೆಂದರೆ, ಇಂತಹ ವಿಷಯಗಳನ್ನು ಅತ್ಯಂತ ಕಠಿಣವಾದ ಕ್ರಮಗಳ ಮೂಲಕ ನಿಭಾಯಿಸಿ ದೀರ್ಘಕಾಲಿಕವಾದ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ತಿಳಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸದ್ಗುರು ತೀವ್ರ ಖಂಡನೆ

Profile Siddalinga Swamy Apr 23, 2025 9:55 PM

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕರ ದಾಳಿಯು (Pahalgam Terror Attack)‌ ಕನಿಷ್ಠ 26 ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಅವರಲ್ಲಿ ಹೆಚ್ಚಿನವರು ಮುಗ್ಧ ಪ್ರವಾಸಿಗರಾಗಿದ್ದರು. ಈ ಘಟನೆಯ ಕುರಿತು ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಕೃತ್ಯವನ್ನು ಬಲವಾಗಿ ಖಂಡಿಸಿದ್ದಾರೆ. ಭಯೋತ್ಪಾದನೆಯ ಉದ್ದೇಶ ಯುದ್ಧ ಅಲ್ಲ, ಸಮಾಜದಲ್ಲಿ ಭಯವನ್ನು ಉಂಟುಮಾಡಿ ಅದರ ಶಕ್ತಿಗುಂದಿಸುವುದು. ಆತಂಕವನ್ನು ಹರಡಿ, ಸಮಾಜವನ್ನು ಒಡೆದು, ದೇಶದ ಆರ್ಥಿಕ ಪ್ರಗತಿಯನ್ನು ತಡೆದು ಎಲ್ಲಾ ಹಂತದಲ್ಲೂ ನಿರಂಕುಶತೆಯನ್ನು ನಿರ್ಮಿಸುವುದು. ಈ ದೇಶದ ಸ್ವಾಯತ್ತತೆಯನ್ನು ಕಾಪಾಡಿ ಅದನ್ನು ಪೋಷಿಸಬೇಕೆಂದರೆ, ಇಂತಹ ವಿಷಯಗಳನ್ನು ಅತ್ಯಂತ ಕಠಿಣವಾದ ಕ್ರಮಗಳ ಮೂಲಕ ನಿಭಾಯಿಸಿ ದೀರ್ಘಕಾಲಿಕವಾದ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಪೋಸ್ಟ್‌ ಮಾಡಿರುವ ಸದ್ಗುರು ಜಗ್ಗಿ ವಾಸುದೇವ್ ಅವರು, ಭಯೋತ್ಪಾದನೆ ಒಡ್ಡುವ ಸವಾಲುಗಳಿಗೆ ದೀರ್ಘಕಾಲೀನ ಪರಿಹಾರಗಳ ಕುರಿತು ತಿಳಿಸಿರುವ ಸದ್ಗುರುಗಳು, ಶಿಕ್ಷಣ, ಆರ್ಥಿಕ ಅವಕಾಶ ಮತ್ತು ಮಾನವ ಕಲ್ಯಾಣಕ್ಕೆ ʼಹೆಚ್ಚು ಸಮಾನವಾದ ಅವಕಾಶಗಳನ್ನು ಕಲ್ಪಿಸುವ ವಿಧಾನʼ ದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ʼಶಿಕ್ಷಣ, ಆರ್ಥಿಕತೆ, ಸಂಪತ್ತು ಮತ್ತು ಸೌಖ್ಯ ಎಲ್ಲಾ ಹಂತಗಳಲ್ಲೂ ಸಮಾನ ಅವಕಾಶಗಳು ಸಿಗುವಂತಾದರೆ ಅವು ದೀರ್ಘಕಾಲಿಕ ಪರಿಹಾರವಾಗಬಹುದುʼ ಎಂದು ಹೇಳಿದ್ದಾರೆ.

ಆದರೆ ಸದ್ಯಕ್ಕೆ ನಾವೀಗ ಜಾತಿ, ಮತ, ನಮ್ಮ ರಾಜಕೀಯ ನಿಲುವುಗಳನ್ನೆಲ್ಲ ಬದಿಗಿಟ್ಟು ಒಂದು ದೇಶವಾಗಿ ಒಗ್ಗೂಡಿ, ತಮ್ಮ ಕರ್ತವ್ಯ ನಿರ್ವಹಣೆಗೆ ಹೊರಟಿರುವ ನಮ್ಮ ಸುರಕ್ಷಾಬಲಗಳೊಂದಿಗೆ ನಿಲ್ಲಬೇಕಾಗಿದೆ. ಈ ದಾಳಿಯಲ್ಲಿ ನಮ್ಮನ್ನಗಲಿದವರಿಗೆ ತೀವ್ರ ಸಂತಾಪಗಳು ಮತ್ತು ಗಾಯಾಳುಗಳಿಗೆ ಆಶೀರ್ವಾದಗಳು ಎಂದು ಸದ್ಗುರು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Karnataka Rain: ಏಪ್ರಿಲ್‌ 26ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ!