Pushpa2: ಪುಷ್ಪಾ 2 ಚಿತ್ರದ 'ಪೀಲಿಂಗ್ಸ್' ಹಾಡಿಗೆ ಮೊಮ್ಮಗನ ಜೊತೆ ಅಜ್ಜಿಯ ಸಖತ್ ಸ್ಟೆಪ್- ವಿಡಿಯೊ ಇದೆ
ಪುಷ್ಪಾ 2(Pushpa2) ಚಿತ್ರದಲ್ಲಿ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅವರ 'ಪೀಲಿಂಗ್ಸ್' ಹಾಡಿಗೆ ಅಜ್ಜಿಯೊಬ್ಬರು ತಮ್ಮ ಮೊಮ್ಮಗನ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ. ಅಜ್ಜಿ ಈ ರೋಮಾಂಚಕ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೊ ಅವರ ಮೊಮ್ಮಗ ಇನ್‌ಸ್ಟಾಗ್ರಾಂ ಪೋಸ್ಟ್ ಮಾಡಿದ್ದು, ಇದು ವೈರಲ್ ಆಗಿದೆ.
Vishwavani News
December 23, 2024
ನವದೆಹಲಿ: ಪುಷ್ಪಾ 2(Pushpa2) ಈ ತಿಂಗಳ ಆರಂಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ಮತ್ತು ಜನರು ಅದರ ಹಾಡುಗಳಿಗೆ ಕುಣಿದು ಕುಪ್ಪಳಿಸುತ್ತಿದ್ದಾರೆ. ಮತ್ತು ಕೆಲವರೂ ಚಿತ್ರದ ಕೆಲವು ದೃಶ್ಯವನ್ನು ಮರುಸೃಷ್ಟಿಸುತ್ತಿದ್ದಾರೆ. ಇತ್ತೀಚಿಗೆ ಚಿತ್ರದ ಕೆಲವು ಹಾಡುಗಳಿಗೆ ಹಲವಾರು ಯುವ ಅಭಿಮಾನಿಗಳು ಡ್ಯಾನ್ಸ್ ರೀಲ್‍ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇದೀಗ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಹಾಡಿಗೆ ಅಜ್ಜಿಯೊಬ್ಬರು ತಮ್ಮ ಮೊಮ್ಮಗನ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ. ಅಜ್ಜಿ ಈ ರೋಮಾಂಚಕ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೊ ಅವರ ಮೊಮ್ಮಗ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಇದು ವೈರಲ್ ಆಗಿದೆ.
View this post on Instagram A post shared by Akshay Partha (@akshay_partha)
ವೈರಲ್ ವಿಡಿಯೊದಲ್ಲಿ, ಅಜ್ಜಿಯೊಬ್ಬರು ತಮ್ಮ ಮೊಮ್ಮಗನೊಂದಿಗೆ 'ಪೀಲಿಂಗ್ಸ್' ಬೀಟ್‍ಗೆ ಡ್ಯಾನ್ಸ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸೀರೆ ಉಟ್ಟ ಅಜ್ಜಿ ಕ್ಯಾಮೆರಾಗೆ ಎದುರಾಗಿ ಹಾಡಿನ ಸಾಹಿತ್ಯಕ್ಕೆ ಲಿಪ್ ಸಿಂಕ್ ಮಾಡಿದ್ದಾರೆ. ಶುರುವಿನಲ್ಲಿ ಅಜ್ಜಿ ತಮ್ಮ ಮುಖಭಾವದ ಮೂಲಕ ವೀಕ್ಷಕರನ್ನು ಬೆರಗುಗೊಳಿಸಿದ್ದಾರೆ. ನಂತರ ಅವರ ಮೊಮ್ಮಗ ಅಕ್ಷಯ್ ಪಾರ್ಥ ಅವರೊಂದಿಗೆ ಕೆಲವು ಡ್ಯಾನ್ಸ್ ಸ್ಟೆಪ್‍ಗಳನ್ನು ಹಾಕಿದ್ದಾರೆ.
ಈ ಸುದ್ದಿಯನ್ನೂ ಓದಿ:ಎಂಟು ಬಾರಿ ಪಲ್ಟಿಯಾಗಿ ಬಿದ್ದ ಕಾರು; ರಣ ಭೀಕರ ಅಪಘಾತದಿಂದ ಪಾರಾದವರು ಕುಡಿಯೋಕೆ ಟೀ ಕೇಳಿದ್ರಂತೆ! ವಿಡಿಯೊ ಇದೆ
ಸೋಶಿಯಲ್ ಮೀಡಿಯಾದಲ್ಲಿ ಸೀರೆಯನ್ನು ಧರಿಸಿ, ಕರುಣಾಮಯಿ ನಗುವನ್ನು ಬೀರುತ್ತಾ ಅಜ್ಜಿ ಪುಷ್ಪಾ 2 ಹಾಡಿನ ಅಪ್ರತಿಮ ನೃತ್ಯ ಚಲನೆಗಳನ್ನು ಮರುಸೃಷ್ಟಿಸಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್ ಡ್ಯಾನ್ಸ್ ವಿಡಿಯೊದಲ್ಲಿ ಅಜ್ಜಿ ತಮ್ಮ ಅದ್ಭುತವಾದ ನೃತ್ಯದಿಂದ ಅನೇಕ ಜನರನ್ನು ಮೆಚ್ಚಿಸಿದ್ದಾರೆ. ಡ್ಯಾನ್ಸ್ ರೀಲ್ ಅನ್ನು ಡಿಸೆಂಬರ್ 14 ರಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿದೆ. ಇದು ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. 'ಪೀಲಿಂಗ್ಸ್' ಹಾಡಿಗೆ ಅಜ್ಜಿ-ಮೊಮ್ಮಗ ಜೋಡಿಯ ನೃತ್ಯ ಪ್ರದರ್ಶನವನ್ನು ಹೊಗಳಿ ಅನೇಕರು ಕಾಮೆಂಟ್ ವಿಭಾಗದಲ್ಲಿ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ.