Janhvi Kapoor and Sidharth Malhotra: ಪರಮ್ ಸುಂದರಿ ಚಿತ್ರದ ಮುದ್ದು ಜೋಡಿ ಜಾನ್ವಿ -ಸಿದ್ಧಾರ್ಥ್ ಫೋಟೊ ಕಂಡು ಫಿದಾ ಆದ ಫ್ಯಾನ್ಸ್
ಜಾನ್ವಿ ಕಪೂರ್ ತಮ್ಮ ಮುಂಬರುವ ಚಿತ್ರ ಪರಮ್ ಸುಂದರಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ನಟಿಸಲಿದ್ದಾರೆ(Janhvi Kapoor and Sidharth Malhotra). ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೂಟಿಂಗ್ ವೇಳೆಯ ಅನೇಕ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಇದೀಗ ಬಹಳಷ್ಟು ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ಗಳಿಸಿದ್ದಾರೆ



ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ತಮ್ಮ ಮುಂದಿನ ಸಿನಿಮಾ ಪರಮ್ ಸುಂದರಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗಿನ ತೆರೆ ಹಂಚಿಕೊಳ್ಳಲಿದ್ದಾರೆ. ಸದ್ಯ ಈ ಸಿನಿಮಾ ಶೂಟಿಂಗ್ ಹಂತದಲ್ಲಿದ್ದು ತಮ್ಮ ಸಿನಿಮಾ ಚಿತ್ರೀಕರಣದ ಕೆಲವು ಫೋಟೋವನ್ನು ಇತ್ತೀಚೆಗಷ್ಟೇ ಸೋಷಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಕೆಲ ಫೋಟೋಗಳು ಬಹಳ ರೊಮ್ಯಾಂಟಿಕ್ ಆಗಿದ್ದು ಈ ಮುದ್ದು ಜೋಡಿಗೆ ನೆಟ್ಟಿಗರು ಫುಲ್ ಫಿಧಾ ಆಗಿದ್ದಾರೆ.

ನಟಿ ಜಾನ್ವಿ ಕಪೂರ್ ನಟ ಸಿದ್ಧಾರ್ಥ್ ಜೊತೆಗೆ ಸಖತ್ ಹಾಟ್ ಆಗಿ ಕಂಡಿದ್ದಾರೆ. ಜಾನ್ವಿ ಕೆಂಪು ಬಣ್ಣದ ಸೀರೆ ಉಟ್ಟು ಸ್ಟನಿಂಗ್ ಲುಕ್ ನಿಂದ ಪಡ್ಡೆ ಹುಡುಗರ ನಿದ್ದೆ ಕದಿದ್ದಾರೆ. ಕೇರಳದ ಬೀದಿಗಳಲ್ಲಿ ಪರಮ್ ಸುಂದರಿ ಸಿನಿಮಾ ಚಿತ್ರೀಕರಣ ನಡೆದಿದ್ದು ಸಿದ್ಧಾರ್ಥ್ ಅವರು ಕ್ಯಾಶುಯಲ್ ಪೀಚ್ ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್ ನಲ್ಲಿ ಸ್ಟನಿಂಗ್ ಲುಕ್ ನಿಂದ ಕಂಗೊಳಿಸಿದ್ದಾರೆ.

ಇಬ್ಬರು ಸ್ಕೂಟರ್ ಮೇಲೆ ನಗುನಗುತ್ತಾ ಪ್ರಯಾಣಿಸುತ್ತಿದ್ದು ಜಾನ್ವಿ ಸ್ಕೂಟಿಯನ್ನು ಕಲಿಯಲು ಸಿದ್ಧಾರ್ಥ್ ಅವರಿಗೆ ಸಹಾಯ ಮಾಡುತ್ತಿರುವಂತೆ ಫೋಟೋದಲ್ಲಿ ಕಾಣಬಹುದು. ಇಬ್ಬರು ಪರಮ್ ಸುಂದರಿಯಲ್ಲಿ ಸದ್ಯ ಬ್ಯುಸಿ ಇದ್ದು ನಾನು ಸಿದ್ಧಾರ್ಥ್ ಅವರನ್ನು ಜಾಲಿ ರೈಡ್ ಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಜಾನ್ವಿ ಇನ್ ಸ್ಟಾ ಖಾತೆಯಲ್ಲಿ ಫನ್ನಿ ಕ್ಯಾಪ್ಶನ್ ಸಹ ನೀಡಿದ್ದಾರೆ. ಇಬ್ಬರ ನಡುವೆ ಉತ್ತಮ ಕೆಮಿಸ್ಟ್ರಿ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಪರಮ್ ಸುಂದರಿ ಸಿನಿಮಾವನ್ನು ತುಷಾರ್ ಜಲೋಟಾ (ದಾಸವಿ) ನಿರ್ದೇಶಿಸುತ್ತಿದ್ದು ಉತ್ತರ ಭಾರತದ ಹುಡುಗನ ಮತ್ತು ದಕ್ಷಿಣ ಭಾರತದ ಹುಡುಗಿಯ ಪ್ರೀತಿಯ ಕಥಾ ಹಂದರ ಈ ಸಿನಿಮಾಕ್ಕೆ ಇದೆ. ಸಂಸ್ಕೃತಿ, ಅನಿರೀಕ್ಷಿತ ತಿರುವುಗಳ ಜೊತೆಗೆ ರೊಮ್ಯಾಂಟಿಕ್ ಲವ್ ಸ್ಟೋರಿ ಮೂಲಕ ಪರಮ್ ಸುಂದರಿ ಸಿನಿಮಾ ಜುಲೈ 25 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ.

ಸಿದ್ಧಾರ್ಥ್ ಕೊನೆಯದಾಗಿ ಅರುಣ್ ಕತ್ಯಾಲ್ ಅವರ ಆ್ಯಕ್ಷನ್ ಥ್ರಿಲ್ಲರ್ ಯೋಧದಲ್ಲಿ ಕಾಣಿಸಿಕೊಂಡಿದ್ದು, ಈ ಸಿನೆಮಾ ಅವರಿಗೆ ಸಖತ್ ಫೇಮ್ ನೀಡಿತ್ತು. ಅದೇ ರೀತಿ ಜಾನ್ವಿ ಅವರು ಜೂ. ಎನ್ಟಿಆರ್ ನೇತೃತ್ವದ ಆಕ್ಷನ್ ಚಿತ್ರ ದೇವರ: ಭಾಗ 1 ನಲ್ಲಿ ಕೊನೆದಾಗಿ ಕಾಣಿಸಿಕೊಂಡಿದ್ದು, ನೇಮ್ ಫೇಮ್ ನೀಡಿದೆ. ಈಗ ಇವರಿಬ್ಬರು ಜೊತೆಗೆ ಪರಮ್ ಸುಂದರಿಯಲ್ಲಿ ತೆರೆ ಹಂಚಿಕೊಳ್ಳುತ್ತಿದ್ದು ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ ಎನ್ನಬಹುದು.