Virat Kohli's Test retirement: ಕೊಹ್ಲಿ ಟೆಸ್ಟ್ ನಿವೃತ್ತಿ ಬೆನ್ನಲ್ಲೇ ಕೋಚ್ ಗಂಭೀರ್ ಭಾವುಕ ಪೋಸ್ಟ್
ಐಸಿಸಿ ಅಧ್ಯಕ್ಷ ಜಯ್ ಶಾ ಅವರು ವಿರಾಟ್ ಕೊಹ್ಲಿ ಅವರಿಗೆ ಟೆಸ್ಟ್ ಕ್ರಿಕೆಟ್‌ಗೆ ನೀಡಿದ ಕೊಡುಗೆಗಳಿಗೆ ಧನ್ಯವಾದ ಅರ್ಪಿಸಿದರು. "ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ವೃತ್ತಿಜೀವನವನ್ನು ಪ್ರದರ್ಶಿಸಿದ ವಿರಾಟ್ ಕೊಹ್ಲಿಗೆ ಅಭಿನಂದನೆಗಳು. ಟಿ20 ಕ್ರಿಕೆಟ್‌ನ ಉದಯದ ಸಮಯದಲ್ಲಿ ಕ್ರಿಕೆಟ್‌ನ ಶುದ್ಧ ಸ್ವರೂಪವನ್ನು ಮುನ್ನಡೆಸಿದ್ದಕ್ಕಾಗಿ ಮತ್ತು ಶಿಸ್ತು, ಫಿಟ್‌ನೆಸ್ ಮತ್ತು ಬದ್ಧತೆಯಲ್ಲಿ ಅಸಾಧಾರಣ ಮಾದರಿಯನ್ನು ಸ್ಥಾಪಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ಹೇಳಿದ್ದಾರೆ.


ನವದೆಹಲಿ: ನಿರೀಕ್ಷೆಯಂತೆ ವಿರಾಟ್ ಕೊಹ್ಲಿ(Virat Kohli's Test retirement) ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ 14 ವರ್ಷಗಳ ಟೆಸ್ಟ್ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ನಿವೃತ್ತಿ ಹೇಳಿದ ಕೊಹ್ಲಿಗೆ ಮುಖ್ಯ ತರಬೇತುದಾರ ಗೌತಮ್ ಗಂಭೀರ್(Gautam Gambhir) ಅಭಿನಂದನೆ ಸಲ್ಲಿಸಿ ಭಾವುಕ ಪೋಸ್ಟ್ ಮಾಡಿದ್ದಾರೆ. "ಸಿಂಹದಷ್ಟು ಉತ್ಸಾಹ ಹೊಂದಿರುವ ಮನುಷ್ಯ! ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ, ಚೀಕೂ" ಎಂದು ಗಂಭೀರ್ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿದ್ದಾರೆ.
A man with lion’s passion!
— Gautam Gambhir (@GautamGambhir) May 12, 2025
Will miss u cheeks…. pic.twitter.com/uNGW7Y8Ak6
ಏತನ್ಮಧ್ಯೆ, ಐಸಿಸಿ ಅಧ್ಯಕ್ಷ ಜಯ್ ಶಾ ಅವರು ವಿರಾಟ್ ಕೊಹ್ಲಿ ಅವರಿಗೆ ಟೆಸ್ಟ್ ಕ್ರಿಕೆಟ್‌ಗೆ ನೀಡಿದ ಕೊಡುಗೆಗಳಿಗೆ ಧನ್ಯವಾದ ಅರ್ಪಿಸಿದರು. "ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ವೃತ್ತಿಜೀವನವನ್ನು ಪ್ರದರ್ಶಿಸಿದ ವಿರಾಟ್ ಕೊಹ್ಲಿಗೆ ಅಭಿನಂದನೆಗಳು. ಟಿ20 ಕ್ರಿಕೆಟ್‌ನ ಉದಯದ ಸಮಯದಲ್ಲಿ ಕ್ರಿಕೆಟ್‌ನ ಶುದ್ಧ ಸ್ವರೂಪವನ್ನು ಮುನ್ನಡೆಸಿದ್ದಕ್ಕಾಗಿ ಮತ್ತು ಶಿಸ್ತು, ಫಿಟ್‌ನೆಸ್ ಮತ್ತು ಬದ್ಧತೆಯಲ್ಲಿ ಅಸಾಧಾರಣ ಮಾದರಿಯನ್ನು ಸ್ಥಾಪಿಸಿದ್ದಕ್ಕಾಗಿ ಧನ್ಯವಾದಗಳು. ಲಾರ್ಡ್ಸ್‌ನಲ್ಲಿ ನಿಮ್ಮ ಭಾಷಣವು ಎಲ್ಲವನ್ನೂ ಹೇಳಿತು - ನೀವು ಹೃದಯ, ದೃಢನಿಶ್ಚಯ ಮತ್ತು ಹೆಮ್ಮೆಯಿಂದ ಟೆಸ್ಟ್ ಆಡಿದ್ದೀರಿ" ಎಂದು ಶಾ ಹೇಳಿದ್ದಾರೆ.
Congratulations @imVkohli on a stellar Test career. Thank you for championing the purest format during the rise of T20 cricket and setting an extraordinary example in discipline, fitness, and commitment. Your speech at the Lord’s said it all - you played Tests with heart, grit,… pic.twitter.com/sYBhJ5HhJI
— Jay Shah (@JayShah) May 12, 2025
ಕೊಹ್ಲಿಯ ಆತ್ಮೀಯ ಸ್ನೇಹಿತ ಮತ್ತು ಮಾಜಿ ಆರ್‌ಸಿಬಿ ತಂಡದ ಸಹ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ "ಅದ್ಭುತ ಟೆಸ್ಟ್ ವೃತ್ತಿಜೀವನಕ್ಕೆ ನಿವೃತ್ತಿ ಹೇಳಿದ ಗೆೆಳೆಯನಿಗೆ ಅಭಿನಂದನೆಗಳು! ನಿಮ್ಮ ದೃಢನಿಶ್ಚಯ ಮತ್ತು ಕೌಶಲ್ಯವು ಯಾವಾಗಲೂ ನನಗೆ ಸ್ಫೂರ್ತಿ ನೀಡಿವೆ. ನಿಜವಾದ ದಂತಕಥೆ!" ಎಂದು ಬರೆದುಕೊಂಡಿದ್ದಾರೆ.
2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯವನ್ನಾಡುವ ಮೂಲಕ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಒಟ್ಟಾರೆ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 30 ಶತಕಗಳು ಸೇರಿದಂತೆ 9,230 ರನ್ ಗಳಿಸಿದ್ದಾರೆ.