Star Winter Fashion: ಹೀಗಿದೆ ನಟಿ ಭೂಮಿಕಾ ವಿಂಟರ್ ಸ್ಟೈಲ್ ಸ್ಟೇಟ್‌ಮೆಂಟ್ಸ್
ನಟಿ ಭೂಮಿಕಾಗೆ ಚಳಿಗಾಲವೆಂದರೇ ಇಷ್ಟವಂತೆ. ನಾನಾ ಬಗೆಯಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವ ಅವರು ವಿಶ್ವವಾಣಿ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನ್ ಹಾಗೂ ವಿಂಟರ್ ಕೇರ್ (Star Winter Fashion) ಬಗ್ಗೆ ಹಂಚಿಕೊಂಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
Vishwavani News
January 6, 2025
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಹಾಗೂ ಮಾಡೆಲ್ ಭೂಮಿಕಾಗೆ ಚಳಿಗಾಲವು ಪ್ರಿಯವಂತೆ. ಲೇಯರ್ ಡ್ರೆಸ್‌ಕೋಡ್ ಫಾಲೋ ಮಾಡುವುದು ಅವರ ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ ಸೇರಿದೆಯಂತೆ. ಅವರ ಚಳಿಗಾಲದ ಫ್ಯಾಷನ್ ಹಾಗೂ ಆರೈಕೆ (Star Winter Fashion) ಕುರಿತಂತೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿರುವ ಅವರು ಓದುಗರಿಗೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.
ಭೂಮಿಕಾ, ನಟಿ
ಚಳಿಗಾಲದ ಫ್ಯಾಷನ್‌ನಲ್ಲಿ ವೆಸ್ಟರ್ನ್ ಲುಕ್
ಚಳಿಗಾಲದಲ್ಲಿ ನನಗೆ ಆದಷ್ಟೂ ವೆಸ್ಟೆರ್ನ್ ಲುಕ್ ನೀಡುವ ಟ್ರೆಂಚ್ ಕೋಟ್‌ಗಳು ನನಗಿಷ್ಟ. ಅದರಲ್ಲೂ ಸ್ಲೀಕ್ ಲುಕ್ ನೀಡುವಂತವು ನನ್ನ ಲಿಸ್ಟ್‌ನಲ್ಲಿವೆ. ಸದಾ ಬೆಚ್ಚಗಿರಲು ನಾನು ಬಯಸುವುದರಿಂದ ಲೇಯರ್ ಲುಕ್‌ಗೆ ಸೈ ಎನ್ನುತ್ತೇನೆ. ಲಾಂಗ್‌ಲೈನ್ ಕೋಟ್ಸ್, ಟ್ರೆಂಚ್ ಕೋಟ್ಸ್, ಬಾಂಬರ್ ಜಾಕೆಟ್ಸ್, ಫಾಕ್ಸ್ ಫರ್ ಕೋಟ್ಸ್ ಈ ಸೀಸನ್‌ನಲ್ಲಿ ಧರಿಸುತ್ತೇನೆ. ಸೀಸನ್‌ಗೆ ತಕ್ಕಂತೆ ಫ್ಯಾಷನ್ ಫಾಲೋ ಮಾಡುತ್ತೇನೆ ಎನ್ನುತ್ತಾರೆ.
ವಿಂಟರ್ ಬ್ಯೂಟಿಕೇರ್
ಚಳಿಗಾಲದಲ್ಲಿ ಆದಷ್ಟೂ ಹೆಚ್ಚು ನೀರು ಕುಡಿಯುತ್ತೇನೆ. ಆಯಿಲ್ ಮಸಾಜ್ ದಿನಚರಿಯಲ್ಲಿರುತ್ತದೆ. ಇನ್ನು ಮಾಯಿಶ್ಚರೈಸರ್, ನೈಟ್ ಕ್ರೀಮ್ ಬಳಸುತ್ತೇನೆ. ಈ ಸೀಸನ್‌ನಲ್ಲಿ ಎಲ್ಲರೂ ಅತಿ ಹೆಚ್ಚು ಬ್ಯೂಟಿ ಕೇರ್ ಮಾಡುವುದು ಅಗತ್ಯ. ನಿಮ್ಮ ತ್ವಚೆಗೆ ತಕ್ಕಂತೆ ಆರೈಕೆ ಮಾಡಿ ಎನ್ನುವ ಭೂಮಿಕಾ, ಆರೋಗ್ಯಕ್ಕಾಗಿ ಹಾಲಿನ ಜತೆ ಅರಿಷಿಣ ಸೇರಿಸಿ ಕುಡಿಯುತ್ತಾರಂತೆ. ಜಿಡ್ಡಿನಂಶ ಹೆಚ್ಚಿಸಿಕೊಳ್ಳಲು ಕಡಲೇಬೀಜ, ಬಾದಾಮ್ ಹಾಗೂ ಗೆಣಸಿನ ಖಾದ್ಯಗಳನ್ನು ಸೇವಿಸುತ್ತಾರಂತೆ.
ವಿಂಟರ್ ಆನ್‌ಲೈನ್ ಶಾಪಿಂಗ್
ಟ್ರೆಂಡಿಯಾಗಿರುವ ಉಡುಗೆಗಳು ಈ ವಿಂಟರ್‌ನಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಸಿಗುತ್ತವೆ. ಆದಕಾರಣ, ನಾನು ಆನ್‌ಲೈನ್ ಶಾಪಿಂಗ್ ಮಾಡುತ್ತೇನೆ ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ | Balenciaga Bubble Outfit Fashion: ವೈರಲ್ ಆಯ್ತು ಪ್ಯಾಕಿಂಗ್‌ಗೆ ಬಳಸುವ ಬಬಲ್ ವ್ರಾಪ್ ಔಟ್‌ಫಿಟ್!
ಚಳಿಗಾಲಕ್ಕೆ ಭೂಮಿಕಾ ಸಲಹೆ
ಸ್ಟೈಲಿಶ್ ಲೇಯರ್ ಲುಕ್ ಫಾಲೋ ಮಾಡಿ.
ವೆಸ್ಟರ್ನ್ ಲುಕ್‌ಗಾದಲ್ಲಿ ಬೂಟ್ಸ್ ಧರಿಸಿ.
ಎಥ್ನಿಕ್ ಲುಕ್ ಇದ್ದಲ್ಲಿ ಲಾಂಗ್ ಸೆಮಿ ಫಾರ್ಮಲ್ ಶ್ರಗ್ಸ್ & ಕಾರ್ಡಿಗಾನ್ ಧರಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)