ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shine Tom Chacko: ನಟ ಶೈನ್ ಟಾಮ್ ಬಗ್ಗೆ ಮತ್ತೊಬ್ಬ ಖ್ಯಾತ ನಟಿ ಆರೋಪ

ನಟ ಶೈನ್ ಟಾಮ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ ಮತ್ತೊಬ್ಬ ನಟಿ ಚಿತ್ರೀಕರಣ ಸಮಯದಲ್ಲಿ ಅಸಭ್ಯ ವರ್ತನೆ(Shine Tom Chacko) ತೋರಿಸಿರುವ ಬಗ್ಗೆ ಆರೋಪ ಮಾಡಿದ್ದಾರೆ. ಆಸ್ಟ್ರೇಲಿಯಾದ ನಟಿ ಅಪರ್ಣಾ ಜಾನ್ ಈ ಆರೋಪ ಮಾಡಿದ್ದು ಮಲಯಾಳಂ ಚಿತ್ರದ ʻಸೂತ್ರವಾಕ್ಯಂ’ನ ಶೂಟಿಂಗ್ ವೇಳೆ, ಅಸಭ್ಯ ವರ್ತನೆ ತೋರಿಸಿದ್ದಾರೆಂದು ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಟ ಶೈನ್ ಟಾಮ್ ವಿರುದ್ಧ ಮತ್ತೊಬ್ಬ ನಟಿ ಆರೋಪ!

Profile Pushpa Kumari Apr 24, 2025 7:41 PM

ಕೊಚ್ಚಿ: ಕೆಲದಿನಗಳ ಹಿಂದಷ್ಟೇ ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್ ಟಾಮ್ ಚಾಕೊ(Shine Tom Chacko) ವಿರುದ್ಧ ನಟಿಯೊಬ್ಬರು ದೌರ್ಜನ್ಯ ಮತ್ತು ಸಿನಿಮಾ ಸೆಟ್​ನಲ್ಲಿ ಡ್ರಗ್ಸ್ ಬಳಕೆ ಆರೋಪ ಮಾಡಿದ್ದರು. ಇದೀಗ ನಟ ಶೈನ್ ಟಾಮ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ ಮತ್ತೊಬ್ಬ ನಟಿ ಚಿತ್ರೀಕರಣ ಸಮಯದಲ್ಲಿ ಅಸಭ್ಯ ವರ್ತನೆ ತೋರಿಸಿರುವ ಬಗ್ಗೆ ಆರೋಪ ಮಾಡಿದ್ದಾರೆ. ಆಸ್ಟ್ರೇಲಿಯಾದ ನಟಿ ಅಪರ್ಣಾ ಜಾನ್ ಈ ಆರೋಪ ಮಾಡಿದ್ದು ಮಲಯಾಳಂ ಚಿತ್ರದ ‘ಸೂತ್ರವಾಕ್ಯಂ’ನ ಶೂಟಿಂಗ್ ವೇಳೆ, ಅಸಭ್ಯ ವರ್ತನೆ ತೋರಿಸಿದ್ದಾರೆಂದು ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಡ್ರಗ್ಸ್‌ ವ್ಯಸನಿಯಾಗಿರುವ ಕಲಾವಿದರೊಬ್ಬರು ಶೂಟಿಂಗ್‌ ಸೆಟ್‌ನಲ್ಲೇ ಅನುಚಿತ ವರ್ತನೆ ತೋರಿದ್ದಾರೆ ಎಂದು ಈ ಹಿಂದೆ ನಟಿ ವಿನ್ಸಿ ಅಲೋಷಿಯಸ್‌ ಅವರು ಮಲಯಾಳಂ ಸಿನಿಮಾ ಕಲಾವಿದರ ಸಂಘಕ್ಕೆ ದೂರು ನೀಡಿದ್ದರು. ಈ ಕುರಿತು ತನಿಖೆ ಮಾಡಿ ನಟನನ್ನು ಬಂಧಿಸಲಾಗಿತ್ತು ಇದೀಗ ನಟಿ, ವಿನ್ಸಿ ಅಲೋಷಿಯಸ್ ಮಾಡಿದ ಎಲ್ಲಾ ಆರೋಪಗಳು “ಶೇಕಡಾ ನೂರರಷ್ಟು ಶುದ್ಧ ಸತ್ಯ ಎಂದು ನಟಿ ಅಪರ್ಣಾ ಜಾನ್ ಹೇಳಿಕೊಂಡಿದ್ದಾರೆ.

ಸೂತ್ರವಾಕ್ಯಂ ಚಿತ್ರದಲ್ಲಿ ಶೈನ್ ಚಾಕೊ ಜೊತೆ ನಟಿಸಿದ್ದ ಅಪರ್ಣಾ ಜಾನ್, ಶೂಟಿಂಗ್ ಸಮಯದಲ್ಲಿ ಶೈನ್ ಪದೇ ಪದೇ ಲೈಂಗಿಕವಾಗಿ ಸೂಚಿಸುವ ಕಾಮೆಂಟ್‌ಗಳನ್ನು ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ನಟಿ ವಿನ್ಸಿ ಅಲೋಷಿಯಸ್ ಮಾಡಿದ ಎಲ್ಲಾ ಆರೋಪಗಳು ʻಶೇಕಡಾ ನೂರರಷ್ಟು ಶುದ್ಧ ಸತ್ಯʼ ಅವರು ಬಾಯಿಯಿಂದ ಬಿಳಿ ಪುಡಿ ಹೊರಬಿಟ್ಟದ್ದು ನಾನು ನೋಡಿದ್ದೆ. ಅದು ಏನು ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ, ಆದರೆ ನಟನ ನಡವಳಿಕೆ ಮತ್ತು ಮಾತು ಅಸಹಜ ವಾಗಿತ್ತು ಅದು ಮಾದಕ ದ್ರವ್ಯ ಸೇವನೆಯಿಂದಲೋ ಅಥವಾ ವೈದ್ಯಕೀಯ ಸಮಸ್ಯೆಯಿಂದಲೋ ಎಂದು ನಾನು ಹೇಳಲಾರೆ, ಆದರೆ ಶೂಟಿಂಗ್ ಸಮಯದಲ್ಲಿ ಚಾಕೊ ತುಂಬಾ ಅಸಹಜ ರೀತಿಯಲ್ಲಿ ವರ್ತಿಸುತ್ತಿದ್ದರು ಎಂದು ಹೇಳಿದ್ದಾರೆ.

ಶೂಟಿಂಗ್ ಗಾಗಿ ಅಭ್ಯಾಸ ಮಾಡುತ್ತಿದ್ದಾಗ ಅಥವಾ ವಿರಾಮ ತೆಗೆದುಕೊಳ್ಳುತ್ತಿದ್ದಾಗ ಅವರ ಸಂಭಾಷಣೆಗಳು ಲೈಂಗಿಕ ಅರ್ಥಗಳಿಂದ ತುಂಬಿದ್ದವು. ಅದು ತುಂಬಾ ಅಸಮಾಧಾನ ರೀತಿಯಲ್ಲಿ ಇರುತ್ತಿತ್ತು. ಅವರ ಸಂಭಾಷಣೆ ಅನ್ ಕಂಪರ್ಟ್ ರೀತಿ ಇರುತ್ತಿತ್ತು. ಯಾವುದೇ ಸಂಬಂಧ ಇಲ್ಲದ ವಿಚಾರಗಳನ್ನು ಹೇಳುತ್ತಿದ್ದರು ಮತ್ತು ಯಾವುದೇ ಮಹಿಳೆ ಸುತ್ತಲೂ ಇದ್ದರೆ, ಅವರ ಮಾತುಗಳು ಕಾಮಾತ್ಮಕ ಸೂಚನೆಗಳೊಂದಿಗೆ ತುಂಬ ಅಸಭ್ಯವಾಗಿದ್ದವು ಎಂದು ನಟಿ ಜಾನ್ ಆರೋಪಿಸಿದ್ದಾರೆ.

ಇದಕ್ಕೂ ಮೊದಲು ವಿನ್ಸಿ ಅಲೋಷಿಯ್ ತಮ್ಮ ಹಾಗೂ ಮತ್ತೊಬ್ಬ ಸಹನಟಿಯ ಜೊತೆಗೆ ಅನುಚಿತವಾಗಿ ಶೈನ್ ಟಾಮ್ ಚಾಕೊ ನಡೆದುಕೊಂಡಿದ್ದಾರೆ ಅಲ್ಲದೆ ಸೆಟ್​ನಲ್ಲಿ ಡ್ರಗ್ಸ್ ಬಳಕೆ ಮಾಡಿದ್ದಾರೆ ಎಂದು ನಟಿ ವಿನ್ಸಿ ಅಲೋಷಿಯಸ್ ಸಿನಿಮಾ ಚೇಂಬರ್‌ಗೆ ದೂರು ನೀಡಿದ್ದರು. ಆ ಬಳಿಕ ನಟ ಶೈನ್ ಟಾಮ್ ಚಾಕೊ ಮಹಿಳೆಯ ಮೇಲೆ ದೌರ್ಜನ್ಯ ಮತ್ತು ಡ್ರಗ್ಸ್ ಪ್ರಕರಣ ಎರಡರಲ್ಲೂ ಆರೋಪಿಯಾಗಿ ಪೊಲೀಸರಿಂದಲೂ ಬಂಧಿತಗೊಂಡಿದ್ದರು.

ಇದನ್ನು ಓದಿ: Shine Tom Chacko: ನಟ ಶೈನ್ ಟಾಮ್ ಗೆ ಕೊನೆಯ ಎಚ್ಚರಿಕೆ ನೀಡಿದ ಕೇರಳ ಫಿಲ್ಮ್ ಫೆಡರೇಷನ್‌

ಈ ಆರೋಪದ ನಂತರ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 238 ಮತ್ತು ಮಾದಕ ದ್ರವ್ಯ ಮತ್ತು ಮಾನಸಿಕ ಉದ್ದೀಪಕ ಪದಾರ್ಥಗಳ ಕಾಯ್ದೆಯ ಸೆಕ್ಷನ್‌ 27 ಹಾಗೂ 29 ಅಡಿಯಲ್ಲಿ ಪ್ರಕರಣ ಮಾಡಿದ್ದಾರೆ.ಇದೀಗ ಇದೇ ನಟನ ವಿರುದ್ಧ ಮತ್ತೊಬ್ಬ ನಟಿ ಆರೋಪ ಮಾಡಿದ್ದಾರೆ. ನಟ ಶೈನ್ ಟಾಮ್ ಚಾಕೊ ಮಲ ಯಾಳಂ ಹಾಗೂ ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು.ಪೋಷಕ ಪಾತ್ರ ಹಾಗೂ ಖಳನಾಯಕನಾಗಿ ನಟಿಸಿದ್ದು ಇತ್ತೀಚೆಗಷ್ಟೇ ತೆರೆಕಂಡಿರುವ ಅಜಿತ್ ಕುಮಾರ್ ನಟನೆಯ ' ಗುಡ್ ಬ್ಯಾಡ್ ಅಗ್ಲಿ' ಸಿನಿಮಾದಲ್ಲೂ ಖಳ ನಾಯಕನಾಗಿ ನಟಿಸಿದ್ದರು.