ಬಿಗ್‍ಬ್ಯಾಸ್ಕೆಟ್ ಗುಲ್ಬರ್ಗಾದಲ್ಲಿ ಆನ್‍ಲೈನ್ ದಿನಸಿ ಮಳಿಗೆ
ಬಿಗ್‍ಬ್ಯಾಸ್ಕೆಟ್ ಗುಲ್ಬರ್ಗಾದಲ್ಲಿ ಆನ್‍ಲೈನ್ ದಿನಸಿ ಮಳಿಗೆ
Vishwavani News
December 25, 2022
ನಗರದಲ್ಲಿ ಬಿಗ್‍ಬ್ಯಾಸ್ಕೆಟೀರ್‍ಗಳು ದೈನಂದಿನ ಬಳಕೆಯ 10,000 ಉತ್ಪನ್ನಗಳಿಂದ ಆಯ್ಕೆ ಮಾಡಿಕೊಳ್ಳಬಹುದು
ಗುಲ್ಬರ್ಗಾ/ಬೀದರ್: ಟಾಟಾ ಉದ್ಯಮ ಬಿಗ್‍ಬ್ಯಾಸ್ಕೆಟ್ ಇತ್ತೀಚೆಗೆ ಬೀದರ್ ಮತ್ತು ಗುಲ್ಬರ್ಗಾ ಮಾರುಕಟ್ಟೆಯನ್ನು ಪ್ರವೇಶಿಸಿದೆ ಮತ್ತು ಸ್ಥಳೀಯ ಜನರಿಂದ ಬಹಳ ಬೇಗನೆ ಮೆಚ್ಚುಗೆಗೆ ಪಾತ್ರವಾಗಿದೆ.
ನಗರದ ಗ್ರಾಹಕರು ಈಗ ಅಕ್ಕಿ, ಬೇಳೆ, ಎನ್ಣೆ ಮತ್ತು ಮಸಾಲೆಗಳು, ವೈಯಕ್ತಿಕ ಆರೈಕೆ, ಅಡುಗೆಮನೆ ಹಾಗೂ ಗೃಹ ಉತ್ಪನ್ನಗಳನ್ನು ಒಳಗೊಂಡು ವಿಸ್ತಾರ ಶ್ರೇಣಿಯ ಉತ್ಪನ್ನಗಳನ್ನು ಪ್ರತಿಯೊಂದಕ್ಕೂ ಶೇ.6ರಷ್ಟು ಕಡಿತದೊಂದಿಗೆ ಪಡೆಯುತ್ತಿದ್ದು ಆ್ಯಪ್ ಮೂಲಕ ಆರ್ಡರ್ ಮಾಡುತ್ತಿದ್ದಾರೆ. ಗುಲ್ಬರ್ಗಾ ಬಿಗ್‍ಬ್ಯಾಸ್ಕೆಟ್‍ನ ತೀವ್ರವಾಗಿ ಬೆಳೆಯುತ್ತಿರುವ ಬೀದರ್, ವಾರಂಗಲ್ ಮತ್ತು ಹನುಮಕೊಂಡ ಟೈಯರ್ 2 ಮತ್ತು ಟೈಯರ್ 3 ನಗರಗಳ ಜಾಲದಲ್ಲಿ ಸೇರಿದೆ.
ಬೀದರ್ ವಿಶಾಲವಾದ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ವೇಗವಾಗಿ ನಗರೀಕರಣಗೊಳ್ಳುತ್ತಿರುವ ನಗರವಾಗಿದೆ.
ಗುಲ್ಬರ್ಗಾವು ಕಲಬುರಗಿ ಜಿಲ್ಲೆಯ ಆಡಳಿತ ಕೇಂದ್ರ ಸ್ಥಾನವಾಗಿದೆ ಮತ್ತು ಉತ್ತರ ಕರ್ನಾಟಕದಲ್ಲಿ ಅತ್ಯಂತ ದೊಡ್ಡ ನಗರ ವಾಗಿದೆ. ಮನೆಬಾಗಿಲಿನ ಪೂರೈಕೆ ಅಲ್ಲದೆ ಬಿಗ್‍ಬ್ಯಾಸ್ಕೆಟ್ 10,000ಎಸ್‍ಕೆಯುಗಳ ಸರಿಸಾಟಿ ಇರದ ವ್ಯಾಪ್ತಿ ಹೊಂದಿದೆ. ಈ ಪ್ಲಾಟ್‍ಫಾರಂ ಬೇಗನೆ ಪೂರೈಕೆ, ಸುರಕ್ಷತೆ ಮತ್ತು ಎಲ್ಲ ದೈನಂದಿನ ಅಗತ್ಯಗಳನ್ನು ಪೂರೈಸುವ ವಿಸ್ತಾರ ಶ್ರೇಣಿಯ ಉತ್ಪನ್ನ ಗಳನ್ನು ಹೊಂದಿದೆ.
ಬೀದರ್ ಮತ್ತು ಗುಲ್ಬರ್ಗಾದಲ್ಲಿ ಬಿಗ್‍ಬ್ಯಾಸ್ಕೆಟ್ ವಿಸ್ತರಣೆ ಕುರಿತು ಬಿಗ್‍ಬ್ಯಾಸ್ಕೆಟ್ ಬಿಸಿನೆಸ್ ಹೆಡ್ ಶ್ರೀ ಹರ್ಷಜೆಟ್ಟಿ, “ನಾವು ಭಾರತೀಯ ಗ್ರಾಹಕರ ದೈನಂದಿನ ಅಗತ್ಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ ಮತ್ತು ನಮ್ಮ ಸೇವೆಗಳನ್ನು ಗುಲ್ಬರ್ಗಾ ನಗರದ ಜನರಿಗೆ ವಿಸ್ತರಿಸಲು ಹೆಮ್ಮೆ ಪಡುತ್ತೇವೆ. ಕಳೆದ ಕೆಲ ತಿಂಗಳುಗಳಿಂದ ನಮ್ಮ ವ್ಯಾಪ್ತಿ ವಿಸ್ತರಿಸಲು ನಾವು ಶಕ್ತರಾಗಿದ್ದೇವೆ ಎಂದು ಪ್ರಕಟಿಸಲು ನಾವು ಸಂತೋಷ ಹೊಂದಿದ್ದೇವೆ. ನಾವು ಸಕಾಲಿಕ ಪೂರೈಕೆ, ಹಿಂದಿರುಗಿಸಿದಾಗ ಯಾವ ಪ್ರಶ್ನೆಗಳನ್ನೂ ಕೇಳದೇ ಇರುವ ನೀತಿ ಮತ್ತು ವಿಸ್ತಾರ ಶ್ರೇಣಿಯ ಉತ್ಪನ್ನಗಳ ಲಭ್ಯತೆ ಅಲ್ಲದೆ ಸ್ಪರ್ಧಾತ್ಮಕ ಬೆಲೆಗಳನ್ನು ನೀಡುವುದು ನಮಗೆ ಅತ್ಯುತ್ತಮ ಉಳಿಸಿಕೊಳ್ಳುವ ಪ್ರಮಾಣಗಳು ಮತ್ತು ಬ್ಯಾಸ್ಕೆಟ್ ಗಾತ್ರ ಕಾಪಾಡಿಕೊಳ್ಳಲು ನೆರವಾಗಿದೆ. ಈ ಎಲ್ಲವೂ ಮನೆಯ ಅನುಕೂಲ ಮತ್ತು ಸುರಕ್ಷತೆಯಲ್ಲಿ ಲಭ್ಯಾಗುತ್ತಿದ್ದು ನಮ್ಮ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಮುಂದೆ ನಾವು ಇತರೆ ನಗರಗಳಿಗೂ ವಿಸ್ತರಿಸುವ ಗುರಿ ಹೊಂದಿದ್ದೇವೆ” ಎಂದರು.
ಬಿಗ್‍ಬ್ಯಾಸ್ಕೆಟ್ ಪ್ರಸ್ತುತ ಭಾರತದಲ್ಲಿ 400ಕ್ಕೂ ಹೆಚ್ಚು ನಗರಗಳಲ್ಲಿ ವಿಸ್ತರಿಸಿದೆ ಮತ್ತು ಆನ್‍ಲೈನ್ ದಿನಸಿ ಪೂರೈಕೆ ಮಾರುಕಟ್ಟೆ ಯಲ್ಲಿ ಪ್ರತಿ ನಗರದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರತಿನಿತ್ಯ ಪೂರೈಸುವ ಮೂಲಕ ಸತತವಾಗಿ ಉನ್ನತ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಮೂಲಕ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿದೆ. ಪ್ರತಿ ತಿಂಗಳು 15 ಮಿಲಿಯನ್‍ಗೂ ಹೆಚ್ಚು ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಕಂಪನಿಯ ಪ್ರಸ್ತುತ ಆದಾಯ 1.2 ಬಿಲಿಯನ್ ಡಾಲರ್ ಗಳಾಗಿವೆ.