Bisiyuta: ತಾಲೂಕಿನಲ್ಲಿ ಹಳ್ಳ ಹಿಡಿದ ಬಿಸಿಯೂಟ ಯೋಜನೆ
Bisiyuta: ತಾಲೂಕಿನಲ್ಲಿ ಹಳ್ಳ ಹಿಡಿದ ಬಿಸಿಯೂಟ ಯೋಜನೆ
Ashok Nayak
December 22, 2024
ಶರಣಬಸಪ್ಪಾ .ಎನ್ ಕೆಇಂಡಿ: ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಿಸಿ ಸದೃಢ ಶರೀರದಲ್ಲಿ ಸದೃಢ ಮನಸ್ಸು ಇರುತ್ತದೆ ಎಂಬ ಸದಾಶಯ ದೊಂದಿಗೆ ಸರಕಾರ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಾರಂಭಿಸಿದೆ. ಆದರೆ ತಾಲೂಕಿನ ಸರಕಾರಿ ಶಾಲೆಗಳಲ್ಲಿ ಒದಗಿಸುತ್ತಿರುವ ಕ್ಷೀರ ಭಾಗ್ಯ ಯೋಜನೆ ಕಳೆದ ೪-೫ ತಿಂಗಳುಗಳಿಂದ ಸರಿಯಾಗಿ ವಿತರಣೆ ಮಾಡದೆ ಹಳ್ಳ ಹಿಡಿದಿದೆ ಎಂಬ ಆರೋಪಗಳು ಕೇಳಿ ಬಂದಿದೆ.ಹೌದು. ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಿ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಸರಕಾರ ಮಧ್ಯಾಹ್ನ ಬಿಸಿಯೋಟ ಯೋಜನೆ ಪ್ರಾರಂಭಿಸಿದೆ. ಆದರೆ ತಾಲೂಕಿನ ಸರಕಾರಿ ಶಾಲೆಗಳಲ್ಲಿ ಕ್ಷೀರ ಭಾಗ್ಯ ಯೋಜನೆ (ಹಾಲು) ಸಮಪರ್ಕ ವಿತರಣೆ ಮಾಡದೆ ಇರುವದರಿಂದ ಎಲ್ಲವು ಇಲ್ಲಗಳ ಮಧ್ಯ ನಡೆದಿರುವುದು ಖೇದಕರ ಸಂಗತಿ. ಶಾಲೆಗಳಲ್ಲಿ ಹಾಲು ವಿತರಣೆ ಸರಿಯಾದ ಸಮಯಕ್ಕೆ ಅಂದರೆ ಪ್ರತಿ ತಿಂಗಳು ವಿತರಣೆ ಮಾಡಿದರೆ ಯಾವುದೇ ಸಮಸ್ಯ ಬರುವುದಿಲ್ಲ ಒಂದು ತಿಂಗಳು ವಿತರಣೆ ಮಾಡಿ ಮತ್ತೆ 2 ತಿಂಗಳು 3 ತಿಂಗಳಿಗೆ ವಿತರಣೆ ಮಾಡುವು ದರಿಂದ ಗಟ್ಟಿಯಾದ ಹಾಲು ವಿತರಣೆ ಮಾಡುವದರ ಬದಲು ಹಾಲಿನಲ್ಲಿ ನೀರು ಕಲಬೆರಿಕೆ ಮಾಡಿ ಮಕ್ಕಳಿಗೆ ವಿತರಣೆ ಮಾಡುವದರಿಂದ ಹಾಲಿನ ಗುಣಮಟ್ಟ ಕಳೆದುಕೊಂಡು ಮಕ್ಕಳು ಸೇವಿಸದೆ ಇರುವದರಿಂದ ಸರಕಾರದ ಯೋಜನೆ ಹಿನ್ನಡೆಯಾಗುತ್ತಿದೆ. ತಾಲೂಕಿನಾದ್ಯಂತ ಕೆಲ ಶಾಲೆಗಳಿಗೆ ಅಗಸ್ಟ್, ಸೆಪ್ಟಂಬರ್, ಅಕ್ಟೋಬರ್ ನಿಂದ ಹಾಲು ವಿತರಣೆ ಮಾಡದೆ ನವ್ಹೇಂಬರ್ ತಿಂಗಳ ಅಂತ್ಯದಲ್ಲಿ ವಿತರಣೆ ಮಾಡಿ ಕೈ ತೊಳೆದುಕೊಂಡಿದ್ದು ಹಿಂದಿನ ತಿಂಗಳುಗಳ ಹಾಲಿನ ಪೌಡರ್ ಎಲ್ಲಿ ಹೋಯಿತು ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಅಕ್ಷರ ದಾಸೋಹ ಯೋಜನಾಧಿಕಾರಿಗಳಿಗೆ ತಾಲೂಕಿನ ಬಿಸಿಯೂಟ ಸಮಸ್ಯಗಳ ಕುರಿತು ಮಾಹಿತಿ ಕೇಳಲು ಅನೇಕ ಬಾರಿ ಕರೆ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ.*
ತಾಲೂಕಾಡಳಿತ ಪ್ರತಿಯೋಬ್ಬ ಅಧಿಕಾರಿಗಳು ಸಾಮಾನ್ಯ ಜನರ ಸಮಸ್ಯಗಳನ್ನು ಆಲಿಸಿ ಪರಿಹಾರ ನೀಡಬೇಕು. ಪ್ರತಿಯೋಂದು ಇಲಾಖೆಯ ಅಧಿಕಾರಿಗಳ ವರ್ಗಾಣೆಗೆ ನೈಯಾ ಪೈಸ್ ತಗೆದುಕೊಳ್ಳದೆ ತಾಲೂಕಿನಲ್ಲಿ ಬ್ರಷ್ಠಾಚಾರ ರಹಿತ ಆಡಳಿತ ನಡೆಯಲಿ, ಸರಕಾರದ ಯೋಜನೆಗಳು ನಾನು ತರಬಹುದು ಆದರೆ ಸ್ಥಳೀಯ ಆಡಳಿತ ಜಾಗೃತ ಇರಲಿ ಎಂಬ ಉದ್ದೇಶದಿಂದ ಒಳ್ಳೆಯ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ತಾಲೂಕಿನಲ್ಲಿ ಯಾವುದೇ ಅಧಿಕಾರಿಗಳಿಂದ ಭ್ರಷ್ಠಾಚಾರ. ಅಧಿಕಾರ ದುರುಪಯೋಗ ಕಂಡು ಬಂದರೆ ಕಿಂಚಿತ್ತು ಸಹಿಸುವುದಿಲ್ಲ ಯಾರೇ ಇರಲಿ 24 ಗಂಟೆಯಲ್ಲಿ ಬೇರೆ ಕಡೆ ಕಳಿಸುತ್ತೇನೆ.ಶಾಸಕ ಯಶವಂತರಾಯಗೌಡ ವ್ಹಿ ಪಾಟೀಲ
ಅಕ್ಷರ ದಾಸೋಹ ಯೋಜನೆಗೆ ಪೂರೈಕೆಯಾಗುವ ಆಹಾರ ಧಾನ್ಯಗಳು ಸಂಪೂರ್ಣ ಕಳಪೆ ಮಟ್ಟದಾಗಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಜೂನ್ 2024 ರಿಂದ ಇಲ್ಲಿಯವರೆಗೆ ಪೌಢ ಶಾಲೆಗಳಿಗೆ ಆಹಾರ ಸರಬರಾಜು ಮಾಡಿಲ್ಲ. ಮೋಟ್ಟೆ ಅನುಧಾನ ಜಮೇ ಮಾಡಿಲ್ಲ, ಅಡುಗೆ ಪದಾರ್ಥದ ಹಣ ಕೂಡಾ ಜಮಾ ಮಾಡಿರುವುದಿಲ್ಲ ಇದಲ್ಲದೆ ಅಕ್ಷರ ದಾಸೋಹ ಯೋಜನೆ ತಾಲೂಕಾ ಅಧಿಕಾರಿಗಳು ಕೇವಲ ಅನುಧಾನಿತ ಶಾಲೆಗಳಿಗೆ ಮಾತ್ರ ಸಂದರ್ಶನ ಮಾಡುತ್ತಿರುವುದು ಸರಕಾರಿ ಶಾಲೆಗಳಿಗೆ ಭೇಟಿ ನೀಡಿಲ್ಲ ಎಂಬ ಆರೋಪ ಗಳು ತಾಕಿನಾದ್ಯಂತ ಹರಿದಾಡುತ್ತಿವೆ.