Celebrity Fitness: ಬಾಲಿವುಡ್ ಸೆಲೆಬ್ರಿಟಿಗಳು ಫಿಟ್ ಆಗಿರಲು ಏನೆಲ್ಲ ಮಾಡ್ತಾರೆ? ನೀವೂ ಈ ಟ್ರಿಕ್ಸ್ ಫಾಲೋ ಮಾಡಿ
ಪ್ರತಿಯೊಬ್ಬರಿಗೂ ತಾವು ಸುಂದರವಾಗಿ, ಫಿಟ್ ಆ್ಯಂಡ್ ಫೈನ್ ಆಗಿ ಕಾಣಬೇಕೆಂಬ ಹಂಬಲ ಇದ್ದೇ ಇರುತ್ತದೆ. ಅದರಲ್ಲಿಯೂ ಸೆಲೆಬ್ರಿಟಿಗಳ ದಿನ ಆರಂಭ ಆಗುವುದೆ ವರ್ಕೌಟ್ ಮೂಲಕ. ಯಾವುದೇ ಜಿಮ್, ಇತರ ತರಬೇತಿ ಕೇಂದ್ರಕ್ಕೆ ಹೋಗದೆಯೇ ಮನೆಯಲ್ಲಿಯೇ ಬಹಳ ಸರಳವಾಗಿ ವ್ಯಾಯಾಮ ಮಾಡಿ ಫಿಟ್ನೆಸ್ ಮೇನ್ಟೈನ್ ಮಾಡಬಹುದು ಎಂದು ಕೆಲವು ಬಾಲಿವುಡ್ ನಟಿಯರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕತ್ರಿನಾ ಕೈಫ್, ನೀನಾ ಗುಪ್ತಾ, ಮಂದಿರಾ ಬೇಡಿ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಹಲವು ಸಂದರ್ಭಗಳಲ್ಲಿ ತಮ್ಮ ವ್ಯಾಯಾಮದ ದಿನಚರಿಯನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಬಹಳ ಸರಳವಾಗಿದ್ದು ಮನೆಯಲ್ಲಿಯೇ ಟ್ರೈ ಮಾಡಬಹುದು. ಫಿಟ್ನೆಸ್ ಚಾಲೆಂಜ್ ತೆಗೆದುಕೊಳ್ಳಲು ಬಯಸುವವರಿಗೆ ಸೆಲೆಬ್ರಿಟಿಗಳ ವ್ಯಾಯಾಮ ಶೈಲಿಯೇ ಸ್ಫೂರ್ತಿ

Katrina Kaif To Neena Gupta_ Celeb Fitness Routines To Try At Home


ಶಿಲ್ಪಾ ಶೆಟ್ಟಿ
ʼಮೆಟ್ರೋʼ, ʼಹಂಗಾಮ 2ʼ ಬಾಲಿವುಡ್ ಸಿನಿಮಾಗಳ ನಟಿ, ಬಹುಭಾಷಾ ಕಲಾವಿದೆ ಶಿಲ್ಪಾ ಶೆಟ್ಟಿ ವಯಸ್ಸು 49 ಆಗಿದ್ದರೂ ಈಗಲೂ ಟೀನೇಜ್ ಹುಡುಗಿಯರ ರೀತಿಯೇ ಕಾಣಿಸುತ್ತಾರೆ. ನಿತ್ಯ ಯೋಗ ಮತ್ತು ಕ್ರಿಯಾತ್ಮಕ ವ್ಯಾಯಾಮಗಳನ್ನು ಮಾಡುವ ಕಾರಣಕ್ಕೆ ಈ ನಟಿ ಹೆಚ್ಚು ಯಂಗ್ ಆಗಿದ್ದಾರೆ. ಯೋಗವನ್ನು ಅಭ್ಯಾಸ ಮಾಡುವ ಜತೆಗೆ ಸುಧಾರಿತ ಆಸನಗಳನ್ನು ನಿಯಮಿತವಾಗಿ ಮಾಡುತ್ತಿರುತ್ತಾರೆ. ಇವರ ದೈನಂದಿನ ವ್ಯಾಯಾಮವು ಸೂರ್ಯ ನಮಸ್ಕಾರದಿಂದ ಪ್ರಾರಂಭವಾಗುತ್ತಿದ್ದು, ಬಳಿಕ ಧ್ಯಾನದೊಂದಿಗೆ ಕೊನೆಗೊಳ್ಳುತ್ತದೆ ಎಂದು ಅವರೇ ಸ್ವತಃ ಹೇಳಿದ್ದಾರೆ.

ಮಂದಿರಾ ಬೇಡಿ
ʼಸಾಹೋʼ, ʼಐಡೆಂಟಿಟಿʼ ಸಿನಿಮಾ ಖ್ಯಾತಿಯ ನಟಿ ಮಂದಿರಾ ಬೇಡಿ ಅವರು ಫಿಟ್ನೆಸ್ ಬಗ್ಗೆ ಅಧಿಕ ಕಾಳಜಿ ಹೊಂದಿದ್ದಾರೆ. ಫಿಟ್ನೆಸ್ ಬದ್ಧತೆಯಿಂದ ಆರೋಗ್ಯಕರ, ಸದೃಢವಾದ ದೇಹ ಹೊಂದಿದ್ದು, ಇದು ಅವರ ಅಂದಕ್ಕೆ ಮೆರುಗು ನೀಡಿದೆ. ಇವರ ಫಿಟ್ನೆಸ್ ದಿನಚರಿಯಲ್ಲಿ ಸ್ಕಿಪ್ಪಿಂಗ್, ಪುಷ್-ಅಪ್ಸ್, ಲಂಜ್ ಮತ್ತು ಪ್ಲ್ಯಾಂಕ್ಗಳಂತಹ ವ್ಯಾಯಾಮಗಳು ಸೇರಿವೆ. ಇದರೊಂದಿಗೆ ನಿತ್ಯ ಯೋಗವನ್ನು ಸಹ ಮಾಡುತ್ತಾರೆ. ಸಮತೋಲಿತ ಆಹಾರ ಹಾಗೂ ವ್ಯಾಯಾಮಗಳು ಸಹ ಅನುಸರಿಸುತ್ತಿದ್ದ ರಿಂದಲೂ ಹೆಚ್ಚು ಫಿಟ್ ಆ್ಯಂಡ್ ಫೈನ್ ಆಗಿ ಕಾಣಿಸಿಕೊಂಡಿದ್ದಾರೆ.

ನೀನಾ ಗುಪ್ತಾ
ʼಪಂಚಾಯತ್ʼ, ʼಗುಡ್ ಬೈʼ ಸಿನಿಮಾ ಖ್ಯಾತಿಯ ಬಾಲಿವುಡ್ ನಟಿ ನೀನಾ ಗುಪ್ತಾ ತನ್ನ ದೇಹದ ಆರೋಗ್ಯ ವೃದ್ಧಿ ಜತೆಗೆ ಫಿಟ್ ಆಗಿ ಕಾಣಬೇಕು ಎಂಬ ಕಾರಣಕ್ಕೆ ಪ್ರತಿದಿನ ಒಂದು ಗಂಟೆ ವಾಕಿಂಗ್ ಮಾಡುತ್ತಾರೆ. ಪ್ರತಿ ದಿನ ಬೆಳಗ್ಗೆ ಯೋಗ ಅಭ್ಯಾಸ ಮಾಡುತ್ತಿದ್ದು, ಇದರಿಂದ ಮಾನಸಿಕ ಆರೋಗ್ಯ ಕೂಡ ವೃದ್ಧಿ ಆಗಿದೆಯಂತೆ. ಇದರೊಂದಿಗೆ ಕೆಲವು ನಿಯಮಿತ ಆಹಾರ ಸೇವನೆಗೂ ನಟಿ ಆದ್ಯತೆ ನೀಡುತ್ತಿದ್ದಾರೆ. ಚಪಾತಿ, ಅನ್ನ ಮತ್ತು ಮೋಸರಿನೊಂದಿಗೆ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳನ್ನು ಒಳಗೊಂಡಿರುವ ಶುದ್ಧ ಆಹಾರವನ್ನು ಸೇವಿಸುತ್ತಾರೆ. ಹೀಗಾಗಿ 65 ವಯಸ್ಸಾಗಿದ್ದರೂ ನಟಿ ಇನ್ನೂ ಯಂಗ್ ಆಗಿ ಕಾಣಿಸುತ್ತಿದ್ದಾರೆ.

ಮಲೈಕಾ ಅರೋರ
ʼದಬಾಂಗ್ʼ, ʼಹೌಸ್ ಫುಲ್ʼ ಸಿನಿಮಾ ಖ್ಯಾತಿಯ ನಟಿ ಮಲೈಕಾ ಅರೋರ ಅತ್ಯುನ್ನತ ಫಿಟ್ನೆಸ್ ನಿಂದ ಪ್ರಸಿದ್ಧಿ ಪಡೆದಿದ್ದಾರೆ. ಅವರ ಫಿಟ್ನೆಸ್ ದಿನಚರಿಯು ಕಾರ್ಡಿಯೋ ವ್ಯಾಯಾಮಗಳಿಂದ ಆರಂಭವಾಗುತ್ತದೆ. ದಿನಕ್ಕೆ 100 ಸ್ಕಿಪ್ಪಿಂಗ್, 50 ಜಂಪಿಂಗ್ ಜ್ಯಾಕ್ಗಳು, 30 ಪರ್ವತಾರೋಹಿಗಳು, 20 ರಷ್ಯನ್ ಟ್ವಿಸ್ಟ್ಗಳು, 20 ಇನ್-ಔಟ್ಗಳು, 30 ಪಾಪ್ ಸ್ಕ್ವಾಟ್ಗಳು ಸೇರಿವೆ.

ಕತ್ರಿನಾ ಕೈಫ್
ʼಧೂಮ್ 3ʼ, ʼನ್ಯೂಯಾರ್ಕ್ʼ, ʼವೆಲ್ಕಮ್ʼನಂತಹ ಬಾಲಿವುಡ್ ಸಿನಿಮಾ ಖ್ಯಾತಿಯ ನಟಿ ಕತ್ರಿನಾ ಕೈಫ್ ಅವರು ಫಿಟ್ನೆಸ್ನಲ್ಲಿ ಎಲ್ಲರನ್ನು ಮೀರಿಸುವಂತಿದ್ದಾರೆ. ಅವರ ದಿನಚರಿಯಲ್ಲಿ ಹೆಚ್ಚಾಗಿ ಸ್ಕ್ವಾಟ್ ಮತ್ತು ಸೈಡ್ ಲೆಗ್ ಲಿಫ್ಟ್ಗಳು, ರಿವರ್ಸ್ ಲಂಜ್ , ಪುಶ್ ಅಪ್, ಪ್ಲಾಂಕ್ ಹಾಗೂ ಇತರ ಕೆಲವು ಆಸನಗಳನ್ನು ನಿತ್ಯ ಮನೆಯಲ್ಲಿಯೇ ಪ್ರ್ಯಾಕ್ಟೀಸ್ ಮಾಡುತ್ತಿರುತ್ತಾರೆ. ಹೀಗಾಗಿ ನಟಿ ಕತ್ರಿನಾ ಈಗಲೂ ಬಳುಕುವ ಬಳ್ಳಿಯಂತೆ ಹೆಚ್ಚು ಫಿಟ್ ಆಗಿದ್ದಾರೆ.

ಮಿಲಿಂದ್ ಸೋಮನ್
ʼಒನ್ ಫ್ರೈ ಡೇ ನೈಟ್ʼ, ʼಶಫ್ʼ, ʼಡಾಕ್ಟರ್ʼ, ʼಎಮರ್ಜೆನ್ಸಿʼ ಸಿನಿಮಾ ಖ್ಯಾತ ನಟ ಮಿಲಿಂದ್ ಸೋಮನ್ ಪ್ರತಿದಿನ 10-20 ನಿಮಿಷಗಳ ವ್ಯಾಯಾಮ ಮಾಡುತ್ತಲೇ ತಮ್ಮ ದಿನಚರಿ ಆರಂಭಿಸುತ್ತಾರಂತೆ. 5 ನಿಮಿಷಗಳ ಪ್ಲ್ಯಾಂಕ್, 50 ಪುಷ್ಅಪ್, ಪುಲ್-ಅಪ್ ಬಾರ್ , 2-5 ನಿಮಿಷದ ತನಕ ಕೆಟಲ್ಬೆಲ್ ಎಸೆಯುತ್ತಾ ನಿತ್ಯ ವ್ಯಾಯಾಮ ಮಾಡುತ್ತಾರೆ. ಇದರೊಂದಿಗೆ ಸೈಕಲ್ ತುಳಿಯುವುದು, ವಾಕಿಂಗ್ ಮಾಡುವುದು, ಈಜುವುದು ಸಹ ಅಭ್ಯಾಸ ಮಾಡುತ್ತಾರೆ.