Viral Video: ಸೆಲ್ಫಿಗೆ ಪೋಸ್ ನೀಡಲು 100 ರೂ. ಚಾರ್ಚ್ ಮಾಡುವ ವಿದೇಶಿ ಮಹಿಳೆ; ಇದು ಹಣ ವಸೂಲಿ ಮಾಡುವ ಉಪಾಯ ಎಂದ ನೆಟ್ಟಿಗರು
Viral Video: ವಿದೇಶಿ ಮಹಿಳೆಯೊಬ್ಬಳು ಭಾರತದಲ್ಲಿ ಪೋಸ್ ಕೊಡಲು ಮತ್ತು ಫೋಟೋ ಕ್ಲಿಕ್ ಮಾಡಲು ಬಯಸುವ ಸ್ಥಳೀಯರಿಗೆ 100 ರೂ. ಚಾರ್ಜ್ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾಳೆ. ಫೋಟೋ ಪ್ಲೀಸ್ ಎಂದು ಕೇಳಿಕೊಂಡು ಬರುವ ಪ್ರವಾಸಿಗರಿಂದ ಸೆಲ್ಫಿಗೆ 100 ರೂ. ಚಾರ್ಜ್ ಮಾಡಿದ್ದಾಳೆ.
Source : Free press journal
ನವ ದೆಹಲಿ, ಜ. 16, 2025: ಭಾರತದ ವೈವಿಧ್ಯಮಯ ಸ್ಥಳಗಳನ್ನು ಕಣ್ತುಂಬಿಕೊಳ್ಳಲು ವಿದೇಶಿ ಪ್ರವಾಸಿಗರು ವಿವಿಧ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಅದರಲ್ಲೂ ಭಾರತದಲ್ಲಿನ ಜನಪ್ರಿಯ ಬೀಚ್ ತಾಣ ಗಳಿಗೆ ವಿದೇಶಿಗರು ಭೇಟಿ ನೀಡುವುದು ಹೆಚ್ಚು. ಹಾಗಾಗಿ ವಿದೇಶಿ ಪ್ರವಾಸಿಗರು ಎಲ್ಲೆ ಸಿಕ್ಕರೂ ಹೆಚ್ಚಿನ ಪ್ರವಾಸಿಗರು ಉತ್ಸುಕರಾಗಿ ಸೆಲ್ಫಿಗಾಗಿ ಮುಗಿಬೀಳುತ್ತಾರೆ. ಅದರಲ್ಲೂ ವಿದೇಶಿ ಮಹಿಳೆಯರು ಕಾಣ ಸಿಕ್ಕಾಗ ಪ್ಲೀಸ್ ಸೆಲ್ಫಿ ಎಂದು ಮನವಿ ಮಾಡುವ ಪ್ರವಾಸಿಗರೂ ಇದ್ದಾರೆ. ಇದೀಗ ಭಾರತೀಯ ಬೀಚ್‌ನಲ್ಲಿ ವಿದೇಶಿ ಮಹಿಳೆಯೊಬ್ಬರು ಸೆಲ್ಫಿ ಕೊಟ್ಟು ಹಣ ವಸೂಲಿ ಮಾಡುವ ವಿಡಿಯೊ ವೊಂದು ಬಹಳಷ್ಟು ವೈರಲ್ ಆಗುತ್ತಿದೆ (Viral Video).
ವಿದೇಶಿ ಮಹಿಳೆಯೊಬ್ಬಳು ಪೋಸ್ ಕೊಡಲು ಮತ್ತು ಫೋಟೋ ಕ್ಲಿಕ್ ಮಾಡಲು ಬಯಸುವ ಸ್ಥಳೀಯರಿಗೆ 100 ರೂ. ಚಾರ್ಜ್ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆಯುವ ಜತೆಗೆ ಆಶ್ಚರ್ಯ ಹುಟ್ಟಿಸಿದ್ದಾಳೆ. ʼʼಫೋಟೋ ಪ್ಲೀಸ್" ಎಂದು ಕೇಳಿಕೊಂಡ ಪ್ರವಾಸಿಗರಿಗೆ 100 ರೂ. ಚಾರ್ಜ್ ಮಾಡಿದ್ದಾಳೆ. ಈಕೆ ಪ್ರವಾಸಿಗರೊಂದಿಗೆ ಫೋಟೋ ತೆಗೆಯಲು ನಿರಾಕರಿಸುತ್ತಿಲ್ಲ. ಬದಲಿಗೆ ತನ್ನೊಂ ದಿಗೆ ಫೋಟೊ ಕ್ಲಿಕ್ಕಿಸಲು ಇಚ್ಛಿಸುವ ಪ್ರವಾಸಿಗರಿಂದ 100 ರೂ. ಮೊತ್ತವನ್ನು ವಸೂಲಿ ಮಾಡುವ ವಿವರವನ್ನು ಆಕೆ ಬಹಿರಂಗಪಡಿಸಿದ್ದಾಳೆ. "1 ಸೆಲ್ಫಿಗೆ 100 ರೂ." ಎಂದು ಬೀಚ್‌ನಲ್ಲಿ ಅಳವಡಿಸಿಕೊಂಡಿರುವ ಫಲಕ ವೈರಲ್ ಆಗಿದೆ.
ಹೀಗೆ ಏಂಜೆಲಿನಾಲಿ 777 ಎಂದು ಗುರುತಿಸಲಾದ ಮಹಿಳೆಯ ಜತೆ ಪ್ರವಾಸಿಗರು 100 ರೂ. ಕೊಟ್ಟು ಫೋಟೋ ಕ್ಲಿಕಿಸಿಕೊಳ್ಳುವ ವಿಡಿಯೊ ಬಹಳಷ್ಟು ಸದ್ದು ಮಾಡುತ್ತಿದೆ. ಈ ವಿಡಿಯೊ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಡ್ರೈವಿಂಗ್ ಕಲಿಯುವಾಗ ಪೊಲೀಸ್ ಅಧಿಕಾರಿಯ ಅವಾಂತರ; ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಕಾರು
ಒಬ್ಬ ಬಳಕೆದಾರ ʼʼಹಣ ಮಾಡುವ ಉಪಾಯ ಕಂಡುಕೊಂಡಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ. ಮೊತ್ತೊಬ್ಬರು ʼʼನಮ್ಮ ತೆರಿಗೆ ಸಚಿವರು ನಿಮಗೆ ಶೀಘ್ರ ತೆರಿಗೆ ವಿಧಿಸುತ್ತಾರೆ" ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ನಿಮ್ಮ ಮೊತ್ತ ಹೆಚ್ಚಿಸಿ ರೂ 1,000 ಶುಲ್ಕ ವಿಧಿಸಿ ಎಂದು ಸಲಹೆ ನೀಡಿದ್ದಾರೆ.