ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಣಿಪಾಲ ದಂತ ಸಮ್ಮೇಳನ 4.0-2025 ನಾಲ್ಕನೇ ದಂತ ಸಮ್ಮೇಳನಕ್ಕೆ ವೇದಿಕೆಯಾದ ಮಣಿಪಾಲ

ವಿದ್ಯಾರ್ಥಿಗಳೇ ನೇತೃತ್ವ ವಹಿಸುವ ಈ ಸಮ್ಮೇಳನದಲ್ಲಿ ಆರು ರಾಜ್ಯಗಳ 25 ದಂತ ವೈದ್ಯಕೀಯ ಕಾಲೇಜುಗಳಿಂದ ಬಂದ 350 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದರು. ಶೈಕ್ಷಣಿಕ ಮತ್ತು ಪ್ರಾಯೋ ಗಿಕ ಜ್ಞಾನವನ್ನು ಸಮಗ್ರವಾಗಿ ಒದಗಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಗಮನ ಸೆಳೆಯಿತು. ಭಾರೀ ಮಳೆಯ ನಡುವೆಯೂ, ವೈಜ್ಞಾನಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಭಾಗವಹಿಸುವವರು ಉತ್ಸಾಹದಿಂದ ಮಣಿಪಾಲ ಕ್ಯಾಂಪಸ್ಸಿಗೆ ಆಗಮಿಸಿದರು.

ನಾಲ್ಕನೇ ದಂತ ಸಮ್ಮೇಳನಕ್ಕೆ ವೇದಿಕೆಯಾದ ಮಣಿಪಾಲ

Profile Ashok Nayak Jul 17, 2025 11:51 AM

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಯ ಘಟಕವಾದ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ನಲ್ಲಿ (ಎಂ ಸಿ ಓ ಡಿ ಎಸ್), ನಾಲ್ಕನೇ ದಂತ ಸಮ್ಮೇಳನ ಮಣಿಪಾಲ ದಂತ ಸಮ್ಮೇಳನ 4.0(ಎಂ ಡಿ ಸಿ) ಅತ್ಯಂತ ಯಶಸ್ವಿಯಾಗಿ ನೆರವೇರಿತು. ಇದೊಂದು ಆರಂಭದಿಂದಲೂ ನಿರಂತರವಾಗಿ ಪ್ರಾಮುಖ್ಯತೆಯನ್ನು ಗಳಿಸಿರುವ ಪದವಿ ಹಂತದಲ್ಲಿರುವ ವೈಜ್ಞಾನಿಕ ಸಭೆಯಾಗಿದೆ.

ಜುಲೈ 14 ಮತ್ತು 15 ರಂದು ಎರಡು ದಿನಗಳ ಕಾಲ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಕ್ಯಾಂಪಸ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇಶಾದ್ಯಂತದಿಂದ ಹಲವಾರು ಯುವ ದಂತ ವೈದ್ಯಕೀಯ ವಿದ್ಯಾರ್ಥಿಗಳು ಉತ್ಸಾಹಭರಿತವಾಗಿ ಭಾಗವಹಿಸಿದರು.

ವಿದ್ಯಾರ್ಥಿಗಳೇ ನೇತೃತ್ವ ವಹಿಸುವ ಈ ಸಮ್ಮೇಳನದಲ್ಲಿ ಆರು ರಾಜ್ಯಗಳ 25 ದಂತ ವೈದ್ಯಕೀಯ ಕಾಲೇಜುಗಳಿಂದ ಬಂದ 350 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದರು. ಶೈಕ್ಷಣಿಕ ಮತ್ತು ಪ್ರಾಯೋಗಿಕ ಜ್ಞಾನವನ್ನು ಸಮಗ್ರವಾಗಿ ಒದಗಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಗಮನ ಸೆಳೆಯಿತು. ಭಾರೀ ಮಳೆಯ ನಡುವೆಯೂ, ವೈಜ್ಞಾನಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಭಾಗವಹಿಸುವವರು ಉತ್ಸಾಹದಿಂದ ಮಣಿಪಾಲ ಕ್ಯಾಂಪಸ್ಸಿಗೆ ಆಗಮಿಸಿದರು.

ಇದನ್ನೂ ಓದಿ: Vishweshwar Bhat Column: ವಿಮಾನ ನಿರ್ವಹಣಾ ತಂತ್ರಜ್ಞರು

ಉದ್ಘಾಟನಾ ಸಮಾರಂಭವು ಹಲವಾರು ಗಣ್ಯರ ಸಮ್ಮುಖದಲ್ಲಿ ನೆರವೇರಿತು. ಮಾಹೆಯ ಮಂಗ ಳೂರು ಕ್ಯಾಂಪಸ್‌ನ ಪ್ರೊ ವೈಸ್ ಚಾನ್ಸೆಲರ್ ಡಾ. ದಿಲೀಪ್ ಜಿ. ನಾಯ್ಕ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯದ ಪ್ರತಿನಿಧಿ ಡಾ. ಶಿವಶರಣ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮವು ದೀಪ ಪ್ರಜ್ವಲನ ಮತ್ತು ಭಾವಪೂರ್ಣ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.

ಮುಖ್ಯ ಅತಿಥಿ ಡಾ. ಶಿವಶರಣ್ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ದಂತಚಿಕಿತ್ಸೆಯಲ್ಲಿ ಜೀವನಪೂರ್ತಿ ಕಲಿಕೆ ಹಾಗೂ ನಿರಂತರ ವಿದ್ಯಾಭ್ಯಾಸದ ಮಹತ್ವವನ್ನು ಒತ್ತಿಹೇಳಿದರು. ಡಾ. ದಿಲೀಪ್ ಜಿ. ನಾಯ್ಕ್ ಅವರು ಮಾಹೆ ಸಂಸ್ಥೆಯ ಶೈಕ್ಷಣಿಕ ನವೀನತೆ ಮತ್ತು ನಿರಂತರ ಪ್ರಗತಿಪಥದ ಬದ್ಧತೆಯನ್ನು ತಮ್ಮ ಭಾಷಣದಲ್ಲಿ ಹಿರಿದಾಗಿ ವಿವರಿಸಿದರು.

ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ನ ಡೀನ್ ಡಾ. ಗೋಪಾಲಕೃಷ್ಣನ್ ಧರ್ಮರಾಜನ್ ಅವರು ಕಾರ್ಯಕ್ರಮಕ್ಕೆ ಗಣ್ಯರನ್ನು ಸ್ವಾಗತಿಸಿದರು. ಅಸೋಸಿಯೇಟ್ ಡೀನ್ ಡಾ. ಶಶಿ ರಶ್ಮಿ ಆಚಾರ್ಯ ಅವರು ಸಮ್ಮೇಳನದ ಪೂರ್ಣ ಅವಲೋಕನವನ್ನು ನೀಡಿದರು. ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಡಾ. ನಿಹಾಲ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

ಮಣಿಪಾಲ ದಂತ ಸಮ್ಮೇಳನ 4.0 ರ ವೈಜ್ಞಾನಿಕ ಕಾರ್ಯಕ್ರಮದಲ್ಲಿ ಸಮಕಾಲೀನ ವಿಷಯಗಳ ಕುರಿತಾಗಿ ಖ್ಯಾತ ತಜ್ಞರಿಂದ ಏಳು ಅತ್ಯಂತ ಪ್ರಯೋಜನಕಾರಿ ಉಪನ್ಯಾಸಗಳು ಜರಗಿದವು. ಈ ಉಪನ್ಯಾಸಗಳ ಜೊತೆಗೆ ಹಲವು ಶೈಕ್ಷಣಿಕ ಸ್ಪರ್ಧೆಗಳು ಮತ್ತು ಐದು ಪ್ರಾಯೋಗಿಕ ಕಾರ್ಯಾಗಾರಗಳು ನಡೆದವು. ಇವುಗಳಲ್ಲಿ ವಿದ್ಯಾರ್ಥಿಗಳು ವಿವಿಧ ದಂತ ಚಿಕಿತ್ಸಾ ತಂತ್ರಗಳಲ್ಲಿ ಪ್ರಾಯೋಗಿಕ ತರಬೇತಿಯನ್ನು ಪಡೆಯುವ ಅವಕಾಶವನ್ನು ಹೊಂದಿದರು. ಒಂದು ಚುರುಕಾದ ದಂತ ರಸಪ್ರಶ್ನೆ ಸ್ಪರ್ಧೆಯು ವಿದ್ಯಾರ್ಥಿಗಳ ಜ್ಞಾನ ಹಾಗೂ ಚಿಂತನಾ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಸಹಾಯ ಮಾಡಿತು.

ಮಣಿಪಾಲ ದಂತ ಸಮ್ಮೇಳನ 4.0ಇದರ ಭರ್ಜರಿ ಯಶಸ್ಸು, ಈ ಸಮ್ಮೇಳನವನ್ನು ಈ ಪ್ರದೇಶದ ಅತ್ಯಂತ ನಿರೀಕ್ಷಿತ ವಿದ್ಯಾರ್ಥಿ ಚಾಲಿತ ದಂತ ಸಮ್ಮೇಳನಗಳ ಪೈಕಿ ಒಂದಾಗಿ ಮತ್ತೊಮ್ಮೆ ಸಾಬೀತು ಪಡಿಸಿದೆ. ಸಹಭಾಗಿತ್ವ, ಸಹವರ್ತಿ ಕಲಿಕೆ ಮತ್ತು ಅತ್ಯಾಧುನಿಕ ಪ್ರಗತಿ ತಂತ್ರಜ್ಞಾನ ಕಲಿಕೆಗಳಿಗೆ ವಿದ್ಯಾರ್ಥಿಗಳು ಒಡ್ಡಿಕೊಳ್ಳುವುದನ್ನು ಉತ್ತೇಜಿಸುತ್ತದೆ. ಈ ಮೂಲಕ, ಸಮ್ಮೇಳನವು ಪದವಿ ಹಂತದಲ್ಲಿರುವ ದಂತ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೈದ್ಯಕೀಯ ನೈಪುಣ್ಯವನ್ನು ರೂಪಿಸುವ ಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ.