ಮಲೆಮಹದೇಶ್ವರ ದೇವಾಲಯದ ಅರ್ಚಕ ಕುಸಿದುಬಿದ್ದು ಸಾವು
ಮಲೆಮಹದೇಶ್ವರ ದೇವಾಲಯದ ಅರ್ಚಕ ಕುಸಿದುಬಿದ್ದು ಸಾವು
Vishwavani News
July 19, 2022
ಮಲೆಮಹದೇಶ್ವರ ಬೆಟ್ಟ: ಪ್ರವಾಸಿ ಸ್ಥಳ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಅರ್ಚಕರೊಬ್ಬರು ಮಂಗಳವಾರ ಮುಂಜಾನೆ ಮಹದೇಶ್ವರ ಸ್ವಾಮಿಗೆ ಪೂಜೆ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ನಾಗಣ್ಣ (40) ಮೃತ ಪಟ್ಟ ಅರ್ಚಕ. ಒಂದೂವರೆ ವರ್ಷದ ಬಳಿಕ ಇವರಿಗೆ ಮಹದೇಶ್ವರನಿಗೆ ಪೂಜೆ ಸಲ್ಲಿಸುವ ಸರದಿ ಬಂದಿತ್ತು. ಮಂಗಳವಾರ ಬೆಳಿಗ್ಗೆ 4 ಗಂಟೆಗೆ ತೆರಳಿ ಪೂಜೆ ಮಾಡುವಾಗ ಹಠಾತ್ತಾಗಿ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಅವರನ್ನು ಆಂಬುಲೆನ್ಸ್‌ನಲ್ಲಿ ಹನೂರು ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆ ಅಸುನೀಗಿದರು ಎಂದು ಗೊತ್ತಾಗಿದೆ.