Dr Pathanjali Acharya Column: ಥೈರಾಯ್ಡ್ ಗ್ರಂಥಿಯ ಬಲವರ್ಧಕ ಆಸನ
ಎಡ ಮತ್ತು ಬಲ ಭಾಗದ ಕಾಲುಗಳ ಅಂಗುಷ್ಠಗಳನ್ನು (ಹೆಬ್ಬೆರಳುಗಳನ್ನು) ಆಯಾ ಭಾಗದ ಕೈಗಳಿಂದ ಹಿಡಿದುಕೊಳ್ಳಬೇಕು. ತೊಡೆಗಳನ್ನು ನೆಲಕ್ಕೆ ತಾಗಿಸಿಟ್ಟುಕೊಂಡು, ತಲೆಯ ಮೇಲೆ ಭಾರಹಾಕಿ, ಸಾಧ್ಯ ವಾದಷ್ಟು ಹಿಂದಕ್ಕೆ ಬೆನ್ನನ್ನು ಮಡಿಸಬೇಕು. ಹೀಗೆ ಮಾಡಿದಾಗ ಎದೆಯ ಭಾಗವು ಮೇಲಕ್ಕೆ ಎತ್ತರಿಸಿ ಕೊಂಡು ದೃಷ್ಟಿಯು ಎದುರಿಗೆ ನೆಟ್ಟಿರುವಂತಿರಬೇಕು. ಈ ಆಸನ ವನ್ನು ಶುರುವಿನಲ್ಲಿ 30 ಸೆಕೆಂಡುಗಳವರೆಗೆ ಆಚರಿಸಿ, ಕ್ರಮೇಣ 3 ನಿಮಿಷಗಳವರೆಗೆ ವಿಸ್ತರಿಸ ಬಹುದು


ಡಾ.ಪತಂಜಲಿ ಆಚಾರ್ಯ
ಮತ್ಸ್ಯಾಸನ: ಮತ್ಸ್ಯ ಎಂದರೆ ಮೀನು ಎಂದರ್ಥ. ಈ ಆಸನದ ಭಂಗಿಯು ಮೀನಿನ ಚಹರೆ ಯನ್ನು ಹೋಲುವುದರಿಂದ ಇದಕ್ಕೆ ಮತ್ಸ್ಯಾಸನ ಎಂಬ ಹೆಸರು ಬಂದಿದೆ. ಸರ್ವಾಂಗಾ ಸನವನ್ನು ಆಚರಿಸಿದ ನಂತರ ಈ ಆಸನವನ್ನು ಅಭ್ಯಾಸ ಮಾಡುವುದು ಒಳಿತು. ಅಭ್ಯಾಸ ಕ್ರಮ: ಮೊದಲಿಗೆ ಪದ್ಮಾಸನವನ್ನು ಹಾಕಿ ಕೆಲ ಕ್ಷಣ ಕುಳಿತುಕೊಳ್ಳಿ. ನಂತರ ಹಾಗೆಯೇ ಹಿಂದಕ್ಕೆ ಬಾಗುತ್ತಾ ಅಂಗಾತ ಮಲಗಬೇಕು. ಎಡ ಮತ್ತು ಬಲ ಭಾಗದ ಕಾಲುಗಳ ಅಂಗುಷ್ಠಗಳನ್ನು (ಹೆಬ್ಬೆರಳುಗಳನ್ನು) ಆಯಾ ಭಾಗದ ಕೈಗಳಿಂದ ಹಿಡಿದುಕೊಳ್ಳಬೇಕು. ತೊಡೆಗಳನ್ನು ನೆಲಕ್ಕೆ ತಾಗಿಸಿಟ್ಟುಕೊಂಡು, ತಲೆಯ ಮೇಲೆ ಭಾರಹಾಕಿ, ಸಾಧ್ಯ ವಾದಷ್ಟು ಹಿಂದಕ್ಕೆ ಬೆನ್ನನ್ನು ಮಡಿಸಬೇಕು. ಹೀಗೆ ಮಾಡಿದಾಗ ಎದೆಯ ಭಾಗವು ಮೇಲಕ್ಕೆ ಎತ್ತರಿಸಿ ಕೊಂಡು ದೃಷ್ಟಿಯು ಎದುರಿಗೆ ನೆಟ್ಟಿರುವಂತಿರಬೇಕು. ಈ ಆಸನವನ್ನು ಶುರುವಿನಲ್ಲಿ 30 ಸೆಕೆಂಡುಗಳವರೆಗೆ ಆಚರಿಸಿ, ಕ್ರಮೇಣ 3 ನಿಮಿಷಗಳವರೆಗೆ ವಿಸ್ತರಿಸಬಹುದು.
ಇದನ್ನೂ ಓದಿ: Dr Pathanjali Acharya Column: ಬೆನ್ನುಮೂಳೆಯನ್ನು ಚುರುಕಾಗಿಸುವ ಉಪಾಯ
ಪ್ರಯೋಜನಗಳು: ಮತ್ಸ್ಯಾಸನದ ಆಚರಣೆಯಿಂದಾಗಿ ಉಸಿರಾಟದ ಕ್ರಮವು ಬಲ ಗೊಳ್ಳುವುದು, ಜಠರಕ್ಕೆ ಸಂಬಂಧಿಸಿದ ಎಲ್ಲ ಅಂಗಗಳೂ ಚುರುಕುಗೊಳ್ಳುವುವು. ಹೆಚ್ಚಿನ ರಕ್ತಸಂಚಾರದಿಂದಾಗಿ ಥೈರಾಯ್ಡ್ ಗ್ರಂಥಿಯು ಚುರುಕುಗೊಂಡು, ಪುನಶ್ಚೇತನ ಪಡೆದು ಕೊಳ್ಳುವುದು.