ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಟಗುಳಿ ಪ್ರಕರಣದಲ್ಲಿ ದಾಖಲಾಗಿದ್ದ ಎಫ್.ಐ.ಆರ್‌ ರದ್ದು ಮಾಡಿದ ಹೈ-ಕೋರ್ಟ್

ಶಿರಸಿಯ ಇಟಗುಳಿ ಗ್ರಾಮದ ರಾಮಚಂದ್ರ ವಿಠಲ್ ಹೆಗಡೆ ಅವರ ಮನೆಯಲ್ಲಿ ಗ್ರಾಮೀಣ ಪೊಲೀಸರು ಏಪ್ರಿಲ್ 9 ರಂದು ಅಂದರ್ ಬಾಹರ್ ಆಡುತ್ತಿರುವುದಾಗಿ ಆರೋಪಿಸಿ ರೈಡ್ ಮಾಡಿ ಒಟ್ಟು 13 ಜನರ ಮೇಲೆ FIR ದಾಖಲಿಸಿದ್ದರು. ಇದನ್ನು ಹೈ ಕೋರ್ಟ್ನಲ್ಲಿ ಎಲ್ಲಾ ಆರೋಪಿಗಳು ಪ್ರಶ್ನಿಸಿದರು

ಇಟಗುಳಿ ಪ್ರಕರಣದಲ್ಲಿ ದಾಖಲಾಗಿದ್ದ FIR ರದ್ದು ಮಾಡಿದ ಹೈ-ಕೋರ್ಟ್

Profile Ashok Nayak May 21, 2025 6:21 PM

ಶಿರಸಿ: ಶಿರಸಿಯ ಇಟಗುಳಿ ಗ್ರಾಮದ ರಾಮಚಂದ್ರ ವಿಠಲ್ ಹೆಗಡೆ ಅವರ ಮನೆಯಲ್ಲಿ ಗ್ರಾಮೀಣ ಪೊಲೀಸರು ಏಪ್ರಿಲ್ 9 ರಂದು ಅಂದರ್ ಬಾಹರ್ ಆಡುತ್ತಿರುವುದಾಗಿ ಆರೋಪಿಸಿ ರೈಡ್ ಮಾಡಿ ಒಟ್ಟು 13 ಜನರ ಮೇಲೆ FIR ದಾಖಲಿಸಿದ್ದರು. ಇದನ್ನು ಹೈ ಕೋರ್ಟ್ನಲ್ಲಿ ಎಲ್ಲಾ ಆರೋಪಿಗಳು ಪ್ರಶ್ನಿಸಿದರು. ಪ್ರಕರಣದ ವಿಚಾರಣೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠ, ಮೇ15 ರಂದು ಕೈಗೆತ್ತಿಕೊಂಡಿತು.

ಇದನ್ನೂ ಓದಿ: Karnataka High Court: ವ್ಹೀಲಿಂಗ್‌ ಮಾಡುವವರೇ ಎಚ್ಚರಿಕೆ, ನಿಮಗೆ ಜಾಮೀನು ಕೂಡ ಸಿಗೊಲ್ಲ!

ಆರೋಪಿಗಳ ಪರವಾಗಿ ವಾದ ಮಂಡಿಸಿದ ವಕೀಲ ಸೌರಭ ಹೆಗಡೆ, ಹೂಡ್ಲಮನೆ, ಪೊಲೀಸರು ದಾಖಲಿಸಿರುವ FIR ಕಾನೂನು ಬಾಹಿರವೆಂದು ಕೋರ್ಟ್ನ ಮನವಲಿಸಿದರು. ಇದರಿಂದಾಗಿ ಹೈ ಕೋರ್ಟ್ ಆರೋಪಿಗಳ ವಿರುದ್ಧ ದಾಖಲಾಗಿದ್ದ FIR ರದ್ದು ಮಾಡಿ ಆದೇಶಿಸಿತು.