ಇಬ್ಬರು ಪ್ರೇಮಿಗಳ ಆತ್ಮಹತ್ಯೆ
ಇಬ್ಬರು ಪ್ರೇಮಿಗಳ ಆತ್ಮಹತ್ಯೆ
Vishwavani News
November 10, 2022
ರಾಯಚೂರು : ಜಿಲ್ಲೆಯ ಮಸ್ಕಿ ತಾಲೂಕಿನ ಕುಣೆಕೆಲ್ಲೂರು (ಹಳ್ಳಿ) ಗ್ರಾಮದಲ್ಲಿ ಪ್ರೇಮಿಗಳಾದ ಮೇಘನಾ (18) ಮುತ್ತಣ್ಣ ನಾಯ್ಕ್ (19) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಮಾರು ಆರು ತಿಂಗಳುಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಗಳ ಬಗ್ಗೆ ಕೆಲದಿನಗಳ ಹಿಂದೆ ಮನೆಯಲ್ಲಿ ಪ್ರೀತಿ ವಿಚಾರ ತಿಳಿದಿತ್ತು. ಇದರ ಬೆನ್ನಲ್ಲೇ ತಡರಾತ್ರಿ ಬಾವಿಗೆ ಹಾರಿ ಮೇಘನಾ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಪ್ರೀಯಕರ ಮುತ್ತಣ್ಣ ಸಹ ಆತ್ಮಹತ್ಯೆ ಮಾಡಿಕೊಂಡಿ ದ್ದಾನೆ.
ಮೀನಿಗೆ ಆಹಾರ ಹಾಕುವ ನೆಪ ಹೇಳಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮುತ್ತಣ್ಣ ಹೊಲದಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಲತಃ ಹುನಗುಂದ ತಾಲೂಕಿನ ನಿವಾಸಿ ಮುತ್ತಣ್ಣ ಕುಣೆಕೆಲ್ಲೂರು ನಲ್ಲಿ ಅತ್ತೆ ಮನೆಯಲ್ಲಿ ವಾಸವಿದ್ದನು ಎಂದು ತಿಳಿದುಬಂದಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.