WPL 2025: ಆರ್‌ಸಿಬಿಗೆ ಮೊದಲ ಎದುರಾಳಿ ಗುಜರಾತ್, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!
2025ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದೆ. ಫೆಬ್ರವರಿ 14 ರಿಂದ ಆರಂಭವಾಗುವ ಟೂರ್ನಿಯು ಮಾರ್ಚ್ 15 ರಂದು ಫೈನಲ್ ಮೂಲಕ ಅಂತ್ಯವಾಗಲಿದೆ. ವಡೋದರ, ಬೆಂಗಳೂರು, ಲಖನೌ ಹಾಗೂ ಮುಂಬೈನಲ್ಲಿ ಪಂದ್ಯಗಳು ನಡೆಯಲಿವೆ.
ನವದೆಹಲಿ: ಮುಂಬರುವ 2025ರ ಮಹಿಳಾ ಪ್ರೀಮಿಯರ್ ಲೀಗ್ (WPL 2025) ಟೂರ್ನಿಯ ವೇಳಾಪಟ್ಟಿ ಗುರುವಾರ ಬಿಡುಗಡೆಯಾಗಿದೆ. ಫೆಬ್ರವರಿ 14 ರಂದು ನಡೆಯುವ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮಾರ್ಚ್ 15 ರಂದು ಫೈನಲ್ ಪಂದ್ಯದ ಮೂಲಕ ಈ ಟೂರ್ನಿಯು ಅಂತ್ಯವಾಗಲಿದೆ.
ಇದೇ ಮೊದಲ ಬಾರಿ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟೂರ್ನಿಯು ನಾಲ್ಕು ನಗರಗಳಲ್ಲಿ ನಡೆಯಲಿದೆ. ವಡೋದರ, ಬೆಂಗಳೂರು, ಲಖನೌ ಹಾಗೂ ಮುಂಬೈನಲ್ಲಿ ಟೂರ್ನಿಯ ಪಂದ್ಯಗಳು ಜರುಗಲಿವೆ. ಕಳೆದ ಟೂರ್ನಿಯ ಮೊದಲ ಲೆಗ್ ಪಂದ್ಯಗಳಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವನ್ನು ವಹಿಸಿತ್ತು. ವಡೋದರದ ಕೊಟಂಬಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೂರು ಪಂದ್ಯಗಳ ಮಹಿಳಾ ಒಡಿಐ ಸರಣಿ ನಡೆದಿತ್ತು.
WPL 2025: ಗಾಯಾಳು ಸೋಫಿ ಬದಲು ಆರ್‌ಸಿಬಿ ಸೇರಿದ ಚಾರ್ಲಿ ಡೀನ್
ಲಖನೌದ ಏಕನಾ ಸ್ಟೇಡಿಯಂನಲ್ಲಿ ಅಲೀಸಾ ಹೀಲಿ ನಾಯಕತ್ವದ ಯುಪಿ ವಾರಿಯರ್ಸ್ ಮಾರ್ಚ್ 3 ರಿಂದ ಮೂರು ಪಂದ್ಯಗಳನ್ನು ಆಡಲಿದೆ. ಇನ್ನು ಮುಂಬೈನ ದಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಮೈದಾನದಲ್ಲಿ ಟೂರ್ನಿಯ ಕೊನೆಯ ಲೆಗ್ ಪಂದ್ಯಗಳು ಜರುಗಲಿವೆ. ಎರಡು ಪ್ಲೇಆಫ್ ಪಂದ್ಯಗಳ ಜೊತೆಗೆ ಮಾರ್ಚ್ 15 ರಂದು ಫೈನಲ್ ಹಣಾಹಣಿ ನಡೆಯಲಿದೆ. ಮಾರ್ಚ್ 13 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.
2023ರ ಚಾಂಪಿಯನ್ಸ್ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಫೆಬ್ರವರಿ 15 ರಂದು ಮುಖಾಮುಖಿಯಾಗಲಿವೆ. ಕೊನೆಯ ಬಾರಿ ಆರ್‌ಸಿಬಿ ಎದುರು ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಸೋತಿತ್ತು. ಗುಜರಾತ್ ಜಯಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಇನ್ನೂ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.
2025ರ ಮಹಿಳಾ ಪ್ರೀಮಿಯರ್ ಲೀಗ್ ಸಂಪೂರ್ಣ ವೇಳಾಪಟ್ಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳ ವಿವರ
ಫೆಬ್ರವರಿ 14: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜಯಂಟ್ಸ್ (ವಡೋದರ)
ಫೆಬ್ರವರಿ 17: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್ (ವಡೋದರ)
ಫೆಬ್ರವರಿ 21: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ (ಬೆಂಗಳೂರು)
ಫೆಬ್ರವರಿ 24: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್ (ಬೆಂಗಳೂರು)
ಫೆಬ್ರವರಿ 27: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜಯಂಟ್ಸ್ (ಬೆಂಗಳೂರು)
ಮಾರ್ಚ್ 01: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್ (ಬೆಂಗಳೂರು)