Sirsi News: ಆಹಾರಧಾನ್ಯದಲ್ಲೂ ಸ್ವಾವಲಂಬಿ ಗಳಾಗಿಲ್ಲ: ಕೆ.ಎಸ್.ಅಶೋಕ ಕುಮಾರ್
ನಗರದ ಅರಣ್ಯ ಭವನದಲ್ಲಿನಡೆದ ದ ಶಿರಸಿ ಅರ್ಬನ್ ಬ್ಯಂಕ್ ನ ಸಂಸ್ಥಾಪಕ ಅಧ್ಯಕ್ಷ ಡಾ.ವಿ ಎಸ್ ಸೋಂದೆಯವರ ಸ್ಮರಣಾರ್ಥ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
Ashok Nayak
January 11, 2025
ಶಿರಸಿ: ಗೋಧಿ, ಅಕ್ಕಿ ರಾಗಿ ಹೊರತಾಗಿ ನಾವಿನ್ನೂ ಯಾವ ಆಹಾರಧಾನ್ಯದಲ್ಲೂ ಸ್ವಾವಲಂಬಿಗಳಾಗಿಲ್ಲ. ಇವೆಲ್ಲ ಹೇಳುವುದಕ್ಕಷ್ಟೆ ಬೆಳೆವಣಿಗೆ ಕಂಡಿದ್ದೇವೆ. ರಾಜಕಾರಣಿಗಳಂತೆ ಅಧಿಕಾರಿಗಳೂ ಮೆಚ್ಚುಗೆ ಗಳಿಸುವುದಕ್ಕೆ ನಾವು ಅಭಿವೃದ್ಧಿಯಾಗಿರುವುದಾಗಿ ಹೇಳುತ್ತಾರೆ. ಆದರೆ ನಾವಿನ್ನೂ ಹಿಂದೆ ಬಿದ್ದಿದ್ದೇವೆ ಎಂದು ಉಪನ್ಯಾಸಕ ಕೆ.ಎಸ್. ಅಶೋಕ ಕುಮಾರ್ ಹೇಳಿದರು.
ಅವರು ಶನಿವಾರ ನಗರದ ಅರಣ್ಯ ಭವನದಲ್ಲಿನಡೆದ ದ ಶಿರಸಿ ಅರ್ಬನ್ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಡಾ.ವಿ ಎಸ್ ಸೋಂದೆಯವರ ಸ್ಮರಣಾರ್ಥ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಬಳಸುವ ಎಣ್ಟೆ ಪದಾರ್ಥಗಳು ಇಂದು ನಮ್ಮ ದೇಶದಲ್ಲೆಲ್ಲ ಇಲ್ಲ. ಎಲ್ಲವನ್ನು ನಾವು ಆಮದು ಮಾಡಿ ಕೊಳ್ಳಬೇಕು. ನಾವು ನಮಗೆ ಬೇಕಾಗುವ ಎಲ್ಲ ಆಹಾರ ಪದಾರ್ಥಗಳನ್ನೂ ಸಹ ನಾವು ಬೆಳೆಯುವ ಸ್ಥಿತಿಯಲ್ಲಿಲ್ಲ. ಬೆಳೆಯುತ್ತಿಲ್ಲವೆಂದು ವಿಷಾದಿಸಿದರು.
ಈಗಾಗಲೇ ವಯಸ್ಕರನ್ನೇ ಹೊಂದಿದ ನಾಲ್ಕನೆ ದೇಶ ನಮ್ಮದು. ಯುವ ಸಮುದಾಯ ನಮ್ಮಲ್ಲಿ ಹೆಚ್ಚಿಗೆ ಇದೆ ಎನ್ನುವ ಭ್ರಮೆಯಿಂದ ನಾವು ಹೊರಗೆ ಬರಬೇಕಿದೆ. ನಮಗಮಲ್ಲಿ ಯುವ ಸಂಖ್ಯ ಅತೀ ಕಡಿಮೆ ಇದೆ ನಾವು ಇನ್ನಾದರೂ ಎಚ್ಚೆತ್ತುಕೊಳ್ಳಬೆರಕು ಎಂದರು.
ಇದನ್ನೂ ಓದಿ: #sirsi