Mahatma Gandhi: ಮಹಾತ್ಮಾ ಗಾಂಧಿಜೀಯವರು ತ್ಯಾಗದ ಸಂಕೇತ: ಯಶವಂತರಾಯಗೌಡ ಪಾಟೀಲ
ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡ ಡಿ.27 ರಂದು ಬೆಳಗಾವಿಯಲ್ಲಿ ಜರುಗಲಿರುವ ಕಾಂಗ್ರೆಸ್ ಪಕ್ಷದ ಬೃಹತ್ ರಾಷ್ಟ್ರೀಯ ಸಮಾವೆಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ
Ashok Nayak
December 22, 2024
ಇಂಡಿ: ಕಾಂಗ್ರೆಸ್ ದೇಶದ ಸ್ವಾತಂತ್ರ್ಯ ಸಾರ್ವಭೌಮತೆಗಾಗಿ ಹಗಲೀರಳು ಶ್ರಮಿಸಿದ ಪಕ್ಷ ಮಹಾತ್ಮಾ ಗಾಂಧಿಜೀ ಯವರ ಅಧ್ಯಕ್ಷತೆಯಲ್ಲಿ 1924ರಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸಮಾವೇಶ ಅಂದು ಬೆಳಗಾವಿಯಲ್ಲಿ ನಡೆಯಿತು. ಅದರ ಸವಿನೆನಪಿಗಾಗಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಬೆಳಗಾವಿ ಕಾಂಗ್ರೆಸ್ ಅಧೀವೇಶನದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಶಾಸಕ ಯಶವಂತರಾಯಗೌಡ ಪಾಟೀಲ ಕಾರ್ಯಕರ್ತರಿಗೆ ತಿಳಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡ ಡಿ.27 ರಂದು ಬೆಳಗಾವಿಯಲ್ಲಿ ಜರುಗಲಿರುವ ಕಾಂಗ್ರೆಸ್ ಪಕ್ಷದ ಬೃಹತ್ ರಾಷ್ಟ್ರೀಯ ಸಮಾವೆಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ದೇಶ ಸ್ವಾತಂತ್ರ್ಯ ವಾಗಲು ಮಹಾತ್ಮಾಗಾಂಧಿಜೀಯವರ ಕೋಡುಗೆ ಅಪಾರವಾಗಿದ್ದು ಉಪ್ಪಿನ ಸತ್ಯಾಗ್ರಹದಂತ ಅನೇಕ ಹೋರಾಟ ಗಳನ್ನು ಮಾಡುವ ಮೂಲಕ ದೇಶದ ಜನರನ್ನು ಜಾಗೃತಗೊಳಿಸಿ ಸ್ವಾತಂತ್ರ್ಯ ಕ್ಕಾಗಿ ಒಗ್ಗೂಡಿಸಿದ್ದಾರೆ.
ಇಂತಹ ಅನೇಕ ಹೋರಾಟಗಳಿಂದ ಬ್ರೀಟೀಷರು ಆರ್ಥಿಕ ಹಿನ್ನಡೆಯಾಗಿ ದೇಶ ಬಿಟ್ಟು ಹೋಗಲು ಕಾರಣವಾಗಿದೆ. ಗಾಂಧಿಜೀ ಸತ್ಯ, ಅಂಹಿಸೆ ,ತ್ಯಾಗದ ಮೂಲಕ ದೇಶ ಸ್ವಾತಂತ್ರ್ಯ ಗೊಳಿಸಿದ್ದಾರೆ. ಇವರನ್ನು ಸ್ಮರಿಸುವುದು ಪ್ರತಿ ಭಾರತೀಯ ನಾಗರೀಕರ ಕರ್ತವ್ಯ. ಉನ್ನತ ಹುದ್ದೆಯಲ್ಲಿ ಇದ್ದ ಗಾಂಧೀಜಿಯವರು ಅದನ್ನು ತೈಜಿಸಿ ಜೀವನ ಮುಡಿಪಾಗಿಟ್ಟು ಬಟ್ಟೆ ಧರಿಸದ ಜನರನ್ನು ಕಂಡು ತಮ್ಮ ಮೈಲೆ ಬಟ್ಟೆ ಧರಿಸಲಿಲ್ಲ ಅಲ್ಲದೆ ಮಾಜಿ ಪ್ರಧಾನ ಮಂತ್ರಿ ಲಾಲಬಹದ್ದೂರ ಶಾಸ್ತಿçಯವರು ವೇತನ ಭತ್ಯ ಹೆಚ್ಚಿಗೆಯಾಗಿದೆ ಎಂದು ಹಿಂತಿರುಗಿಸಿದ್ದಾರೆ. ಇಂತಹ ಮಹಾನ್ ನಾಯಕರ ಆದರ್ಶಗಳು ನಾವೇಂದು ಮರೆಯಕೂಡದು ಎಂದರು.
ಜಾವೀದ ಮೋಮಿನ, ಪ್ರಶಾಂತ ಕಾಳೆ, ಭೀಮಣ್ಣಾ ಕೌಲಗಿ, ಜೆಟ್ಟೆಪ್ಪ ರವಳಿ, ಕಲ್ಲನಗೌಡ ಬಿರಾದಾರ, ಲಿಂಬಾಜಹಿ ರಾಠೋಡ, ಜಾಹಾಂಗೀರ ಸೌದಾಗರ. ಅಯುಬ ಬಾಗವಾನ, ಮಲ್ಲನಗೌಡ ಪಾಟೋಲ, ಬಾಬು ಸಾಹುಕಾರ ಮೇತ್ರಿ ,ಶಿವಯೋಗೇಪ್ಪ ಚವನಗೊಂಡ, ಱೀದ ಅರಬ, ನಿರ್ಮಲಾ ತಳಕಾರಿ, ಶೈಲಾ ಜಾಧವ, ಶೇಖರ ಶಿವಶರಣ, ಸುಗಂದಾ ಬಿರಾದಾರ, ಬಿ.ಸಿ ಸಾಹುಕಾರ, ಸಿದ್ದರಾಯ ಐರೋಡಗಿ, ಧರ್ಮರಾಜ ವಾಲೀಕಾರ, ಅಶೋಕ ಪ್ಯಾಟಿ, ಭೀಮಾಶಂಕರ ಮೂರಮನ್ ,ಮಂಜು ಕಾಮಗೊಂಡ, ಸತೀಶ ಹತ್ತಿ, ಮಲ್ಲು ಮಡ್ಡಿಮನಿ, ಸೋಮು ಮ್ಯಾಕೇರಿ ಉಪಸ್ಥಿತರಿದ್ದರು.