ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Lalit Manchanda: ಖ್ಯಾತ ಹಿಂದಿ ಕಿರುತೆರೆ ನಟ ಆತ್ಮಹತ್ಯೆ; ಕಾರಣ ಏನು?

ಹಿಂದಿ ಕಿರುತೆರೆಯ ಜನಪ್ರಿಯ ಧಾರವಾಹಿ ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ ಖ್ಯಾತಿಯ ನಟ ಲಲಿತ್ ಮಂಚಂದ(Actor Lalit Manchanda) ಆತ್ಮಹತ್ಯೆ ಮಾಡಿಕೊಂಡಿದ್ದು ನಟನ ಮೃತ ದೇಹವು ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಅವರ ಸ್ವಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಲಲಿತ್ ಮಂಚಂದ ಅವರ ಮೃತ ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಖ್ಯಾತ ಹಿಂದಿ ಕಿರುತೆರೆ ನಟ ಆತ್ಮಹತ್ಯೆ; ಕಾರಣ ಏನು?

Profile Pushpa Kumari Apr 23, 2025 7:03 PM

ನವದೆಹಲಿ: ಜೀವನದಲ್ಲಿ ಸಮಸ್ಯೆ ಎಷ್ಟೇ ಬಂದರು ಅದನ್ನು ಇದ್ದು ಜಯಿಸಬೇಕು ಎಂಬ ಸ್ಫೂರ್ತಿದಾಯಕ ಮಾತನ್ನು ನಾವು ಕೇಳಿರುತ್ತೇವೆ. ಆದರೆ ಸಮಸ್ಯೆ ಎಂದು ಬಂದಾಗ ಆತ್ಮಹತ್ಯೆಯೊಂದು ಅಂತಿಮ ಪರಿಹಾರವಾಗಿ ಆಯ್ಕೆ ಮಾಡುವವರು ಅನೇಕರಿದ್ದಾರೆ. ಈ ನಿಟ್ಟಿನಲ್ಲಿ ನಟ ಲಲಿತ್ ಮಂಚಂದ (Lalit Manchanda) ಕೂಡ ಜೀವನದಲ್ಲಿ ಸೋತು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಹಿಂದಿ ಕಿರುತೆರೆಯ ಜನಪ್ರಿಯ ಧಾರವಾಹಿ ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ ಖ್ಯಾತಿಯ ನಟ ಲಲಿತ್ ಮಂಚಂದ ಆತ್ಮಹತ್ಯೆ ಮಾಡಿಕೊಂಡಿದ್ದು ನಟನ ಮೃತ ದೇಹವು ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಅವರ ಸ್ವಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಲಲಿತ್ ಮಂಚಂದ ಅವರ ಮೃತ ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಖ್ಯಾತ ನಟನ ಆತ್ಮಹತ್ಯೆ ವಿಚಾರವು ಅವರ ಅಭಿಮಾನಿಗಳಿಗೆ, ಕಿರುತೆರೆಯ ಅನೇಕರಿಗೆ ಈ ಸುದ್ದಿ ಬೇಸರ ಉಂಟುಮಾಡಿದೆ.

ನಟ ಲಲಿತ್ ಮಂಚಂದ ಅವರು ಪತ್ನಿ ತಾರು, ಪುತ್ರ ಉಜ್ವಲ್, ಪುತ್ರಿ ಶ್ರೇಯಾ ಅವರನ್ನು ಅಗಲಿದ್ದಾರೆ. ಖ್ಯಾತ ನಟ ಲಲಿತ್ ಮಂಚಂದ ಆತ್ಮಹತ್ಯೆಗೆ ದೇಶಾದ್ಯಂತ ಸಂತಾಪ ಸೂಚಿಸಲಾಗುತ್ತಿದೆ. ಸಿನಿಮಾ ಮತ್ತು ಟಿವಿ ಕಲಾವಿದರ ಸಂಘ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಲಲಿತ್ ಅವರಿಗೆ ಗೌರವದ ನುಡಿನಮನವನ್ನು ಸಲ್ಲಿಸಿದ್ದಾರೆ. ಹಾಗಾದರೆ ನಟ ಆತ್ಮಹತ್ಯೆಯಂತಹ ಕಟು ನಿರ್ಧಾರವನ್ನು ಕೈಗೊಳ್ಳಲು ಕಾರಣ ಏನು? ಎಂಬ ಬಗ್ಗೆ ಕೂಡ ಅನೇಕ ಚರ್ಚೆಗಳು ಏರ್ಪಡುತ್ತಿವೆ.

ಕಾರಣ ಏನು?

ಲಲಿತ್ ಮಂಚಂದ ಅವರ ಆತ್ಮಹತ್ಯೆ ವಿಚಾರ ಹೊರಬೀಳುತ್ತಿದ್ದಂತೆ ಇವರ ಸಾವಿಗೆ ಕಾರಣ ಏನಿರಬಹುದು ಎಂದು ಸೋಶಿಯಲ್ ಮಿಡಿಯಾದಲ್ಲಿ ಹೊಸ ಚರ್ಚೆ ಶುರುವಾಗಿದೆ. ಪೊಲೀಸರು ನಡೆಸಿದ್ದ ಪ್ರಾಥಮಿಕ ತನಿಖೆಯಲ್ಲಿ ನಟ ಲಲಿತ್ ಮಂಚಂದ ಅವರಿಗೆ ಮಾನಸಿಕ ಒತ್ತಡದ ಸಮಸ್ಯೆ ಇತ್ತು ಎಂದು ತಿಳಿದುಬಂದಿದೆ. ಲಲಿತ್ ಮುಂಬೈನಲ್ಲಿ ಹಣಕಾಸಿನ ಸಮಸ್ಯೆಯಿಂದಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರು. ಮುಂಬೈನಲ್ಲಿ ನಿತ್ಯ ಜೀವನಕ್ಕೂ ಕಷ್ಟಪಡುತ್ತಿದ್ದ ಕಾರಣ ಆರು ತಿಂಗಳ ಹಿಂದೆ ತಮ್ಮ ಕುಟುಂಬದೊಂದಿಗೆ ಮೀರತ್‌ಗೆ ಮರಳಿದ್ದರು ಎಂದು ಕೆಲವು ವರದಿಗಳಿಂದ ತಿಳಿದು ಬಂದಿದೆ.

ಇದನ್ನು ಓದಿ:AI Movie: ಕನ್ನಡದಲ್ಲೇ ಸಿದ್ಧವಾಯ್ತು ಮೊದಲ ಎಐ ಸಿನಿಮಾ; ಬಿಡುಗಡೆ ಯಾವಾಗ?.

ನಟನ ಮನೆಯಲ್ಲಿ ಯಾವುದೇ ಸೂಸೈಡ್ ನೋಟ್ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಲಲಿತ್ ಮಂಚಂದ ಅವರ ಸಾವಿನ ಹಿಂದೆ ಬೇರೆಯವರ ಕೈವಾಡ ಇದೆಯಾ ಎಂಬ ಅನುಮಾನ ಕೂಡ ವ್ಯಕ್ತ ವಾಗುತ್ತಿದ್ದು ಹೀಗಾಗಿ ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಲಲಿತ್ ಮಂಚಂದ ಕುಟುಂಬ ಮತ್ತು ಆಪ್ತರನ್ನು ಇನ್ನಷ್ಟು ವಿಚಾರಣೆ ಮಾಡಲು ಪ್ರಾರಂಭಿಸಿದ್ದು ಮುಂದಿನ ದಿನದಲ್ಲಿ ಈ ಬಗ್ಗೆ ಸೂಕ್ತ ಮಾಹಿತಿಗಳು ಲಭ್ಯವಾಗಲಿದೆ.

ಲಲಿತ್ ಮಂಚಂದ ಹೆಚ್ಚು ಟಿವಿ ಶೋ ಮೂಲಕ ಜನಪ್ರಿಯವಾಗಿದ್ದಾರೆ. ಇಂಡಿಯಾಸ್ ಮೋಸ್ಟ್ ವಾಂಟೆಡ್, ಕ್ರೈಮ್ ಪೆಟ್ರೋಲ್ ಮತ್ತು ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮುಂತಾದ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ಒಂದು ವೆಬ್ ಸಿರೀಸ್‌ಗಾಗಿ ಕೆಲಸ ಮಾಡುತ್ತಿದ್ದು ಅಪಾರ ಅಭಿಮಾನಿಗಳ ಮನಗೆದ್ದಿದ್ದರು.