Aamir Khan: ಗುರುನಾನಕ್ ಪಾತ್ರದಲ್ಲಿ ಆಮಿರ್ ಖಾನ್! ರಿಲೀಸ್ ಆದ ಟೀಸರ್‌ನಲ್ಲೇನಿದೆ? ಏನಿದರ ಅಸಲಿಯತ್ತು?
ಆಮೀರ್ ಖಾನ್ ಅವರು ಗುರು ನಾನಕ್ ಅವರ ಜೀವನ ಚರಿತೆಯ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಏಪ್ರಿಲ್ 25 ರಂದು, ಯಾವುದೇ ನಿರ್ಮಾಣ ಸಂಸ್ಥೆಯೊಂದಿಗೆ ಅಧಿಕೃತ ಸಂಪರ್ಕವಿಲ್ಲದ ಯೂಟ್ಯೂಬ್ ಚಾನೆಲ್, ಆಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಮತ್ತು ಕರೀನಾ ಕಪೂರ್ ನಟಿಸಿರುವ ಗುರುನಾನಕ್ ಜೀವನಚರಿತ್ರೆಯ 'ಟೀಸರ್' ಅನ್ನು ಹಂಚಿಕೊಂಡಿತು .


ಮುಂಬೈ: ಆಮೀರ್ ಖಾನ್ (Aamir Khan) ಅವರು ಗುರು ನಾನಕ್ ಅವರ ಜೀವನ ಚರಿತೆಯ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಏಪ್ರಿಲ್ 25 ರಂದು, ಯಾವುದೇ ನಿರ್ಮಾಣ ಸಂಸ್ಥೆಯೊಂದಿಗೆ ಅಧಿಕೃತ ಸಂಪರ್ಕವಿಲ್ಲದ ಯೂಟ್ಯೂಬ್ ಚಾನೆಲ್, ಆಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಮತ್ತು ಕರೀನಾ ಕಪೂರ್ ನಟಿಸಿರುವ ಗುರುನಾನಕ್ ಜೀವನಚರಿತ್ರೆಯ 'ಟೀಸರ್' ಅನ್ನು ಹಂಚಿಕೊಂಡಿತು . ಅನೇಕರು ಈ ಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ, ಕೆಲವರು ಚಾನೆಲ್ ಅಧಿಕೃತವಲ್ಲ ಮತ್ತು ಟೀಸರ್ ಸ್ವತಃ ಕೃತಕ ಬುದ್ಧಿಮತ್ತೆಯಿಂದ ಮಾಡಲಾಗಿದೆ ಎಂದು ತಿಳಿದು ಬಂದಿತ್ತು. ಇದೀಗ ಈ ಕುರಿತು ಆಮೀರ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
ನಟ ಸ್ವತಃ ಈ ವಿವಾದವನ್ನು ಸ್ಪಷ್ಟಪಡಿಸಿದ್ದಾರೆ ಮತ್ತು ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ನಟನ ವಕ್ತಾರರ ಅಧಿಕೃತ ಹೇಳಿಕೆಯ ಪ್ರಕಾರ, "ಆಮೀರ್ ಖಾನ್ ಅವರನ್ನು ಗುರುನಾನಕ್ ಆಗಿ ತೋರಿಸುವ ಪೋಸ್ಟರ್ ಸಂಪೂರ್ಣವಾಗಿ ನಕಲಿ ಮತ್ತು ಕೃತಕ ಬುದ್ಧಿಮತ್ತೆಯಿಂದ ರಚಿಸಲ್ಪಟ್ಟಿದೆ. ಆಮಿರ್ ಖಾನ್ ಅವರಿಗೆ ಅಂತಹ ಯಾವುದೇ ಯೋಜನೆಗೂ ಯಾವುದೇ ಸಂಬಂಧವಿಲ್ಲ. ನಾನು ಗುರು ನಾನಕ್ ಅವರನ್ನು ಅತ್ಯಂತ ಗೌರವಿಸುತ್ತೇನೆ. ಈ ರೀತಯ ಪೋಸ್ಟರ್‌ಗಳನ್ನು ರಚಿಸಿ ಅವರಿಗೆ ಅಗೌರವ ತೋರಬೇಡಿ ಎಂದು ನಟ ಹೇಳಿಕೆ ನೀಡಿದ್ದಾರೆ.
AI ಸೃಷ್ಟಿಸಿದ ನಕಲಿ ಟೀಸರ್‌ನಲ್ಲಿ ಆಮೀರ್ ಸಿಖ್ ಆಧ್ಯಾತ್ಮಿಕ ಮತ್ತು ಧಾರ್ಮಿಕ ನಾಯಕನ ವೇಷ ಧರಿಸಿರುವುದನ್ನು ತೋರಿಸಲಾಗಿದೆ. ಈ ಚಿತ್ರವನ್ನು ಟಿ-ಸೀರೀಸ್ ನಿರ್ಮಿಸಿದೆ ಎಂದು ಟೀಸರ್ ಹೇಳಿಕೊಂಡಿದೆ, ಆದರೆ ಮೂಲತಃ ಈ ಚಿತ್ರವನ್ನು ಪೋಸ್ಟ್ ಮಾಡಿದ ಚಾನೆಲ್ ಟಿ-ಸೀರೀಸ್‌ಗೆ ಯಾವುದೇ ಅಧಿಕೃತ ಲಿಂಕ್ ಹೊಂದಿಲ್ಲ. ಈ ಟೀಸರ್ ವಿವಾದಕ್ಕೆ ಕಾರಣವಾಗಿದ್ದು, ಪಂಜಾಬ್‌ನ ಭಾರತೀಯ ಜನತಾ ಪಕ್ಷದ ನಾಯಕರೊಬ್ಬರು ಮುಸ್ಲಿಂ ನಟನನ್ನು ಸಿಖ್ ಗುರುವಿನ ಪಾತ್ರದಲ್ಲಿ ತೋರಿಸುವ ಮೂಲಕ ಸಿಖ್ ಸಮುದಾಯವನ್ನು ಪ್ರಚೋದಿಸಲು ಉದ್ದೇಶಪೂರ್ವಕ ತಂತ್ರವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಪಂಜಾಬ್ ವಕ್ತಾರ ಪ್ರೀತ್ಪಾಲ್ ಸಿಂಗ್ ಬಲಿಯಾವಾಲ್ ಅವರು ಎಸ್‌ಜಿಪಿಸಿಗೆ ದೂರು ಸಲ್ಲಿಸಿದ್ದಾರೆ, ಪಂಜಾಬ್ ಪೊಲೀಸರು, ಸೈಬರ್ ಸೆಲ್ ಮತ್ತು ಭದ್ರತಾ ಸಂಸ್ಥೆಗಳು ಅಪರಾಧಿಗಳ ಐಪಿ ವಿಳಾಸಗಳನ್ನು ಪತ್ತೆಹಚ್ಚಲು ಮತ್ತು ತಕ್ಷಣ ಬಂಧಿಸಲು ಒತ್ತಾಯಿಸಿದ್ದಾರೆ. ಆಮೀರ್ ಖಾನ್ ಕೊನೆಯ ಬಾರಿಗೆ 2022 ರಲ್ಲಿ ಬಿಡುಗಡೆಯಾದ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕಾಣಿಸಿಕೊಂಡರು, ಈ ಚಿತ್ರದಲ್ಲಿ ಕರೀನಾ ಕಪೂರ್ ನಟಿಸಿದ್ದರು. ಈ ವರ್ಷ ಅವರು ಸೀತಾರೆ ಜಮೀನ್ ಪರ್ ಮೂಲಕ ದೊಡ್ಡ ಪರದೆಗೆ ಮರಳಲಿದ್ದಾರೆ. ಈ ಚಿತ್ರವು 2008 ರ ಅವರ ಹಿಟ್ ಚಿತ್ರ ತಾರೆ ಜಮೀನ್ ಪರ್‌ನ ಮುಂದುವರಿದ ಭಾಗ ಎಂದು ಹೇಳಲಾಗಿದೆ.