Viral Video: ಬರ್ತ್‌ಡೇಯಂದು ಅಜ್ಜಿಗೆ ಸರ್‌ಪ್ರೈಸ್ ನೀಡಿದ ಮೊಮ್ಮಗಳು; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ
Viral Video: ಅಜ್ಜಿಯ ಹುಟ್ಟುಹಬ್ಬಕ್ಕೆ ದುಬೈನಲ್ಲಿದ್ದ ಮೊಮ್ಮಗಳು ತನ್ನ ಊರಾದ ಕೇರಳಕ್ಕೆ ಸರ್ಪ್ರೈಸ್ ಭೇಟಿ ನೀಡಿದ್ದಾರೆ. ಹುಟ್ಟುಹಬ್ಬದಂದು ತನ್ನ ಮುದ್ದಿನ ಮೊಮ್ಮಗಳನ್ನು ನೋಡಿದ ಅಜ್ಜಿಯ ಪ್ರತಿಕ್ರಿಯೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Source : Free press jounal
ತಿರುವನಂತಪುರಂ, ಜ.17, 2025: ಮೊಮ್ಮಕ್ಕಳು ಹಾಗೂ ಅಜ್ಜಿಯ ಸಂಬಂಧ ಯಾವಾಗಲೂ ವಿಶೇಷವಾದುದು. ಅಜ್ಜಿಯಂದಿಯರಿಗೆ ಮೊಮ್ಮಕ್ಕಳ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ಸೋಶಿಯಲ್ ಮೀಡಿಯಾದಲ್ಲೊಂದು ಅಜ್ಜಿ-ಮೊಮ್ಮಗಳ ಪ್ರೀತಿಯ ವಿಡಿಯೊವೊಂದು ಹರಿದಾಡುತ್ತಿದೆ. ಅಜ್ಜಿಯ ಹುಟ್ಟುಹಬ್ಬಕ್ಕಾಗಿ ಮೊಮ್ಮಗಳು ದುಬೈನಿಂದ ಸರ್‌ಪ್ರೈಸ್ ಭೇಟಿ ನೀಡಿದ್ದಾಳೆ. ಈ ಮೊಮ್ಮಗಳನ್ನು ನೋಡಿ ಅಜ್ಜಿ ಕೂಡ ಸಖತ್ ಖುಷಿಯಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್(Viral Video) ಆಗಿದೆ.
ದುಬೈನಲ್ಲಿ ವಾಸಿಸುತ್ತಿದ್ದ ಝೈನಬ್ ರೋಶ್ನಾ ತನ್ನ ಪ್ರೀತಿಯ ಅಜ್ಜಿಯ ಹುಟ್ಟುಹಬ್ಬದಂದು ಸರ್ಪ್ರೈಸ್ ಆಗಿ ಕೇರಳಕ್ಕೆ ಭೇಟಿ ನೀಡಿದ್ದಾಳೆ. ಝೈನಬ್ ತನ್ನ ಊರಿಗೆ ಬಂದು ಅಜ್ಜಿಯ ಕೋಣೆಗೆ ಹೋಗುವ ದೃಶ್ಯ ವಿಡಿಯೊದಲ್ಲಿ ರೆಕಾರ್ಡ್ ಆಗಿದೆ. ಎರಡು ವರ್ಷಗಳ ನಂತರ ತನ್ನ ಮೊಮ್ಮಗಳನ್ನು ನೋಡಿದ ಅಜ್ಜಿಗೆ ಖುಷಿಯಿಂದ ಮಾತೇ ಬರದೇ ಅವಳನ್ನು ಅಪ್ಪಿ ಮುದ್ದಾಡಿದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ವಿಡಿಯೊದಲ್ಲಿ ಏನಿದೆ?
ಮೊಮ್ಮಗಳು ತನ್ನ ಕಡೆಗೆ ಬರುವುದನ್ನು ನೋಡಿದ ಅಜ್ಜಿಯ ಕಣ್ಣುಗಳು ಸಂತೋಷದಿಂದ ದೊಡ್ಡದಾದವು. ನಂತರ ಅಜ್ಜಿ ಮೊಮ್ಮಗಳನ್ನು ಬಿಗಿಯಾಗಿ ತಬ್ಬಿಕೊಂಡು ಕೆನ್ನೆಗೆ ಮುತ್ತಿಟ್ಟಿದ್ದಾರೆ. ತನ್ನ ಹುಟ್ಟುಹಬ್ಬದಂದು ಝೈನಬ್ ನೀಡಿದ ಸರ್‌ಪ್ರೈಸ್ ಭೇಟಿಯಿಂದ ಅಜ್ಜಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಝೈನಬ್ "ಉಮ್ಮುಮ್ಮಾ" ಎಂದು ಸಂಬೋಧಿಸುತ್ತಿದ್ದ ಹಾಗೇ ಅಜ್ಜಿ ತನ್ನ ಮೊಮ್ಮಗಳನ್ನು ತನ್ನ ಹತ್ತಿರ ಕೂರಿಸಿಕೊಂಡು ಮುದ್ದಾಡಿದ್ದಾರೆ.
ಕಳೆದ ವರ್ಷ ತನ್ನ ಅಜ್ಜಿಯೊಂದಿಗೆ ವಿಡಿಯೊ ಕರೆಯಲ್ಲಿ ಮಾತ್ರ ಮಾತನಾಡಿದ್ದೇನೆ. ಹಾಗಾಗಿ ಈ ವರ್ಷ ಅಜ್ಜಿಯನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಆಶ್ಚರ್ಯಗೊಳಿಸಿದ್ದೇನೆ ಎಂದು ಝೈನಬ್ ಹೇಳಿದ್ದಾಳೆ. "ಕಳೆದ ವರ್ಷ, ನನ್ನ ಉಮ್ಮುಮ್ಮಾ ಜನ್ಮದಿನದಂದು ನಾನು ನನ್ನ (ಎಮಿರೇಟ್ಸ್ ವಿಮಾನದ) ಸಮವಸ್ತ್ರವನ್ನು ಧರಿಸಿ ವಿಡಿಯೊ ಕರೆ ಮಾಡಿ ಅವಳನ್ನು ಆಶ್ಚರ್ಯಗೊಳಿಸಿದ್ದೆ. ಆದರೆ ಈ ವರ್ಷ ಅದೇ ಸಮಯದಲ್ಲಿ ನಾನು ನನ್ನ ಮನೆಯ ಮುಂದೆ ಇದ್ದೇನೆ " ಎಂದು ಈಗ ವೈರಲ್ ಆಗಿರುವ ವಿಡಿಯೊದಲ್ಲಿ ಖುಷಿ ಹಂಚಿಕೊಂಡಿದ್ದಾಳೆ.
ಈ ಸುದ್ದಿಯನ್ನೂ ಓದಿ:Pushpa2: ಪುಷ್ಪಾ 2 ಚಿತ್ರದ 'ಪೀಲಿಂಗ್ಸ್' ಹಾಡಿಗೆ ಮೊಮ್ಮಗನ ಜೊತೆ ಅಜ್ಜಿಯ ಸಖತ್ ಸ್ಟೆಪ್- ವಿಡಿಯೊ ಇದೆ
ಝೈನಾಬ್ ಜನವರಿ 6ರಂದು ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಈ ವಿಡಿಯೊ ಈಗಾಗಲೇ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ರೀಲ್ 2.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು 99,000ಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿದೆ. ಅಜ್ಜಿ ಮತ್ತು ಮೊಮ್ಮಕ್ಕಳ ನಡುವಿನ ಸುಂದರವಾದ ಸಂಬಂಧವನ್ನು ಪ್ರತಿಬಿಂಬಿಸಿದ್ದಕ್ಕಾಗಿ ಈ ವಿಡಿಯೊ ನೆಟ್ಟಿಗರ ಹೃದಯವನ್ನು ಗೆದ್ದಿದೆ ಎನ್ನಲಾಗಿದೆ.