ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯುವರಾಜ್‌ ಸಿಂಗ್‌ ತರಬೇತಿ ಕೊಟ್ರೆ ಅರ್ಜುನ್‌ ತೆಂಡೂಲ್ಕರ್‌ ಮುಂದಿನ ಕ್ರಿಸ್‌ ಗೇಲ್‌ ಆಗುತ್ತಾರೆ: ಯೋಗರಾಜ್‌ ಸಿಂಗ್‌!

ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್, ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಅರ್ಜುನ್ ಬೌಲ್‌ ಮಾಡುವ ಬದಲು ಬ್ಯಾಟಿಂಗ್ ಮೇಲೆ ಗಮನ ಹರಿಸಬೇಕು. ಅರ್ಜುನ್‌ ತೆಂಡೂಲ್ಕರ್‌ಗೆ ಯುವರಾಜ್ ಸಿಂಗ್‌ ತರಬೇತಿ ನೀಡಿದರೆ, ಅವರು ಮುಂದಿನ ಕ್ರಿಸ್ ಗೇಲ್ ಆಗಬಹುದು ಎಂದು ಯೋಗರಾಜ್ ಸಿಂಗ್‌ ಭವಿಷ್ಯ ನುಡಿದಿದ್ದಾರೆ.

ಅರ್ಜುನ್‌ ತೆಂಡೂಲ್ಕರ್‌ ಮುಂದಿನ ಗೇಲ್‌ ಆಗಬಹುದು- ಯೋಗರಾಜ್‌ ಸಿಂಗ್‌!

ಅರ್ಜುನ್‌ ತೆಂಡೂಲ್ಕರ್‌ ಬಗ್ಗೆ ಯೋಗರಾಜ್‌ ಸಿಂಗ್‌ ದೊಡ್ಡ ಹೇಳಿಕೆ.

Profile Ramesh Kote Apr 24, 2025 8:36 PM

ನವದೆಹಲಿ: ಮಾಸ್ಟರ್‌ ಬ್ಲಾಸ್ಟರ್‌ ಹಾಗೂ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ (Arjun Tendulkar) ಬಗ್ಗೆ ಭಾರತದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ತಂದೆ ಯೋಗರಾಜ್‌ ಸಿಂಗ್‌ (Yograj Singh) ಮಹತ್ವದ ಹೇಳಿಕೆ ನೀಡಿದ್ದಾರೆ. ಅರ್ಜುನ್‌ ತೆಂಡೂಲ್ಕರ್‌ ಬೌಲ್‌ ಮಾಡುವುದನ್ನು ನಿಲ್ಲಿಸಿ, ಯುವರಾಜ್‌ ಸಿಂಗ್‌ (Yuvraj Singh) ಬಳಿ ಕೋಚಿಂಗ್‌ ಪಡೆದರೆ, ಅವರು ಮುಂದಿನ ಕ್ರೀಸ್‌ ಗೇಲ್‌ ಆಗುವ ಸಾಧ್ಯತೆ ಇದೆ ಎಂದು ಯೋಗರಾಜ್‌ ಸಿಂಗ್‌ ಭವಿಷ್ಯ ನುಡಿದಿದ್ದಾರೆ. ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅರ್ಜುನ್‌ ತೆಂಡೂಲ್ಕರ್‌ ಮುಂಬೈ ಇಂಡಿಯನ್ಸ್‌ ಪರ ಆಡುತ್ತಿದ್ದಾರೆ. ಮರಿ ತೆಂಡೂಲ್ಕರ್‌ ಇನ್ನೂ ಒಂದೇ ಒಂದು ಪಂದ್ಯದಲ್ಲಿಯೂ ಆಡಿಲ್ಲ.

ಕ್ರಿಕೆಟ್ ನೆಕ್ಸ್ಟ್ ಜೊತೆ ಮಾತನಾಡಿದ ಯೋಗರಾಜ್‌ ಸಿಂಗ್‌, "ಬೌಲಿಂಗ್ ಕಡೆಗೆ ಕಡಿಮೆ ಗಮನ ಕೊಟ್ಟು, ಬ್ಯಾಟಿಂಗ್ ಕಡೆಗೆ ಹೆಚ್ಚಿನ ಗಮನಹರಿಸುವಂತೆ ಅರ್ಜುನ್ ತೆಂಡೂಲ್ಕರ್‌ಗೆ ನಾನು ಮೊದಲೇ ಹೇಳಿದ್ದೆ. ಆದರೆ ಯುವರಾಜ್ ಸಿಂಗ್‌ ಹಾಗೂ ಸಚಿನ್ ತೆಂಡೂಲ್ಕರ್‌ ತುಂಬಾ ಆತ್ಮೀಯರು. ಯುವರಾಜ್‌ ಸಿಂಗ್‌ ಬಳಿ ಸಚಿನ್ ಮಗ ಕೋಚಿಂಗ್‌ ತೆಗೆದುಕೊಂಡರೆ, ಅವರು ಮುಂದಿನ ಕ್ರಿಸ್ ಗೇಲ್ ಆಗುತ್ತಾರೆ ಎಂದು ನಾನು ಬಾಜಿ ಕಟ್ಟುತ್ತೇನೆ. ಒಬ್ಬ ವೇಗದ ಬೌಲರ್ ಸ್ಟ್ರೇಸ್‌ ಫ್ರಾಕ್ಚರ್‌ ಮುರಿತಕ್ಕೆ ಒಳಗಾದರೆ, ಅವರು ಅಷ್ಟು ಪರಿಣಾಮಕಾರಿಯಾಗಿ ಬೌಲ್ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು ಸಾಮಾನ್ಯ. ನನ್ನ ಪ್ರಕಾರ ಅರ್ಜುನ್‌ ತೆಂಡೂಕರ್ ಸ್ವಲ್ಪ ಸಮಯದವರೆಗೆ ಯುವರಾಜ್‌ಗೆ ಒಪ್ಪಿಸಬೇಕು," ಎಂದು ಸಲಹೆ ನೀಡಿದ್ದಾರೆ.

IPL 2025: ʻಮುಂದಿನ ವರ್ಷ ಐಪಿಎಲ್‌ ಆಡಲು ನನಗೆ ಅವಕಾಶವಿದೆʼ-ಮೊಹಮ್ಮದ್‌ ಆಮಿರ್‌!

ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ​​(PCA) ಆಯೋಜಿಸಿದ್ದ ವಿವಿಧ ವಯೋಮಾನದ ಟೂರ್ನಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ತಮ್ಮ ಮಗ ಎಂದು ಯೋಗರಾಜ್ ಸಿಂಗ್ ಈ ಹಿಂದೆ ಬಹಿರಂಗಪಡಿಸಿದ್ದರು.

ಅಭಿಷೇಕ್‌ ಪ್ರತಿಭೆಯನ್ನು ಗುರುತಿಸಿದ್ದ ನನ್ನ ಮಗ

"ನಾವು ಪಿಸಿಎ ಮತ್ತು ತರಬೇತುದಾರರನ್ನು ಅಭಿಷೇಕ್ ಶರ್ಮಾ ಅವರ ಪ್ರದರ್ಶನದ ಬಗ್ಗೆ ಕೇಳಿದಾಗ, ಅವರು ಏನು ಹೇಳಿದರು ಎಂದು ನಿಮಗೆ ತಿಳಿದಿದೆಯೇ?' ಎಂದು ಹೇಳಿದರು. ಸರ್, ಅವರು ಒಬ್ಬ ಬೌಲರ್. ಅವರು ಬೌಲ್ ಮಾಡುತ್ತಾರೆ. ಯುವಿ ಹೇಳಿದ, "ನೀವು ಅವರ ಪ್ರದರ್ಶನ ದಾಖಲೆಯನ್ನು ನೋಡಿ'. ಹಾಗಾಗಿ, ನಾವು ದಾಖಲೆಗಳನ್ನು ನೋಡಿದಾಗ, ಅಭಿಷೇಕ್ ಈಗಾಗಲೇ 24 ಶತಕಗಳನ್ನು ಸಿಡಿಸಿದ್ದರು. ಯುವಿ, "ನೀವು ಯಾಕೆ ತಪ್ಪು ಮಾಹಿತಿ ನೀಡುತ್ತಿದ್ದೀರಿ?' ಎಂದು ಕೇಳಿದ್ದರು. ಏಕೆ? ಈ ವ್ಯಕ್ತಿ 24 ಶತಕಗಳನ್ನು ಗಳಿಸಿದ್ದಾರೆ. ಇದು ಆರು ಅಥವಾ ಏಳು ವರ್ಷಗಳ ಹಿಂದೆ ನಡೆದಿದ್ದ ಘಟನೆ,"ಎಂದು ಪಂಜಾಬಿ 18ಗೆ ಯೋಗರಾಜ್‌ ತಿಳಿಸಿದ್ದಾರೆ.

IPL 2025: ಐಪಿಎಲ್‌ನಲ್ಲಿ ಅನಗತ್ಯ ದಾಖಲೆ ಬರೆದ ಕನ್ನಡಿಗ ಅಭಿನವ್

"ಯುವಿ ಅಭಿಷೇಕ್‌ ಶರ್ಮಾರ ದಾಖಲೆಯನ್ನು ನನಗೆ ಕಳುಹಿಸಿದಾಗ, ಅವರು, 'ಅಪ್ಪಾ, ಈ ಆಟಗಾರನನ್ನು ನೋಡಿ' ಎಂದು ಹೇಳಿದರು." ನಾನು ಹೇಳಿದೆ, ನೋಡಿ, ಇದೆಲ್ಲವೂ ಮಾಹಿತಿಯನ್ನು ಹಂಚಿಕೊಳ್ಳುವುದರ ಬಗ್ಗೆ. ಸಮಸ್ಯೆ ಏನೆಂದರೆ, ಕೆಲವರು ತಮ್ಮದೇ ಆದ ವೃತ್ತಿಜೀವನವನ್ನು ರೂಪಿಸಿಕೊಳ್ಳುವ ಬದಲು, ಅಸೂಯೆಯಿಂದ ಆಟಗಾರನನ್ನು ನಾಶಮಾಡಲು ಬಯಸುತ್ತಾರೆ," ಎಂಬುದನ್ನು ಅವರು ರಿವೀಲ್‌ ಮಾಡಿದ್ದಾರೆ.