Viral Video: ಅರಶಿನ ಶಾಸ್ತ್ರಕ್ಕೆ ಬಂದ ಡೈನೋಸಾರ್! ವರ ಫುಲ್ ಶಾಕ್; ಕಾರಣವೇನು?
ವಧು ಒಬ್ಬಳು ತನ್ನ ಅರಿಶಿನ ಶಾಸ್ತ್ರಕ್ಕೆ ಡೈನೋಸಾರ್‌ನಂತೆ ವೇಷ ಹಾಕಿಕೊಂಡು ಬಂದಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈಕೆಯ ಈ ವಿಭಿನ್ನ ಉಡುಪು ನೋಡಿ ನೆಟ್ಟಿಗರು ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ.


ಮದುವೆ ಎನ್ನುವುದು ಎರಡು ಜೀವಗಳ ನಡುವಿನ ಬೆಸುಗೆ. ಒಂದು ಗಂಡು, ಒಂದು ಹೆಣ್ಣು ಇಬ್ಬರೂ ಈ ವಿವಾಹ ಬಂಧನಕ್ಕೆ ಒಳಗಾಗುವ ಸಮಯದಲ್ಲಿ ಸಾಕಷ್ಟು ಶಾಸ್ತ್ರ ಸಂಪ್ರದಾಯಗಳು ನಡೆಯುತ್ತವೆ. ಈಗಂತೂ ಮದುವೆ ಎಂದರೆ ಸಾಕು ಫೋಟೋ ಶೂಟ್‌ಗಳದ್ದೇ ಕ್ರೇಜ್. ಅದು ಅಲ್ಲದೇ ಅವರಿಗಿಂತ ನಾನು ಡಿಫರೆಂಟ್ ಆಗಿ ಏನಾದರೂ ಮಾಡಬೇಕು ಎಂಬ ಹಪಾಹಪಿ. ಅದಕ್ಕಾಗಿ ಪ್ರೀ ವೆಡ್ಡಿಂಗ್ ಫೋಟೊಶೂಟ್, ಹೊಸ ಹೊಸ ವೇಷಭೂಷಣ ಇವುಗಳೆಲ್ಲದರ ಸರ್ಕಸ್ ಮಾಡುತ್ತಾರೆ. ಮದುವೆಯ ಹಿಂದಿನ ದಿನ ನಡೆಯುವ ಅರಶಿನ ಶಾಸ್ತ್ರ ಈಗ ಸಖತ್ ಟ್ರೆಂಡಿಂಗ್‌ನಲ್ಲಿದೆ. ನಾನಾ ಬಗೆಯ ಹೂವಿನ ಅಲಂಕಾರಗಳು,ಮನೆಮಂದಿಯೆಲ್ಲಾ ಹಳದಿ ಬಣ್ಣದ ಉಡುಗೆಗಳನ್ನು ಹಾಕಿಕೊಳ್ಳುವುದು, ಹೀಗೆ ಏನೇನೋ ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ಅರಶಿನ ಶಾಸ್ತ್ರದಲ್ಲಿ ವಧು ಹಳದಿ ಬಣ್ಣದ ಉಡುಗೆ ಅದಕ್ಕೆ ತಕ್ಕ ಹಾಗೇ ಮೇಕಪ್, ಸರ, ಬಳೆ ಹಾಕಿಕೊಳ್ಳುತ್ತಾಳೆ. ಆದರೆ ಇಲ್ಲೊಬ್ಬಳು ವಧು ತನ್ನ ಹಳದಿ ಕಾರ್ಯಕ್ರಮದ ವೇಳೆ ಡೈನೋಸಾರ್ ವೇಷ ತೊಟ್ಟುಕೊಂಡು ವೇದಿಕೆಗೆ ಬಂದಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ವಧು ಡೈನೋಸಾರ್‌ನಂತೆ ವೇಷ ತೊಟ್ಟು ಬಂದ ದೃಶ್ಯ ಸೆರೆಯಾಗಿದೆ. ಈ ವಿಡಿಯೊದಲ್ಲಿ ಎಲ್ಲರೂ ಖುಷಿಯಿಂದ ಡೈನೋಸಾರ್ ವೇಷಧಾರಿ ವಧುವನ್ನು ಸ್ವಾಗತಿಸಿದ್ದಾರೆ. ವರ ಕೂಡ ಡೈನೋಸಾರ್ ವೇಷದಲ್ಲಿರುವುದು ತನ್ನ ಭಾವಿಪತ್ನಿಯೆಂದು ತಿಳಿಯದೇ ವೇಷಧಾರಿಯನ್ನು ತಬ್ಬಿಕೊಂಡು ಡ್ಯಾನ್ಸ್ ಕೂಡ ಮಾಡಿದ್ದಾನೆ. ಆದರೆ ಆಕೆ ತನ್ನ ವೇಷವನ್ನು ತೆಗೆದಾಗ ಅದರಲ್ಲಿ ವಧು ಇರುವುದನ್ನು ಕಂಡು ಎಲ್ಲರೂ ಶಾಕ್ ಆಗಿದ್ದಾರೆ. ಅತಿಥಿಗಳು ಮಾತ್ರವಲ್ಲ ವರ ಕೂಡ ಆಶ್ಚರ್ಯ ಚಕಿತನಾಗಿದ್ದಾನೆ.
ವೈರಲ್ ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಅದಕ್ಕೆ "ಬ್ರೈಡೋಸಾರ್" ಎಂದು ಕರೆದಿದ್ದಾರೆ. " ಮದುವೆಗೂ ಮೊದಲು ವಧು ತನ್ನ ರೂಪವನ್ನು ತೋರಿಸಿದ್ದಾಳೆ” ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ. ಈ ವಿಡಿಯೊ ಇದುವರೆಗೆ 22,000 ಲೈಕ್ಸ್ ಮತ್ತು 30 ಲಕ್ಷ ವ್ಯೂವ್ಸ್ ಗಳಿಸಿದೆ.
ಈ ಹಿಂದೆ ಸೋಷಿಯಲ್ ಮೀಡಿಯಾ ವ್ಲಾಗರ್ ಒಬ್ಬರು ಮೆಟ್ರೋ ರೈಲಿನಲ್ಲಿ ಹಳದಿ ಕಾರ್ಯಕ್ರಮ ಆಚರಣೆ ಮಾಡಿರುವ ವಿಡಿಯೊವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿತ್ತು. ಈ ವಿಡಿಯೊ ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದರು.ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಆಗ್ರಾದ ಮೆಟ್ರೋ ರೈಲು ನಿಗಮವು ಎಚ್ಚೆತ್ತುಕೊಂಡಿದ್ದು, ರೈಲಿನಲ್ಲಿ ಯಾವುದೇ ತರನಾದ ಹಳದಿ ಕಾರ್ಯಕ್ರಮ ಆಯೋಜಿಸಿಲ್ಲ ಬದಲಾಗಿ ಬಸಂತ್ ಪಂಚಮಿ ಪೂಜೆ ಆಯೋಜಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿತ್ತು. ಹಾಗೂ ಮೆಟ್ರೋದಲ್ಲಿ ಯಾವುದೇ ಖಾಸಗಿ, ವಿವಾಹ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ ಎಂದಿದೆ. ಜತೆ ಈ ರೀತಿ ತಪ್ಪು ಮಾಹಿತಿಯನ್ನು ಹಂಚಿಕೊಳ್ಳದಂತೆ ಆಗ್ರಾ ಮೆಟ್ರೋ ನಿಗಮವು ಸೂಚನೆ ನೀಡಿದೆ.