Bengaluru Crime News: ಪಿಸ್ತೂಲು ಹಿಡಿದು ಕ್ಲಬ್‌ಗೆ ನುಗ್ಗಿದ ಅಪರಿಚಿತ ವ್ಯಕ್ತಿ: ಪೊಲೀಸ್ ಅಲರ್ಟ್
ಪಬ್‌ಗೆ ನುಗ್ಗಿದ ಅಪರಿಚಿತ ವ್ಯಕ್ತಿಯ ಬಳಿ ಪಿಸ್ತೂಲ್ ಇರುವುದರಿಂದ ಈ ಪ್ರಕರಣವನ್ನು ತುಂಬಾ ಸೂಕ್ಷ್ಮವಾಗಿ ನಿಭಾಯಿಸಲಾಗುತ್ತಿದೆ. ಘಟನಾ ಸ್ಥಳದಲ್ಲಿ ಡ್ರೋನ್ ಹಾರಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳತನ ಅಥವಾ ದರೋಡೆಗೆ ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ವ್ಯಕ್ತಿಯೊಬ್ಬ ಪಿಸ್ತೂಲ್ (pistol) ಹಿಡಿದು ಪಬ್‌ಗೆ ಬಂದು ಆತಂಕ ಸೃಷ್ಟಿಸಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ (Bengaluru Crime News) ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ಎಲ್ಲೆಡೆ ಓಡಾಡುತ್ತಿದ್ದು, ಏಕಾಏಕಿ ರಾಜಾಜಿನಗರದಲ್ಲಿರುವ ಜಾಮಿಟ್ರಿ ಪಬ್‌ಗೆ ಬಂದಿದ್ದಾನೆ. ಪೊಲೀಸ್, ಬಾಂಬ್ ಸ್ಕ್ವಾಡ್ ಸ್ಥಳದಲ್ಲಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಪಬ್ನಲ್ಲಿ ಆತ ಅವಿತುಕೊಂಡಿದ್ದು, ಆತನನ್ನು ವಶಕ್ಕೆ ಪಡೆಯಲು ಪೊಲೀಸರು (Police alert) ಮುಂದಾಗಿದ್ದಾರೆ.
ಆತ ಪಬ್ನ ಒಳಗಡೆಯೇ ಅವಿತುಕೊಂಡಿದ್ದಾನೆ ಎನ್ನಲಾಗಿದ್ದು, ಆತನ ಬಳಿ ಪಿಸ್ತೂಲ್ ಇರುವುದರಿಂದ ಈ ಪ್ರಕರಣವನ್ನು ತುಂಬಾ ಸೂಕ್ಷ್ಮವಾಗಿ ನಿಭಾಯಿಸಲಾಗುತ್ತಿದೆ. ಘಟನಾ ಸ್ಥಳದಲ್ಲಿ ಡ್ರೋನ್ ಹಾರಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳತನ ಅಥವಾ ದರೋಡೆಗೆ ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಆಗಮಿಸಿದ್ದಾರೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಪಾಕಿಸ್ತಾನದಿಂದ ಸೈಬರ್ ದಾಳಿ ಸಾಧ್ಯತೆ: ಪೊಲೀಸ್ ಆಯುಕ್ತರ ಎಚ್ಚರಿಕೆ
ಬೆಂಗಳೂರು : ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ, ಪಾಕ್ ಮೂಲದ ಡಾರ್ಕ್‌ವೆಬ್ ದುಷ್ಕರ್ಮಿಗಳಿಂದ ಭಾರತದ ಬಳಕೆದಾರರ ಮೇಲೆ ಸೈಬರ್ ದಾಳಿ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದು, ಅಪರಿಚಿತ ಲಿಂಕ್, ಇ-ಮೇಲ್ ಗಳ ಮೇಲೆ ನಿಗಾವಹಿಸಿ, ಎಕ್ಸ್ ಕ್ಲೂಸಿವ್ ನ್ಯೂಸ್ ಲಿಂಕ್ ಗಳು ಹಾಗೂ ಎಪಿಕೆ ಫೈಲ್ಸ್, ಅಪರಿಚಿತ ಫಾರ್ವರ್ಡ್ ಲಿಂಕ್ ಕ್ಲಿಕ್ ಮಾಡದಂತೆ ಸೂಚನೆ ನೀಡಿದ್ದಾರೆ.
ನಾಗರಿಕರು ಜಾಗೃತರಾಗಿರುವಂತೆ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ವಾಟ್ಸ್ಯಾಪ್ ಸೆಕ್ಯೂರಿಟಿ ಅಪ್ಡೇಟ್ ಮಾಡಿಕೊಳ್ಳಲು ಸೂಚನೆ ಸಹ ನೀಡಲಾಗಿದೆ. ಹೆಚ್ಚಾಗಿ ಸುದ್ದಿಗಳ ಲಿಂಕ್‌ಗಳು ವಾಟ್ಸ್ಯಪ್‌ನಲ್ಲಿ ಶೇರ್ ಆಗುತ್ತಿವೆ. ಇವುಗಳಲ್ಲಿ ಹೆಚ್ಚಿನ ಪಾಲು ಫೇಕ್ ಆಗಿದ್ದು, ಇವುಗಳು ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಇವುಗಳ ಮೂಲಕ ಸೈಬರ್ ದಾಳಿ ನಡೆಸುವುದು ಸುಲಭವಾಗಿದೆ. ಇಂದು ಸೈಬರ್ ಕ್ರೈಮ್ ಪ್ರತಿ ಗ್ರಾಹಕನ ಮನೆ ಬಾಗಿಲನ್ನೂ ತಟ್ಟುತ್ತಿದೆ. ಎಲ್ಲರೂ ಈ ನಿಟ್ಟಿನಲ್ಲಿ ಎಚ್ಚರವಾಗಿರುವುದು ಅಗತ್ಯ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: New Rules: ಅಲರ್ಟ್...ಅಲರ್ಟ್! ರೈಲು ಪ್ರಯಾಣ, ಎಟಿಎಂ ಬಳಕೆ.. ನಾಳೆಯಿಂದ ಹೊಸ ನಿಯಮಗಳು ಅನ್ವಯ