ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಕಳೆದುಹೋಗಿದ್ದ ಕಾರನ್ನೇ ಮತ್ತೆ 22 ಲಕ್ಷ ರೂ.ಕೊಟ್ಟು ಖರೀದಿಸಿದ ಭೂಪ; ಬಹಳ ಇಂಟ್ರೆಸ್ಟಿಂಗ್‌ ಆಗಿದೆ ಈ ಸ್ಟೋರಿ!

ಕೆಲವು ವಾರಗಳ ಹಿಂದೆ ಕಾಣೆಯಾದ ತನ್ನ ಹೋಂಡಾ ಸಿವಿಕ್ ಟೈಪ್-ಆರ್‌ ಕಾರಿನ ರೀತಿಯೇ ಕಾಣುವಂತಹ ಬದಲಿ ಕಾರನ್ನು ಹುಡುಕಿದ್ದ ಇವಾನ್ ವ್ಯಾಲೆಂಟೈನ್ ಎಂಬಾತನಿಗೆ ಪ್ರತಿಷ್ಠಿತ ಗ್ಯಾರೇಜ್‍ವೊಂದರಲ್ಲಿ ತನ್ನ ಕಳೆದು ಹೋದ ಕಾರನ್ನು ಹೋಲುವ ಮತ್ತೊಂದು ಕಾರನ್ನು ಪತ್ತೆ ಹಚ್ಚಿದ್ದಾನೆ. ಹಾಗೇ ಅದಕ್ಕೆ 20,000 ಪೌಂಡ್ (ಸುಮಾರು 22 ಲಕ್ಷ ರೂ.)ಕೊಟ್ಟು ಖರೀದಿಸಿದ್ದಾನೆ. ಕೊನೆಗೆ ಆತನಿಗೆ ಅದು ತನ್ನ ಕಳೆದು ಹೋದ ಕಾರು ಎಂಬುದು ತಿಳಿದುಬಂದಿದೆ. ಈ ಸುದ್ದಿ ಇದೀಗ ವೈರಲ್‌(Viral News) ಆಗಿದೆ.

ಕಳೆದು ಹೋಗಿದ್ದ ತನ್ನ ಕಾರನ್ನೇ ಖರೀದಿಸಿದ ಭೂಪ; ಏನಿದು ಘಟನೆ?

Profile pavithra Apr 28, 2025 4:35 PM

ವಾಷಿಂಗ್ಟನ್‌: ಯುಕೆ ಮೂಲದ ವ್ಯಕ್ತಿಯೊಬ್ಬ ತನ್ನ ಕದ್ದ ಕಾರನ್ನು ಮರಳಿ ಖರೀದಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾನಂತೆ. ಅರೇ ಇದೇನಿದು ಸ್ಟೋರಿ ಎಂದು ಆಶ್ಚರ್ಯ ಪಡುತ್ತಿದ್ದೀರಾ....? ಹೌದು, ವೆಸ್ಟ್ ಮಿಡ್ಲ್ಯಾಂಡ್ಸೆನ ಸೋಲಿಹುಲ್ ಮೂಲದ ಇವಾನ್ ವ್ಯಾಲೆಂಟೈನ್ ಎಂಬಾತ ಕೆಲವು ವಾರಗಳ ಹಿಂದೆ ಕಳ್ಳತನವಾಗಿದ್ದ ತನ್ನ ಹೋಂಡಾ ಸಿವಿಕ್ ಟೈಪ್-ಆರ್‌ ಕಾರಿನ ರೀತಿಯೇ ಕಾಣುವಂತಹ ಬದಲಿ ಕಾರನ್ನು ಹುಡುಕಿದ್ದನು. ಕೆಲವು ಕಾರುಗಳನ್ನು ಪರಿಶೀಲಿಸಿದ ನಂತರ, ಅವನು ತನ್ನ ಕಾಣೆಯಾದ ಕಾರಿನಂತೆಯೇ ಇರುವಂತಹ ಮಾದರಿಯ ಕಾರನ್ನು ಪತ್ತೆಹಚ್ಚಿದ್ದಾನೆ(Viral news). ಹಾಗಾಗಿ ಆತ ಮತ್ತೆ ಆ ಕಾರನ್ನು ಖರೀದಿಸಲು 20,000 ಪೌಂಡ್ (ಸುಮಾರು 22 ಲಕ್ಷ ರೂ.) ಪಾವತಿಸಿದ್ದಾನೆ. ಕೊನೆಗೆ ಅವನಿಗೆ ಅದು ತನ್ನ ಕಾಣೆಯಾದ ಕಾರು ಎಂಬ ಸತ್ಯ ಗೊತ್ತಾಗಿದೆಯಂತೆ.

ವರದಿ ಪ್ರಕಾರ, ಇವಾನ್ ವ್ಯಾಲೆಂಟೈನ್ 2016ರಲ್ಲಿ ಹೋಂಡಾ ಸಿವಿಕ್ ಟೈಪ್-ಆರ್‌ ಕಾರನ್ನು ಖರೀದಿಸಿದ್ದಾನೆ. ಆದರೆ ಫೆಬ್ರವರಿ 28 ರಂದು ಆತನ ಕಾರು ಕಳೆದುಹೋಗಿತ್ತಂತೆ. ಇದರಿಂದ ಬೇಸರಗೊಂಡಿದ್ದ ಆತ ಅದೇ ಮಾದರಿಯ ಕಾರನ್ನು ಖರೀದಿಸುವ ನಿರ್ಧಾರ ಮಾಡಿ ಅಂತಹದೇ ಕಾರನ್ನು ಹುಡುಕಲು ಶುರುಮಾಡಿದ್ದ. ನಂತರ ವ್ಯಾಲೆಂಟೈನ್ ತನ್ನ ಮನೆಯಿಂದ 70 ಮೈಲಿ ದೂರದಲ್ಲಿರುವ ಪ್ರತಿಷ್ಠಿತ ಗ್ಯಾರೇಜ್‍ವೊಂದರಲ್ಲಿ ತನ್ನ ಕದ್ದ ಕಾರನ್ನೇ ಹೋಲುವ ಕಾರನ್ನು ಪತ್ತೆಹಚ್ಚಿದ್ದಾನೆ. ಆತ ಆ ಗ್ಯಾರೇಜ್‍ನಿಂದ ಸೆಕೆಂಡ್ ಹ್ಯಾಂಡ್ ಕಾರನ್ನು 20,000 ಪೌಂಡ್ (ಸುಮಾರು 22 ಲಕ್ಷ ರೂ.) ಕೊಟ್ಟು ಖರೀದಿಸಿದ್ದಾನೆ. ಮನೆಗೆ ಮರಳಿದ ನಂತರ, ಅವನು ಅದರ ವಿವರಗಳನ್ನು ಸೂಕ್ಷ್ಮವಾಗಿ ನೋಡಿದಾಗ ಅದು ತನ್ನ ಕಾಣೆಯಾದ ಹೋಂಡಾ ಸಿವಿಕ್ ಎಂದು ಗೊತ್ತಾಗಿದೆ. ಕಾರಿನಲ್ಲಿರುವ ನ್ಯಾವಿಗೇಷನ್ ಸಿಸ್ಟಂನಲ್ಲಿ ಅವನ ಮತ್ತು ಅವನ ಹೆತ್ತವರ ಹಳೆಯ ವಿಳಾಸಗಳನ್ನು ಕಂಡುಕೊಂಡ ನಂತರ ಅವನಿಗೆ ಈ ಸತ್ಯ ಗೊತ್ತಾಯಿತಂತೆ.

ವ್ಯಾಲೆಂಟೈನ್ ಈ ವಿಷಯವನ್ನು ಹೋಂಡಾ ತಂತ್ರಜ್ಞರೊಂದಿಗೆ ಚರ್ಚಿಸಿದ್ದಾನೆ. ಅವರು ಆತನ ಬಳಿ ಇರುವ ಹಳೆಯ ಕೀಲಿಯನ್ನು ಹೊರತೆಗೆದು, ಅದನ್ನು ನೇರವಾಗಿ ಬಾಗಿಲಿಗೆ ಹಾಕಿ ಅದನ್ನು ಅನ್ಲಾಕ್ ಮಾಡಿದ್ದಾರಂತೆ. ಇದರಿಂದ ಕಾರು ಅವನದ್ದೇ ಎನ್ನುವುದು ದೃಢವಾಯಿತು. ಹಾಗಾಗಿ ಈ ಬಗ್ಗೆ ವ್ಯಾಲೆಂಟೈನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರ ಪ್ರಕಾರ, ಕೆಲವು ಅಪರಿಚಿತ ಅಪರಾಧಿಗಳು ಈ ರೀತಿ ಯೋಜಿತ ಕಳ್ಳತನದೊಂದಿಗೆ ಸಂಬಂಧ ಹೊಂದಿರಬಹುದು ಎಂದು ತಿಳಿಸಿದ್ದಾರೆ.

ಈ ಹಿಂದೆ ತನ್ನ ಹೆಂಡತಿಗೆ ದುಬಾರಿ ಹುಟ್ಟುಹಬ್ಬದ ಉಡುಗೊರೆಯಾಗಿ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದ ಯುಎಸ್ ವ್ಯಕ್ತಿಯೊಬ್ಬನಿಗೆ ನಂತರ ಅದು ಕಳ್ಳತನವಾಗಿದ್ದ ಕಾರು ಎಂಬುದು ತಿಳಿದುಬಂದಿದೆ. ಹೀಗಾಗಿ ಆತ ತನ್ನಿಂದ 68,000 ಡಾಲರ್ (55 ಲಕ್ಷ ರೂ.) ವಂಚಿಸಲಾಗಿದೆ ಎಂದು ಆರೋಪಿಸಿದ್ದನು.

ಈ ಸುದ್ದಿಯನ್ನೂ ಓದಿ:‌Viral Video: ವಡಾಪಾವ್ ತಿಂದ ಹಾಂಗ್‌ಕಾಂಗ್‌ ಯುವತಿಯ ರಿಯಾಕ್ಷನ್‌ ಹೇಗಿತ್ತು? ಈ ವಿಡಿಯೊ ನೋಡಿ
ಸೇನಾಧಿಕಾರಿಯಾಗಿರುವ ಜೇಸನ್ ಸ್ಕಾಟ್ ತನ್ನ ಪತ್ನಿಗೆ ಅಚ್ಚರಿ ಮೂಡಿಸಲು 2021ರ ನವೆಂಬರ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ವೆಬ್ಸೈಟ್‍ನಲ್ಲಿ ತೋರಿಸಲಾದ ಸೆಕೆಂಡ್ ಹ್ಯಾಂಡ್ ಎಸ್ ಯುವಿಯನ್ನು ಖರೀದಿಸಿದ್ದನು. ಆದರೆ ಅದು ಕದ್ದ ಕಾರು ಎಂಬುದು ಆತನಿಗೆ ನಂತರ ತಿಳಿದಿದೆ. ಇದರಿಂದ ಮುಜುಗರಕ್ಕೀಡಾದ ಆತ ತನಗಾದ ಅವಮಾನ, ನಷ್ಟಗಳಿಗಾಗಿ ಸೆಕೆಂಡ್ ಹ್ಯಾಂಡ್ ವೆಬ್ ಸೈಟ್ ನಿಂದ $ 1 ಮಿಲಿಯನ್ ಪರಿಹಾರವನ್ನು ಕೋರಿದ್ದನು. ಆದರೆ ಕಂಪೆನಿ ಇದನ್ನು ನಿರಾಕರಿಸಿತ್ತು ಎನ್ನಲಾಗಿದೆ.