Sirsi News: ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ವಿರುದ್ಧ ದೂರು
ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ತೆರಳಿ ನಗರ ಠಾಣೆಯಲ್ಲಿ ದೂರು ದಾಖಲಿಸಿಲಾಗಿದೆ. ಶಿರಸಿಯಲ್ಲಿ ಕರವೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲೆಗೆ ಯತ್ನಿಸಿದರೆ ರಕ್ತಕ್ರಾಂತಿ ಎಂದು ಬೆದರಿಕೆ ಹಾಕಿದ್ದು, ಹಿಂಸಾತ್ಮಕ ಶಬ್ದ ಉಪಯೋಗಿಸಿ ಸಮಾಜದಲ್ಲಿ ಶಾಂತಿ
Ashok Nayak
December 14, 2024
ಶಿರಸಿ: ಪ್ರತ್ಯೇಕ ಜಿಲ್ಲೆಗೆ ಯತ್ನಿಸಿದರೆ ರಕ್ತಕ್ರಾಂತಿ ಎಂದು ಬೆದರಿಕೆ ಹಾಕಿರುವ ಕರ್ನಾಟಕ ರಕ್ಷಣ ವೇಧಿಕೆ ಅಧ್ಯಕ್ಷ ಭಾಸ್ಕರ ಪಟಗಾರ ವಿರುದ್ಧ ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣ ಟ್ರಸ್ಟ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ.
ಟ್ರಸ್ಟ್ ಅಧ್ಯಕ್ಷರಾದ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ತೆರಳಿ ನಗರ ಠಾಣೆಯಲ್ಲಿ ದೂರು ದಾಖಲಿಸಿಲಾಗಿದೆ. ಶಿರಸಿಯಲ್ಲಿ ಕರವೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲೆಗೆ ಯತ್ನಿಸಿದರೆ ರಕ್ತಕ್ರಾಂತಿ ಎಂದು ಬೆದರಿಕೆ ಹಾಕಿದ್ದು, ಹಿಂಸಾತ್ಮಕ ಶಬ್ದ ಉಪಯೋಗಿಸಿ ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆ ನೀಡಿದ್ದಾರೆ.
ಇದರಿಂದ ಈ ಕೂಡಲೇ ಅವರನ್ನು ಬಂಧಿಸುವಂತೆ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ನೇತೃತ್ವದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.