WPL 2025: ಗಾಯಾಳು ಸೋಫಿ ಬದಲು ಆರ್‌ಸಿಬಿ ಸೇರಿದ ಚಾರ್ಲಿ ಡೀನ್
WPL 2025: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟೂರ್ನಿಯ ಪಂದ್ಯಗಳು ಈ ಬಾರಿ ನಾಲ್ಕು ನಗರಗಳಲ್ಲಿ ನಡೆಯಲಿವೆ ಎಂದು ವರದಿಯಾಗಿದೆ.
ಬೆಂಗಳೂರು, ಜ.16, 2025: ಮೂರನೇ ಆವೃತ್ತಿಯ ಡಬ್ಲ್ಯೂಪಿಎಲ್ ಆರಂಭಕ್ಕೂ ಮುನ್ನವೇ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ಆಘಾತವೊಂದು ಎದುರಾಗಿದೆ. ಸೋಫಿ ಮೊಲಿನೆಕ್ಸ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಬದಲಿ ಆಟಗಾತ್ರಿಯಾಗಿ ಚಾರ್ಲಿ ಡೀನ್ ಸೇರ್ಪಡೆಗೊಂಡಿದ್ದಾರೆ.
ಕಳೆದ ವರ್ಷ ನಡೆದಿದ್ದ ಆಟಗಾರ್ತಿಯರ ಮಿನಿ ಹರಾಜಿನಲ್ಲಿ 24 ವರ್ಷದ ಚಾರ್ಲಿ ಡೀನ್ ಅವರನ್ನು ಯಾರೂ ಖರೀದಿ ಮಾಡಿರಲಿಲ್ಲ. ಇದೀಗ ಅವರಿಗೆ ಅವಕಾಶವೊಂದು ಒದಗಿ ಬಂದಿಗೆ. 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಅವರು ಆರ್‌ಸಿಬಿ ಫ್ರಾಂಚೈಸಿ ಸೇರಿದ್ದಾರೆ.
ಇಂಗ್ಲೆಂಡ್ ಪರ 36 ಟಿ20 ಪಂದ್ಯಗಳನ್ನಾಡಿರುವ ಚಾರ್ಲಿ ಡೀನ್ ಈವರೆಗೆ 46 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದರೊಂದಿಗೆ 12 ಇನಿಂಗ್ಸ್ಗಳಲ್ಲಿ 135 ರನ್ ಕಲೆಹಾಕಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟೂರ್ನಿಯ ಪಂದ್ಯಗಳು ಈ ಬಾರಿ ನಾಲ್ಕು ನಗರಗಳಲ್ಲಿ ನಡೆಯಲಿವೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ ಶುಕ್ಲಾ ತಿಳಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಲಖನೌ, ಮುಂಬೈ, ಬರೋಡಾ ಮತ್ತು ಬೆಂಗಳೂರಿನಲ್ಲಿ ಆಯೋಜನೆಗೊಳ್ಳುವ ಸಾಧ್ಯತೆ ಇದೆ. ಆದರೆ ಈ ಕುರಿತು ಇನ್ನಷ್ಟೇ ಅಂತಿಮ ನಿರ್ಧಾರ ಹೊರಬೀಳಬೇಕಿದೆ.
ಆರ್‌ಸಿಬಿ ಮಹಿಳಾ ತಂಡ
ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ, ರಿಚಾ ಘೋಷ್, ರೇಣುಕಾ ಸಿಂಗ್, ಜಾರ್ಜಿಯಾ ವೇರ್‌ಹ್ಯಾಮ್, ಸೋಫಿ ಡಿವೈನ್, ಕೇಟ್ ಕ್ರಾಸ್, ಸಬ್ಬಿನೇನಿ ಮೇಘನಾ, ಶ್ರೇಯಾಂಕಾ ಪಾಟೀಲ್, ಆಶಾ ಸೊಭಾನಾ, ಏಕ್ತಾ ಬಿಷ್ತ್, ಕನಿಕಾ ಅಹುಜಾ, ಡೇನಿಯಲ್ ವ್ಯಾಟ್, ಪ್ರೇಮಾ ರಾವತ್, ಜೋಶಿತಾ ವಿಜೆ, ರಾಘವಿ ಬಿಸ್ತ್, ಜಾಗರವಿ ಪವಾರ್, ಚಾರ್ಲಿ ಡೀನ್.