Winter Mix Match Fashion 2025: ಬದಲಾಗಿದೆ 2025ರ ಚಳಿಗಾಲದ ಮಿಕ್ಸ್ ಮ್ಯಾಚ್ ಫ್ಯಾಷನ್
ಪ್ರತಿ ಚಳಿಗಾಲದಂತೆ ಈ ಬಾರಿಯೂ ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್ (Winter Mix Match Fashion 2025) ಟ್ರೆಂಡಿಯಾಗಿದೆ. ಅದಕ್ಕೆ ತಕ್ಕಂತೆ ಹೇಗೆಲ್ಲಾ ನೀವು ಕೂಡ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಸಿಂಪಲ್ ಐಡಿಯಾಗಳನ್ನು ನೀಡಿದ್ದಾರೆ. ಟ್ರೈ ಮಾಡಿ ನೋಡಿ.
Vishwavani News
January 7, 2025
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿ ಚಳಿಗಾಲದಲ್ಲೂ ಮಿಕ್ಸ್ ಮ್ಯಾಚ್ ಫ್ಯಾಷನ್ ಕಾನ್ಸೆಪ್ಟ್ (Winter Mix Match Fashion 2025) ಹೊಸ ರೂಪ ಪಡೆಯುತ್ತದೆ. ಹೌದು, ಈ ಸೀಸನ್‌ನ ಚಳಿಗಾಲದಲ್ಲಿ ಬೆಚ್ಚನೆಯ ಉಡುಪುಗಳನ್ನು ಕೊಂಚ ಸ್ಟೈಲಾಗಿ ಧರಿಸುವ ಹಾಗೂ ಮಿಕ್ಸ್ ಅಂಡ್ ಮ್ಯಾಚ್ ಲೇಯರ್ ಲುಕ್ ಕಾನ್ಸೆಪ್ಟ್ ಟ್ರೆಂಡಿಯಾಗಿದೆ. ನಾನಾ ಬಗೆಯ ಡಿಫರೆಂಟ್ ಸ್ಟೈಲಿಂಗ್ ಪ್ರಯೋಗ ಚಾಲ್ತಿಯಲ್ಲಿದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್. ಇದಕ್ಕೆ ಪೂರಕ ಎಂಬಂತೆ, ನೀವು ಹೇಗೆಲ್ಲಾ ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್ ಬಳಸಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬಹುದು? ಎಂಬುದರ ಕುರಿತಂತೆ ಸ್ಟೈಲಿಸ್ಟ್ ರಜತ್ ಒಂದಿಷ್ಟು ಐಡಿಯಾ ನೀಡಿದ್ದಾರೆ.
ಚಿತ್ರಕೃಪೆ: ಪಿಕ್ಸೆಲ್
ವಾರ್ಡ್ರೋಬ್ ಕಲೆಕ್ಷನ್
ನಿಮ್ಮ ವಾರ್ಡ್ರೋಬ್‌ನಲ್ಲಿರುವುದನ್ನು ತೆಗೆದು ಡಿಫರೆಂಟ್ ಆಗಿ ಧರಿಸಿ. ಜೀನ್ಸ್, ಸ್ಕಿನ್ ಟೈಟ್ ಪ್ಯಾಂಟ್ಸ್, ಜಾಕೆಟ್‌ಗಳು, ಫುಲ್ ಆರ್ಮ್ ಡ್ರೆಸ್‌ಗಳೊಂದಿಗೆ ಫಂಕಿ ಆಕ್ಸೆಸರೀಸ್ ಧರಿಸಿ. ಇನ್ನು, ದಪ್ಪನೆಯ ಫ್ಯಾಬ್ರಿಕ್‌ನ ಸಲ್ವಾರ್, ಚೂಡಿದಾರ್, ಕುರ್ತಾ, ಫುಲ್ ಆರ್ಮ್ ಸ್ವೆಟರ್, ಟಾಫ್ಸ್, ಫುಲ್ ಒವರ್ಸ್ , ಕುರ್ತಾ, ಲಾಂಗ್ ಸ್ಲೀವ್, ಪುಶ್ ಬ್ಯಾಕ್ ಪ್ಯಾಂಟ್, ಫಾರ್ಮಲ್ ವೇರ್‌ಗಳನ್ನು ಮರಳಿ, ಮಿಕ್ಸ್ ಮ್ಯಾಚ್ ಮಾಡಿ ಧರಿಸಿ.
ಡ್ರೆಸ್‌ಕೋಡ್ ಜತೆಯಾಗಿಸಿಕೊಳ್ಳಿ
ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಭಾರವೇ ಇಲ್ಲದ ಕಾಶ್ಮೀರಿ ಲೈಟ್ ವೈಟ್ ಸ್ಟೆಟರ್, ಫರ್ ಜಾಕೆಟ್ಸ್, ಪ್ಲಮ್ ಫ್ರೊಸ್ಟ್ ಪುಲ್ಒವರ್ಸ್, ಲೇಡಿಸ್ ಪುಲ್ಒವರ್ಸ್, ಸ್ಲೀವ್ ಪುಲ್ಓವರ್ಸ್, ಕರ್ಲಿಕೌಲ್, ರಿವೆರ್ಸಿಬಲ್, ವೂಲ್ ಸ್ವಿಂಗ್ ಕೋಟ್, ಡಿಸೈನರ್ ವಿಂಟರ್ ಶರ್ಟ್ಸ್ ನಿಮ್ಮ ಡ್ರೆಸ್‌ಕೋಡ್ ಜತೆ ಆಯ್ಕೆ ಮಾಡಿಕೊಳ್ಳಿ.
ಬೆಚ್ಚಗಿಡುವ ಲೇಯರ್ ಲುಕ್‌ಗೆ ಸೈ ಎನ್ನಿ
ಲಾಂಗ್ ಸ್ಕರ್ಟ್‌ನೊಂದಿಗೆ ಜಾಕೆಟ್, ಸ್ಲೀವ್ಲೆಸ್ ಟಾಪ್‌ಗೆ ಜೀನ್ಸ್ ಜಾಕೆಟ್, ಜೀನ್ಸ್ ಪ್ಯಾಂಟ್‌ಗೆ ಫುಲ್ ಆರ್ಮ್ ಟಾಪ್, ಇಲ್ಲವೇ ಲೆದರ್ ಥೈ ಜಾಕೆಟ್, ಟರ್ಟಲ್‌ನೆಕ್ ಪುಲ್ ಓವರ್ಸ್, ಝಿಪ್ ಕೋಟ್ ಇದಕ್ಕೆ ಮ್ಯಾಚ್ ಆಗುವಂತೆ ಕಲರ್‌ಫುಲ್ ಸ್ಕಾರ್ಫ್, ಸ್ಟೋಲ್ ಮ್ಯಾಚ್ ಮಾಡಿ. ವಾರ್ಡ್ರೋಬ್‌ನಲ್ಲಿ ಅಡಗಿರುವ ಸ್ವೆಟರ್‌ಗಳನ್ನು ಏನು ಮಾಡೋಣಾ? ಎಂದು ಯೋಚಿಸಬೇಡಿ. ಹೊರತೆಗೆದು ಧರಿಸುವ ಉಡುಪಿಗೆ ತಕ್ಕಂತೆ ಕಾಂಟ್ರಸ್ಟ್ ಮ್ಯಾಚ್ ಮಾಡಿ ಧರಿಸಿ. ಜತೆಗೆ ನಯಾ ಲುಕ್ ನೀಡಲು ಸಿಲ್ಕ್ ಅಥವಾ ಕಾಟನ್ ಪ್ರಿಂಟ್ಸ್ ಇಲ್ಲವೇ, ವೆವ್ಸ್ ಪ್ರಿಂಟ್ಸ್ ಇರುವ ಸ್ಕಾರ್ಫ್ ಬಳಸಿ. ಸ್ಟ್ರೈಪ್ ಇರುವ ವುಲನ್ ಸ್ಟೋಲ್ಸ್ ಮ್ಯಾಚ್ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಯೋಚಿಸಿ ಆಯ್ಕೆ ಮಾಡಿ
ಚಳಿಗಾಲಕ್ಕೆ ಯಾವುದೇ ಜಾಕೆಟ್, ಸ್ವೆಟರ್ ಕೊಳ್ಳುವ ಮುನ್ನ ಕೆಲವು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಿ. ಕಣ್ಣಿಗೆ ರಾಚುವ ಅಭಾಸವಾಗುವ ಬಣ್ಣಬಣ್ಣದ ಸ್ವೆಟರ್‌ಗಳನ್ನು ಪುನರಾವರ್ತಿಸಬೇಡಿ. ಬಳಿ ಇರುವ ಉಡುಪುಗಳಿಗೆ ಮ್ಯಾಚ್ ಆಗುವಂತವನ್ನು ಕೊಳ್ಳಿ.
ಈ ಸುದ್ದಿಯನ್ನೂ ಓದಿ | Star Winter Fashion: ಹೀಗಿದೆ ನಟಿ ಭೂಮಿಕಾ ವಿಂಟರ್ ಸ್ಟೈಲ್ ಸ್ಟೇಟ್‌ಮೆಂಟ್ಸ್
ಯಾವುದೇ ಕಾರಣಕ್ಕೂ ಸೀರೆ ಜತೆ ಬಟನ್ ಇಲ್ಲದ ಪುಲ್ ಒವರ್ ಹೊಂದದು ಎಂಬುದು ನೆನಪಿರಲಿ. ಸಲ್ವಾರ್ ಹಾಗೂ ಚೂಡಿದಾರ್‌ಗಳಿಗೆ ಯಾವ ಬಗೆಯದ್ದಾದರೂ ಓಕೆ. ಕ್ಯಾಶುವಲ್ ಉಡುಪುಗಳಿಗೆ ಜಾಕೆಟ್ ಹಾಗೂ ಕೋಟ್ ಫರ್ಫೆಕ್ಟ್ ಚಾಯ್ಸ್ ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್.
(ಲೇಖಕಿ: ಫ್ಯಾಷನ್ ಪತ್ರಕರ್ತೆ)