Viral Video: ದೇಸಿ ವ್ಯಕ್ತಿಯನ್ನು ಮದುವೆಯಾಗಲು ಬಯಸಿದ್ದ ರಷ್ಯಾದ ಮಹಿಳೆಗೆ ಕರ್ನಾಟಕದ ಈ ನಗರ ಸಿಕ್ಕಾಪಟ್ಟೆ ಇಷ್ಟವಂತೆ
Viral Video: ಕಳೆದ ವರ್ಷ ಭಾರತೀಯ ವ್ಯಕ್ತಿಯನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದ ರಷ್ಯಾದ ಮಹಿಳೆ ದಿನಾರಾ ಇದೀಗ ಭಾರತದ ಈ ನಗರವನ್ನು ತುಂಬಾ ಇಷ್ಟಪಡುತ್ತಿರುವುದಾಗಿ ತಿಳಿಸಿದ್ದಾರೆ. ಈ ನಗರದಲ್ಲಿ ಸುತ್ತಾಡುತ್ತಾ ತೆಗೆದ ಪೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದುಸಿಕ್ಕಾಪಟ್ಟೆ ವೈರಲ್ ಆಗಿದೆ.
Source : Free press jounal
ಬೆಂಗಳೂರು, ಜ. 17, 2025: ರಷ್ಯಾದ ದಿನಾರಾ (Dinara) ಎಂಬ ಮಹಿಳೆ ಕಳೆದ ವರ್ಷ ಭಾರತೀಯ ವ್ಯಕ್ತಿಯನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಕ್ಕಾಗಿ ವೈರಲ್ ಆಗಿದ್ದರು. ಅವರ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿ "ಮ್ಯಾರಿ ಮಿ" ಎಂದು ಕೇಳಿದ್ದರು. ಇದೀಗ ತಮ್ಮ ಪೋಸ್ಟ್‌ವೊಂದರಲ್ಲಿ ಭಾರತದ ಈ ನಗರವನ್ನು ಬಹಳ ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಆ ನಗರವನ್ನು ಅವರು "ಬ್ಯೂಟಿಫುಲ್" ಎಂದು ಕರೆದಿದ್ದಾರೆ. ಇದು ಕೂಡ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ದಿನಾರಾ ಇಷ್ಟಪಡುವಂತಹ ನಗರ ಯಾವುದೆಂದರೆ ಅದು ನಮ್ಮ ಸಿಲಿಕಾನ್ ಸಿಟಿ ಬೆಂಗಳೂರು. ಬೆಂಗಳೂರು ಎಲ್ಲರೂ ಇಷ್ಟಪಡುವಂತಹ ನಗರ. ಇಲ್ಲಿನ ತಂಪಾದ ವಾತಾವರಣ, ಕೆಲವು ಪ್ರಸಿದ್ಧ ಸ್ಥಳಗಳು ದೇಶಿಯ ಜನರನ್ನು ಮಾತ್ರವಲ್ಲ ವಿದೇಶಿಗರನ್ನು ಆಕರ್ಷಿಸುತ್ತದೆ. ಇದೀಗ ದಿನಾರಾ ಅವರು ಬೆಂಗಳೂರಿನ ಬೀದಿಗಳಲ್ಲಿ ಅಡ್ಡಾಡುವ ವಿಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಅವರು ಈ ವಿಡಿಯೊಗೆ "ಈ ನಗರವನ್ನು ಪ್ರೀತಿಸುತ್ತಿದ್ದೇನೆ. ಬೆಂಗಳೂರು: ನೀನೇಕೆ ಇಷ್ಟು ಸುಂದರಿ?" ಎಂದು ಶೀರ್ಷಿಕೆ ನೀಡಿದ್ದಾರೆ.
ನಂತರ ರಷ್ಯಾದ ಮಹಿಳೆ ನಗರದ ಅತ್ಯಂತ ಅಪ್ರತಿಮ ಸ್ಥಳಗಳಲ್ಲಿ ಒಂದಾದ ವಿಧಾನಸೌಧದ ಎದುರು ನಿಂತು ಪೋಸ್ ನೀಡುವ ಫೋಟೊವನ್ನು ಸಹ ಹಂಚಿಕೊಂಡಿದ್ದಾರೆ. ಅವರು ಶಾಸಕಾಂಗದ ಕಟ್ಟಡದ ಪಕ್ಕದಲ್ಲಿ ನಿಂತು ಮುಗುಳ್ನಕ್ಕು, "ಸೋ ಬ್ಯೂಟಿಫುಲ್ ಬೆಂಗಳೂರು, ಇಂಡಿಯಾ" ಎಂದು ಬರೆದಿದ್ದಾರೆ.
ತನ್ನ ಇತ್ತೀಚಿನ ಪೋಸ್ಟ್‌ಗಳಲ್ಲಿ, ಅವರು ಬೆಂಗಳೂರಿನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ನಗರದ ಬೀದಿಗಳಲ್ಲಿ ಸುತ್ತಾಡಿ ಅಲ್ಲಿ ನಿಂತು ಪೋಸ್ ನೀಡಿದ್ದಾರೆ. ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಇತರ ಭಾರತೀಯ ನಗರಗಳಿಗೆ ಪ್ರಯಾಣಿಸಲು ಮತ್ತು ಆ ಸ್ಥಳಗಳ ಸೌಂದರ್ಯವನ್ನು ಸವಿಯಲು ಕೇಳಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ನಡು ರಸ್ತೆಯಲ್ಲಿ ಸ್ಟಂಟ್ ಮಾಡಿದ; ವಿಡಿಯೊ ವೈರಲ್ ಆಗಿ ಪೊಲೀಸರ ಅತಿಥಿಯಾದ!
"ಭೋಪಾಲ್‌ಗೆ ಬನ್ನಿ...ಸರೋವರಗಳ ನಗರ" ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಮುಂಬೈ" ಎಂದು ಇನ್ನೊಬ್ಬರು ಶೀಘ್ರದಲ್ಲೇ ದೊಡ್ಡ ನಗರಕ್ಕೆ ಭೇಟಿ ನೀಡುವಂತೆ ಕೇಳಿಕೊಂಡಿದ್ದಾರೆ. ಹೀಗೆ ನೆಟ್ಟಿಗರು ಅವರಿಗೆ ಅನ್ವೇಷಣೆ ಮಾಡಲು ತಮ್ಮ ತಮ್ಮ ನಗರಗಳಿಗೆ ಕರೆದಿದ್ದಾರೆ.