Viral Video: ಇದೇನು ಮದುವೆ ಮನೆಯೋ...ರಣರಂಗವೋ..? ಶಾಕಿಂಗ್ ವಿಡಿಯೊ ವೈರಲ್!
ಉತ್ತರ ಪ್ರದೇಶದ ಮಿರ್ಜಾಪುರದ ಭಿಖಾರಿಪುರ ಗ್ರಾಮದಲ್ಲಿ ಮದುವೆಗೆ ಅಡ್ಡಿಪಡಿಸಿದ್ದಕ್ಕೆ ವಧು ಮತ್ತು ವರನ ಕಡೆಯವರು ಮದುವೆಯ ಮಂಟಪದಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದ್ದು, ಇದರಿಂದ ಮದುವೆ ಮನೆ ರಣರಂಗವಾಗಿ ಮಾರ್ಪಟ್ಟಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.


ಲಖನೌ: ಮದುವೆಮನೆಯಲ್ಲಿ ಜಗಳ, ಗಲಾಟೆಗಳು ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಇಂತಹದೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜಗಳದ ಹಿಂದಿನ ಕಾರಣವೆಂದರೆ ಒಂದು ಕಡೆಯವರು ಮದುವೆಯಲ್ಲಿ ಗೊಂದಲವನ್ನು ಸೃಷ್ಟಿಸಿದ್ದಂತೆ. ಇದರಿಂದ ಕೋಪಗೊಂಡು ಇನ್ನೊಂದು ಕಡೆಯವರು ಅವರಿಗೆ ಹೊಡೆದಿದ್ದಾರೆ. ಅವರು ಮದುವೆಯ ಮನೆಯಲ್ಲಿ ಪರಸ್ಪರ ಹೊಡೆದಾಡಿಕೊಂಡ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ, ಮದುವೆ ಮೆರವಣಿಗೆಯಲ್ಲಿ ಬಂದ ಸದಸ್ಯರು ಮದುವೆಯ ಅಲಂಕಾರವನ್ನು ಹಾಳುಮಾಡುವುದು ಸೆರೆಯಾಗಿದೆ.
ಕೆಲವರು ಹೊಡೆದಾಡುತ್ತಾ ನೆಲದ ಮೇಲೆ ಬಿದ್ದಿದ್ದಾರೆ. ಇತ್ತ ಕಡೆ ಹೊಡೆದಾಟದಲ್ಲಿ ತೊಡಗಿರುವ ತಮ್ಮ ಗಂಡಂದಿರನ್ನು ತಡೆಯಲು ಮಹಿಳೆಯರು ಪ್ರಯತ್ನಿಸಿದ್ದಾರೆ. ಈ ಜಗಳದ ಸಮಯದಲ್ಲಿ ವರನ ಕಡೆಯ ಅನೇಕ ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ. ಕೊನೆಗೆ ಪೊಲೀಸರು ಸ್ಥಳಕ್ಕೆ ಬಂದು ಎರಡೂ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯದಿದ್ದಾರೆ. ಮತ್ತು ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
मिर्जापुर -शादी में खलल डालने पर घराती-बाराती में बवाल, लड़की पक्ष के पाटीदारों ने बारातियों को जमकर पीटा
— भारत समाचार | Bharat Samachar (@bstvlive) April 22, 2025
मारपीट में बाराती पक्ष के कई लोगों को आई गंभीर चोटें, मौके पर पहुंची पुलिस दोनों पक्षों को थाने लेकर आई
तहरीर के आधार पर मुकदमा दर्ज कर जांच में जुटी पुलिस, कछवा थाना… pic.twitter.com/uInGcphr4w
ಇದೇ ರೀತಿಯ ಘಟನೆ ಉತ್ತರ ಪ್ರದೇಶದ ಜಲೌನ್‌ನಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆ, ಒರೈ ಕೊಟ್ವಾಲಿಯ ಅಮನ್ ರಾಯಲ್ ಗಾರ್ಡನ್‍ನಲ್ಲಿ ವರನ ಕುಟುಂಬ ಮತ್ತು ಡೆಕೋರೆಷನ್ ಮಾಡುವವರ ನಡುವೆ ವಾಗ್ವಾದ ನಡೆದ ನಂತರ ಮದುವೆ ಮನೆ ಯುದ್ಧಭೂಮಿಯಾಗಿ ಮಾರ್ಪಟ್ಟಿತು. ಸಣ್ಣ ಭಿನ್ನಾಭಿಪ್ರಾಯದ ಬಗ್ಗೆ ಶುರುವಾದ ಜಗಳವು ಶೀಘ್ರದಲ್ಲೇ ಹೊಡೆದಾಟಕ್ಕೆ ಕಾರಣವಾಗಿತ್ತು. ಒದೆಯುವುದು ಮತ್ತು ಪೀಠೋಪಕರಣಗಳನ್ನು ಒಬ್ಬರ ಮೇಲೆ ಮತ್ತೊಬ್ಬರು ಎಸೆಯುವ ಮೂಲಕ ಜಗಳವಾಡಿದ್ದರು. ಘಟನೆಯ ಸಂಪೂರ್ಣ ದೃಶ್ಯ ಸ್ಥಳದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಪತಿಯ ತೊಡೆಯ ಮೇಲೆ ಮಲಗಿದ ಮಹಿಳೆಗೆ ಬಿತ್ತು ಭಾರೀ ದಂಡ; ಏನಿದು ವೈರಲ್ ವಿಡಿಯೊ?
ಇತ್ತೀಚೆಗಷ್ಟೇ ಮದುವೆಯ ದಿನದಂದು ವರರಿಬ್ಬರು ವರದಕ್ಷಿಣೆಯಾಗಿ ಕಾರು ಕೇಳಿದ್ದಕ್ಕೆ ಕೋಪಗೊಂಡ ಇಬ್ಬರು ಸಹೋದರಿಯರು ಮದುವೆಯನ್ನು ಕ್ಯಾನ್ಸಲ್ ಮಾಡಿದ ಅಘಾತಕಾರಿ ಘಟನೆ ನಡೆದಿತ್ತು. ಮದುವೆಯ ಆಚರಣೆಗಳ ಮಧ್ಯದಲ್ಲಿ ವರರಿಬ್ಬರು ಹಾಗೂ ಅವರ ಕುಟುಂಬ ಸದಸ್ಯರ ಜೊತೆ ಸೇರಿ ವರದಕ್ಷಿಣೆಗಾಗಿ ಕಾರನ್ನು ಬೇಡಿಕೆ ಇಟ್ಟಿದ್ದರಿಂದ ಈ ಮದುವೆ ಬೇಡ ಎಂದು ವಧುಗಳಿಬ್ಬರು ಹೇಳಿದ್ದಾರೆ. ಇದರಿಂದ ಎರಡೂ ಕಡೆಗಳ ನಡುವೆ ಜಗಳ ಭುಗಿಲೆದ್ದಿತು ಎನ್ನಲಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.