Viral Video: ಕ್ರಿಕೆಟ್ ಪಂದ್ಯ ನೋಡ್ತಾನೆ ಉತ್ತರ ಪತ್ರಿಕೆ ತಿದ್ದಿದ ಶಿಕ್ಷಕಿ; ಕ್ಯಾಮೆರಾ ಕಣ್ಣಿಗೆ ಬಿದ್ದಾಗ ಮಾಡಿದ್ದೇನು? ವಿಡಿಯೊ ವೈರಲ್!
ಕರಾಚಿ ಕಿಂಗ್ಸ್ ಮತ್ತು ಪೇಶಾವರ್ ಝಲ್ಮಿ ನಡುವಿನ ಪಂದ್ಯದ ಸಮಯದಲ್ಲಿ, ಶಾಲಾ ಶಿಕ್ಷಕಿಯೊಬ್ಬಳು ಕ್ರೀಡಾಂಗಣದಲ್ಲಿ ಕುಳಿತು ತನ್ನ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳನ್ನು ಪರಿಶೀಲಿಸಿದ್ದಾಳೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಇಸ್ಲಾಮಾಬಾದ್: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್), ಪ್ರಸ್ತುತ ನಡೆಯುತ್ತಿದೆ. ಪಿಎಸ್ಎಲ್ ಪಂದ್ಯದ ಸಮಯದಲ್ಲಿ, ಶಿಕ್ಷಕಿಯೊಬ್ಬಳ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಕರಾಚಿ ಕಿಂಗ್ಸ್ ಮತ್ತು ಪೇಶಾವರ್ ಝಲ್ಮಿ ನಡುವಿನ ಪಂದ್ಯದ ಸಮಯದಲ್ಲಿ, ಶಾಲಾ ಶಿಕ್ಷಕಿಯೊಬ್ಬಳು ಕ್ರೀಡಾಂಗಣದಲ್ಲಿ ಕುಳಿತು ತನ್ನ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳನ್ನು ಪರಿಶೀಲಿಸಿದ್ದಾಳೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ಮಹಿಳಾ ಶಿಕ್ಷಕಿ ಪಂದ್ಯವನ್ನು ವೀಕ್ಷಿಸುತ್ತಾ ತನ್ನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಶೀಲಿಸುತ್ತಿರುವುದು ಸೆರೆಯಾಗಿದೆ. ಕ್ಯಾಮೆರಾ ಅದರ ಮೇಲೆ ಜೂಮ್ ಮಾಡಿದ ತಕ್ಷಣ ಅವಳ ಪಕ್ಕದಲ್ಲಿ ಕುಳಿತ ಹುಡುಗನೊಬ್ಬ ಆಕೆಗೆ ಕ್ಯಾಮರಾವನ್ನು ತೋರಿಸಿದಾಗ,ಶಿಕ್ಷಕಿ ಆತಂಕಕ್ಕೊಳಗಾಗಿ ಬೇಗನೆ ಪತ್ರಿಕೆಗಳನ್ನು ಮುಚ್ಚಿದ್ದಾಳೆ. ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ವೈರಲಾಗ್ತಿರುವ ವಿಡಿಯೊ ಇಲ್ಲಿದೆ
ಈ ಘಟನೆ ಪಾಕಿಸ್ತಾನದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ, ಏಕೆಂದರೆ ಶಿಕ್ಷಕರು ಜವಾಬ್ದಾರಿ ಮರೆತು ಮನರಂಜನೆಯಲ್ಲಿ ನಿರತರಾಗಿದ್ದಾರೆ. ನೆಟ್ಟಿಗರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಮಹಿಳಾ ಶಿಕ್ಷಕಿಯ ಕೃತ್ಯಗಳನ್ನು ಪ್ರಶ್ನಿಸಿದ್ದಾರೆ. ಶಿಕ್ಷಕರ ಕೆಲಸ ಮಕ್ಕಳ ಶಿಕ್ಷಣದ ಮೇಲೆ ಗಮನ ಹರಿಸುವುದು ಮತ್ತು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುವಾಗ ಉತ್ತರಪತ್ರಿಕೆಯನ್ನು ಪರಿಶೀಲಿಸುವುದು ಅಲ್ಲ ಎಂದು ಅನೇಕ ನೆಟ್ಟಿಗರು ಹೇಳಿದ್ದಾರೆ.
ಈ ವಿಡಿಯೊವನ್ನು ಸೋಶಿಯಲ್ ಮಿಡಿಯಾ ಪ್ಲಾಟ್‍ಫಾರ್ಮ್‍ನಲ್ಲಿ ಪೋಸ್ಟ್ ಮಾಡಿದಾಗಿನಿಂದ ಇಲ್ಲಿಯವರೆಗೆ ಒಂದು ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅನೇಕ ಜನರು ಇದನ್ನು ಇಷ್ಟಪಟ್ಟಿದ್ದಾರೆ. ವಿಡಿಯೊವನ್ನು ನೋಡಿದ ನೆಟ್ಟಿಗರು , ವಿವಿಧ ರೀತಿಯಲ್ಲಿ ಕಾಮೆಂಟ್‍ಗಳನ್ನು ಮಾಡಿದ್ದಾರೆ. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡರೆ, ಕೆಲವರು ಇದನ್ನು ಶಿಕ್ಷಣ ವ್ಯವಸ್ಥೆಯ ವೈಫಲ್ಯವೆಂದು ಹೇಳಿದ್ದಾರೆ.
ಏಪ್ರಿಲ್ 21, 2025 ರಂದು ಕರಾಚಿ ಕಿಂಗ್ಸ್ ಪಿಎಸ್ಎಲ್‍ನಲ್ಲಿ ಪೇಶಾವರ್ ಝಲ್ಮಿಯನ್ನು ಎದುರಿಸಿತು. ನಾಯಕ ಬಾಬರ್ ಅಜಮ್ 41 ಎಸೆತಗಳಲ್ಲಿ 46 ರನ್ ಗಳಿಸಿದರೆ, ಪೇಶಾವರ್ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಕರಾಚಿ 19.3 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕ ಡೇವಿಡ್ ವಾರ್ನರ್ 47 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 60 ರನ್ ಗಳಿಸಿ 2 ವಿಕೆಟ್‍ಗಳ ಜಯ ಸಾಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ರೀಲ್ಸ್‌ಗಾಗಿ ವಾಷಿಂಗ್ ಮೆಷಿನ್‍ನೊಳಗೆ ಕಲ್ಲು ಹಾಕಿದ ಭೂಪ! ಇದೆಂಥಾ ಹುಚ್ಚಾಟ ನೋಡಿ
ಈ ಹಿಂದೆ, ಪಿಎಸ್ಎಲ್ ಕ್ರೀಡಾಂಗಣದಲ್ಲಿ ಪ್ರೇಕ್ಷಕರೊಬ್ಬರು ಐಪಿಎಲ್ ಪಂದ್ಯವನ್ನು ವೀಕ್ಷಿಸುತ್ತಿರುವ ವಿಡಿಯೊ ಕೂಡ ಹೊರಬಂದಿತ್ತು. ಪಿಎಸ್ಎಲ್ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವನ್ನು ಅಭಿಮಾನಿ ಲೈವ್ ಸ್ಟ್ರೀಮಿಂಗ್ ಮಾಡಿರುವುದು ರೆಕಾರ್ಡ್ ಆಗಿತ್ತು.