ಕೆರೂರ ರಸ್ತೆಗಳಲ್ಲ, ಮೃತ್ಯೂ ಕೂಪಗಳು, ಚರಂಡಿಗಳು, ತಿಪ್ಪೆಗಳು ರೋಗದ ಕಾರ್ಖಾನೆ
ಪಟ್ಟಣದಲ್ಲಿ ಸಾಕಷ್ಟು ಪೌರ ಕಾರ್ಮಿಕರಿದ್ದು ಸರಿಯಾದ ನಿರ್ವಹಣೆಯಿಲ್ಲದೆ ಪರದಾಡು ವಂತಾಗಿದೆ. ಪಟ್ಟಣದಲ್ಲಿ ಆಡಳಿತವ್ಯವಸ್ಥೆ ಮಂಕಾಗಿದ್ದು ಸರಿಯಾದ ನಿರ್ವಹಣೆ ಅತೀ ಅವಶ್ಯ ಕವಾಗಿದ್ದು ಅಧಿಕಾರಿಗಳ ಜಾಣ ಕುರುಡನ್ನು ಮೇಲಧಿಕಾರಿಗಳು ಸೂಕ್ತ ಕ್ರಮ ಕೈ ಗೊಂಡು ಸ್ವಚ್ಚ ನಗರ ನಿರ್ಮಾಣ ಮಾಡಬೇಕಿದೆ

ನೆಹರು ನಗರದ ರಸ್ತೆಯ ಮೇಲೆ ನೀರು ಹರಿಯುತ್ತಿರುವ ಚಿತ್ರ

ಕಸದ ಗಾಡಿಗಳನ್ನ ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು
ಮಲ್ಲಯ್ಯ ಮೇಡಿ
ಕೆರೂರ: ಸ್ವಚ್ಚ ಭಾರತ ನಿರ್ಮಾಣ ಎಂದು ಪ್ರಧಾನಿ ಮತ್ತು ಎಲ್ಲರೂ ತಲೆ ಕೆಡಿಸಿಕೊಂಡು ಸ್ವಚ್ಚತೆಯತ್ತ ಗಮಣಹರಿಸುತ್ತಿದ್ದರೆ ಪಟ್ಟಣದಲ್ಲಿ ತಿಪ್ಪೆಗುಂಡಿಗಳು ಗಬ್ಬೆದ್ದಿರುವ ಗಟಾರ ಗಳು ಆಧುನಿಕತೆ ಒಗ್ಗಿಕೊಳ್ಳದೆ ಹಿಂದೆ ಸರಿಯುತ್ತಿವೆಯೋನೊ ಎನ್ನುವ ಭಾಸವಾಗುತ್ತಿದೆ. ಪಟ್ಟಣದಲ್ಲಿ ಸಾಕಷ್ಟು ಪೌರ ಕಾರ್ಮಿಕರಿದ್ದು ಸರಿಯಾದ ನಿರ್ವಹಣೆಯಿಲ್ಲದೆ ಪರದಾಡು ವಂತಾಗಿದೆ. ಪಟ್ಟಣದಲ್ಲಿ ಆಡಳಿತವ್ಯವಸ್ಥೆ ಮಂಕಾಗಿದ್ದು ಸರಿಯಾದ ನಿರ್ವಹಣೆ ಅತೀ ಅವಶ್ಯಕವಾಗಿದ್ದು ಅಧಿಕಾರಿಗಳ ಜಾಣ ಕುರುಡನ್ನು ಮೇಲಧಿಕಾರಿಗಳು ಸೂಕ್ತ ಕ್ರಮ ಕೈ ಗೊಂಡು ಸ್ವಚ್ಚ ನಗರ ನಿರ್ಮಾಣ ಮಾಡಬೇಕಿದೆ. ಸ್ಥಳೀಯ ಶಾಸಕರಾದ ಬಿಬಿ ಚಿಮ್ಮನ ಕಟ್ಟಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದದನ್ನು ಬಿಟ್ಟರೆ, ಇಂದೀರಾ ಕ್ಯಾಂಟೀನ್ ತಯಾರಾಗಿ ತಿಂಗಳಾದ ಉದ್ಘಾಟನೆಯ ಭಾಗ್ಯ ಕಂಡಿಲ್ಲ.
ಇದನ್ನೂ ಓದಿ: Kerala Horror: ಕೇರಳವನ್ನೇ ನಡುಗಿಸಿದ ಬರ್ಬರ ಹತ್ಯಾಕಾಂಡ; ಒಂದೊಂದಾಗಿ ಹೊರ ಬೀಳುತ್ತಿದೆ ಬೆಚ್ಚಿ ಬೀಳಿಸುವ ರಹಸ್ಯ
ಪಟ್ಟಣ 20 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು ನಗರದಲ್ಲಿ ಸುಸಜ್ಜಿತ ರಸ್ತೆಗಳಿಲ್ಲ, ಚರಂಡಿಗಳು ತುಂಬಿ ರಸ್ತೆಗಳ ಮೇಲೆ ಚರಂಡಿ ನೀರು ಹರಿಯುವದು ಮಾಮೂ ಲಾಗಿದೆ. ಬೀದಿ ದೀಪಗಳ ರಾತ್ರಿ ಹೊತ್ತಿನಲ್ಲಿ ಕಣ್ಣಾಮುಚ್ಚಾಲೆ ಆಟವಾಡುತ್ತ ವೃದ್ದರು, ಮಕ್ಕಳು ಪಾದಚಾರಿಗಳ ಸುತ್ತಾಟ ದುಸ್ತರವಾಗಿದೆ. ಅಭಿವೃದ್ಧಿ ಅನ್ನೋದು ಮಾಯವಾಗಿದೆ ಎಂದು ಪ್ರಜ್ಞಾವಂತರು ದೂರಿದ್ದಾರೆ.

ನಗರದ ಹೊಸಪೇಟೆ, ಹಳಪೇಟೆ, ನೆಹರುನಗರ, ಹೈಸ್ಕೂಲ ಹಿಂಭಾಗ, ಚಿನಗುಂಡಿ ಪ್ಲಾಟ್, ಕಿಲ್ಲಾಗಲ್ಲಿ, ಕೆಎಚ್‌ಡಿಸಿ ಕಾಲನಿ, ಕೋಟೇಶ್ವರ ಕಾಲನಿ, ಸರ್ವೇಶ್ವರ ನಗರ ಸೇರಿದಂತೆ ಅನೇಕ ಕಡೆಯ ಪ್ರಮುಖ ರಸ್ತೆಗಳು ಹದಗೆಟ್ಟು ದುರ್ನಾತ ಸುಸುತ್ತಾ ಅರಾರೋಗ್ಯದ ಕಾರ್ಖಾ ಞನೆಗಳಾಗಿ ಪರಿವರ್ತನೆಗೊಂಡು ನಾಗರಿಕರು ಹಿಡಿಶಾಪ ಹಾಕುವಂತಾಗಿದೆ.
ಕಳೆದ ಕೆಲ ವರ್ಷಗಳಿಂದ ರಸ್ತೆಗಳ ದುರಸ್ತಿ ಕಾರ್ಯ ನಿಂತು ಹೋಗಿದ್ದು ಯಾವುದೇ ಅಭಿವೃದ್ಧಿ ಸುಧಾರಣೆ ಮರಿಚಿಕೆಯಾಗಿದೆ. ಚರಂಡಿ ವ್ಯವಸ್ಥೆ ಇದ್ದು ಇಲ್ಲದಂತಾಗಿದೆ ಪಟ್ಟಣದ ಕಿಲ್ಲಾಪೇಟೆ ಹಳಪೇಟೆ ಹೊಸಪೇಟೆಗಳ ವಿವಿಧ ಬಡಾವಣೆಗಳ ಶೇ.90 ರಷ್ಟು ಚರಂಡಿ ವ್ಯವಸ್ಥೆ ಇಲ್ಲದೆ ಗಲೀಜು ನೀರು ರಸ್ತೆ ಮೇಲೆ ಹರಿಯುತ್ತಿದ್ದು ಪ್ರಸಕ್ತ ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ.
24*7 ಶುದ್ಧ ಕುಡಿಯುವ ನೀರು
ಪಟ್ಟಣದಲ್ಲಿ 24*7 ಶುದ್ಧ ಕುಡಿಯುವ ನೀರಿನ ಪೈಪಲೈನ ಮುಗಿದು ವರ್ಷಗಳೆ ಕಳೆದರು ನಿರಂತರ ನೀರು ಇನ್ನು ಪ್ರಾರಂಭವಾಗಿಲ್ಲ ಅಲ್ಲದೆ ಪಟ್ಟಣದ ಕೆಲ ಬಡಾವಣೆಗಳಿಗೆ ಇನ್ನೂ ಸಮರ್ಪಕವಾಗಿ ನೀರು ಸರಭರಾಜು ಆಗುತ್ತಿಲ್ಲ. ಇನ್ನೂ ಪಟ್ಟಣದ ಭಾಗವಾಗಿರುವ ಬೆಳ ಗಂಟಿಯು ಇತ್ತ ಪಟ್ಟಣದ ನಾಗರೀಕ ಸೌಲಭ್ಯಗಳು ಇಲ್ಲ ಅತ್ತ ಗ್ರಾಮೀಣ ಭಾಗದ ಸೌಲಭ್ಯ ಗಳು ಇಲ್ಲದೆ ಪರದಾಡುವಂತಾಗಿದೆ ಈ ಭಾಗದ ಸ್ತ್ರೀಯರು ಇಂದಿಗೂ ಬಹಿರ್ದೆಸೆಗೆ ಚಂಬು ಹಾಗೂ ಹೊಲಗಳಿಗೆ ಹೋಗುವ ದೃಶ್ಯಗಳು ಸಾಮಾನ್ಯವಾಗಿವೆ. ಇಲ್ಲಿ ಸ್ವಚ್ಚತೆಗೆ ಯಾವುದೇ ಕಾರ್ಮಿಕರ ನಿಯೋಜನೆ ಇಲ್ಲ ಕಸ ತುಂಬುವ ಗಾಡಿಯೂ ಹಾಯುವದಿಲ್ಲ. ರಸ್ತೆಗಳ ಮೇಲೆ ಕೊಳಕಲು ನೀರು ಸದಾಕಾಲ ಹರಿಯುತ್ತಾ ಸೊಳ್ಳೆ ಕ್ರಿಮಿಗಳ ಕಾರ್ಖಾನೆ ಯಾಗಿವೆ.
*
ಬೆಳಗಂಟಿ ಕುಡಿಯುವ ನೀರಿನ ಶಾಶ್ವತ ಯೋಜನೆ ಟೆಂಡರ್ ಹಂತದಲ್ಲಿ ಇದೆ. ರಸ್ತೆ ಚರಂಡಿ ದುರಸ್ತಿಗಾಗಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತೇವೆ.
ರಮೇಶ ಮಾಡಬಾಳ (ಪಟ್ಟಣ ಪಂಚಾಯತ ಮುಖ್ಯಾಧಿಕಾರಿ)
ಪಟ್ಟಣದ ಬಹುತೇಕ ಬಡಾವಣೆಗಳ ರಸ್ತೆಗಳು ಹಾಳಾಗಿ ತೆಗ್ಗು-ದಿನ್ನಿಗಳಾಗಿ ಮೃತ್ಯುಕೂಪ ಗಳಾಗಿ ಸಾಕಷ್ಟು ಬಾರಿ ಗಮನಕ್ಕೆ ತಂದರು ಪ್ರಯೋಜನವಾಗುತ್ತಿಲ್ಲ ಬರುವ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ವಿಶೇಷ ಅನುದಾನ ನೀಡುವಂತೆ ಶಾಸಕರುಗೆ ಆಗ್ರಹಿಸಿದ್ದಾರೆ.
ವಿಜಯಕುಮಾರ ಐಹೊಳ್ಳಿ (ಪಟ್ಟಣ ಪಂಚಾಯತ ಸದಸ್ಯ)
ಚಿತ್ರ ಮಾಹಿತಿ ೨೩ ಕೆ ಆರ್ ಆರ್ ೧: ನೆಹರು ನಗರದ ರಸ್ತೆಯ ಮೇಲೆ ನೀರು ಹರಿಯುತ್ತಿರುವ ಚಿತ್ರ
೨೩ ಕೆ ಆರ್ ಆರ್ ಪಿಎಚ್ ೨ : ಪತ್ತಾರಕಟ್ಟಿ ರಸ್ತೆಯ ಪಕ್ಕ ತುಂಬಿರುವ ಗಟಾರದ ಚಿತ್ರ.
೨೩ ಕೆ ಆರ್ ಆರ್ ಪಿಎಚ್ ೩ : ನೆಹರು ನಗರದ ಕಸದ ತಿಪ್ಪೇಯಾದ ಚರಂಡಿ.