Viral Video: ನಡು ರಸ್ತೆಯಲ್ಲಿ ಸ್ಟಂಟ್ ಮಾಡಿದ; ವಿಡಿಯೊ ವೈರಲ್ ಆಗಿ ಪೊಲೀಸರ ಅತಿಥಿಯಾದ!
Viral Video: ಹರಿಯಾಣ ಗುರುಗ್ರಾಮದ ಸೈಬರ್ ಸಿಟಿಯ ರ‍್ಯಾಪಿಡ್ ಮೆಟ್ರೋ ನಿಲ್ದಾಣದ ಬಳಿಯ ಅಂಡರ್‌ಪಾಸ್‌ನಲ್ಲಿ ವ್ಲಾಗರ್ ಕೃಷ್ಣ ಯಾದವ್ ಮತ್ತು ಟೀಂ ಕಾರಿನ ಬಾನೆಟ್ ಮೇಲೆ ಕುಳಿತು ಸ್ಟಂಟ್ ಮಾಡುತ್ತಾ ವಿಡಿಯೊವನ್ನು ಶೂಟ್ ಮಾಡಿದ್ದಾರೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಂತರ ಪೊಲೀಸರು ಅದನ್ನು ಗಮನಿಸಿ ಅವನನ್ನು ಬಂಧಿಸಿದ್ದಾರೆ.
Source : Free press jounal
ಚಂಡಿಗಢ, ಜ. 16, 2025: ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಲು ಯುವಕರು ಅಪಾಯಕಾರಿ ಸ್ಟಂಟ್‍ಗಳನ್ನು ಮಾಡುತ್ತಾರೆ. ಇದೀಗ ಅಂತಹದ್ದೇ ವಿಡಿಯೊ ಮಾಡಲು ವ್ಲಾಗರ್ ಒಬ್ಬ ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಕುಳಿತು ತೊಂದರೆಗೆ ಸಿಲುಕಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಗುರುಗ್ರಾಮದ ಸೈಬರ್ ಸಿಟಿಯ ರ‍್ಯಾಪಿಡ್ ಮೆಟ್ರೋ ನಿಲ್ದಾಣದ ಬಳಿಯ ಅಂಡರ್‌ಪಾಸ್‌ನಲ್ಲಿ ವ್ಲಾಗರ್ ತನ್ನ ಟೀಂ ಜತೆ ಸೇರಿ ಸ್ಟಂಟ್ ಮಾಡುತ್ತಾ ವಿಡಿಯೊ ಶೂಟ್ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿ ಕೊನೆಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ವ್ಲಾಗರ್ ಗುರುಗ್ರಾಮದ ಚಕ್ಕರ್ಪುರ್ ಗ್ರಾಮದ ನಿವಾಸಿ ಕೃಷ್ಣ ಯಾದವ್ ಎಂಬುದಾಗಿ ತಿಳಿದು ಬಂದಿದೆ. ವೈರಲ್ ಆದ ವಿಡಿಯೊದಲ್ಲಿ ಯಾದವ್ ಕೆಂಪು ಫೋರ್ಡ್ ಮಸ್ಟಾಂಗ್ ಕಾರಿನ ಬಾನೆಟ್ ಮೇಲೆ ಕುಳಿತು ಸ್ಟಂಟ್ ಮಾಡಿದ್ದಾನೆ. ಈ ವಿಡಿಯೊವನ್ನು ಕೃಷ್ಣ ಯಾದವ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.
Hi ,@DC_Gurugram , @gurgaonpolice , @NayabSainiBJP , @PMOIndia
— Rupee (@Rupee880763289) January 8, 2025
This guy is claiming that he have link in gurugram police . He can do what he wants to do . Please take action
His Instagram id - babajaani_vlogs pic.twitter.com/6BH4wCHoH7
ಕಾರಿನ ನೋಂದಣಿ ಸಂಖ್ಯೆಯ ಆಧಾರದ ಮೇಲೆ, ಡಿಎಲ್ಎಫ್ ಹಂತ 1 ಪೊಲೀಸರು ಕೃಷ್ಣ ಮತ್ತು ತಂಡವನ್ನು ಪತ್ತೆಹಚ್ಚಿ ಅವರನ್ನು ಸುತ್ತುವರಿದು ಎರಡೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವ್ಲಾಗರ್ ನಂತರ ವಿಡಿಯೊದಲ್ಲಿ ತನ್ನ ಕೃತ್ಯಕ್ಕಾಗಿ ಕ್ಷಮೆಯಾಚಿಸಿದ್ದಾನೆ. ಅಂತಹ ಅಪಾಯಕಾರಿ ಸ್ಟಂಟ್‍ಗಳನ್ನು ಮಾಡದಂತೆ ಜನರನ್ನು ಒತ್ತಾಯಿಸಿದ್ದಾನೆ. ಯಾದವ್ ಮತ್ತು ತಂಡದ ಸದಸ್ಯರನ್ನು ತನಿಖೆಗೆ ಒಳಪಡಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಈ ಸುದ್ದಿಯನ್ನೂ ಓದಿ:Viral News: ಥೂ! ರೀಲ್ಸ್‌ಗಾಗಿ ಈ ಮಟ್ಟಕ್ಕೂ ಇಳಿತಾರಾ? ನಾಯಿಯ ಮೊಲೆ ಚೀಪಿ ಹಾಲು ಕುಡಿದ ಯುವತಿಯ ಶಾಕಿಂಗ್ ವಿಡಿಯೊ ನೋಡಿ
"ಆರೋಪಿಗಳು ತಪ್ಪೊಪ್ಪಿಗೆ ನೀಡಿದ್ದಾರೆ ಮತ್ತು ಅವರನ್ನು ತನಿಖೆಗೆ ಒಳಪಡಿಸಿದ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆʼʼ ಎಂದು ಡಿಎಲ್ಎಫ್ ಹಂತ 1 ಪೊಲೀಸ್ ಠಾಣೆಯ ಎಸ್ಎಚ್ಒ ಇನ್ಸ್‌ಪೆಕ್ಟರ್ ರಾಜೇಶ್ ಕುಮಾರ್ ತಿಳಿಸಿದ್ದಾರೆ.