ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Padma Awards: ಪದ್ಮ ಪ್ರಶಸ್ತಿ ಸ್ವೀಕರಿಸಿದ ಪಿ.ಆರ್ ಶ್ರೀಜೇಶ್, ಆರ್. ಅಶ್ವಿನ್

ಶ್ರೀಜೇಶ್‌ ಭಾರತ ಹಾಕಿ ತಂಡ ಕಳೆದ ವರ್ಷ ಒಲಿಂಪಿಕ್ಸ್‌ ನಲ್ಲಿ ಕಂಚು ಗೆದ್ದ ಅನಂತರ ನಿವೃತ್ತಿಯಾಗಿದ್ದರು. ಆರ್‌.ಅಶ್ವಿ‌ನ್‌ ಕಳೆದ ಡಿಸೆಂಬರ್‌ನಲ್ಲಿ ಬೋರ್ಡರ್‌-ಗಾವಸ್ಕರ್‌ ಟೆಸ್ಟ್‌ ಸರಣಿಯ 2ನೇ ಪಂದ್ಯದ ಅನಂತರ ನಿವೃತ್ತಿಯಾಗಿದ್ದರು. ಅವರು ಟೆಸ್ಟ್‌ನಲ್ಲಿ ಭಾರತದ 2ನೇ ಗರಿಷ್ಠ ವಿಕೆಟ್‌ (537) ಪಡೆದ ಸಾಧಕರಾಗಿದ್ದಾರೆ.

ಪದ್ಮ ಪ್ರಶಸ್ತಿ ಸ್ವೀಕರಿಸಿದ ಪಿ.ಆರ್ ಶ್ರೀಜೇಶ್, ಆರ್. ಅಶ್ವಿನ್

Profile Abhilash BC Apr 28, 2025 7:30 PM

ನವದೆಹಲಿ: ಭಾರತ ಹಾಕಿ ತಂಡದ ಮಾಜಿ ಆಟಗಾರ, ಎರಡು ಬಾರಿ ಒಲಿಂಪಿಕ್ಸ್‌ ಹಾಕಿ ಕಂಚು ವಿಜೇತ ಪಿ.ಆರ್‌. ಶ್ರೀಜೇಶ್‌(PR Sreejesh) ಮತ್ತು ಕಳೆದ ವರ್ಷ ಕ್ರಿಕೆಟ್‌ ನಿವೃತ್ತಿ ಘೋಷಿಸಿದ್ದ ಟೀಮ್‌ ಇಂಡಿಯಾದ ಸ್ಪಿನ್ನರ್‌ ಆರ್. ಅಶ್ವಿನ್(R Ashwin) ಸೋಮವಾರ(ಎ.28) ರಾಷ್ಟ್ರಪತಿ ಭವನದಲ್ಲಿ ಪದ್ಮ(Padma Awards) ಪ್ರಶಸ್ತಿಗಳನ್ನು ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಶ್ರೀಜೇಶ್‌ ಭಾರತದ 3ನೇ ಪರಮೋಚ್ಚ ನಾಗರಿಕ ಗೌರವ ಪದ್ಮಭೂಷಣ ಸ್ವೀಕರಿಸಿದರೆ, ಅಶ್ವಿನ್‌ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.

ಜನವರಿ 25 ರಂದು ಅಶ್ವಿನ್ ಅವರಿಗೆ ಫುಟ್ಬಾಲ್ ದಂತಕಥೆ ಐ.ಎಂ. ವಿಜಯನ್‌, ಪ್ಯಾರಾಲಿಂಪಿಕ್ಸ್‌ ಬಿಲ್ಗಾರಿಕೆಯಲ್ಲಿ ಮೊದಲ ಚಿನ್ನ ಗೆದ್ದ ಭಾರತೀಯ ಹರ್ವಿಂದರ್‌ ಸಿಂಗ್‌, ಪ್ಯಾರಾ ಆ್ಯತ್ಲೆಟಿಕ್ಸ್‌ ಕೋಚ್‌ ಸತ್ಯಪಾಲ್‌ ಸಿಂಗ್‌ ಅವರೊಂದಿಗೆ ಪದ್ಮಶ್ರೀ ಪ್ರಶಸ್ತಿ, ಶ್ರೀಜೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿತ್ತು.



ಶ್ರೀಜೇಶ್‌ ಭಾರತ ಹಾಕಿ ತಂಡ ಕಳೆದ ವರ್ಷ ಒಲಿಂಪಿಕ್ಸ್‌ ನಲ್ಲಿ ಕಂಚು ಗೆದ್ದ ಅನಂತರ ನಿವೃತ್ತಿಯಾಗಿದ್ದರು. ಆರ್‌.ಅಶ್ವಿ‌ನ್‌ ಕಳೆದ ಡಿಸೆಂಬರ್‌ನಲ್ಲಿ ಬೋರ್ಡರ್‌-ಗಾವಸ್ಕರ್‌ ಟೆಸ್ಟ್‌ ಸರಣಿಯ 2ನೇ ಪಂದ್ಯದ ಅನಂತರ ನಿವೃತ್ತಿಯಾಗಿದ್ದರು. ಅವರು ಟೆಸ್ಟ್‌ನಲ್ಲಿ ಭಾರತದ 2ನೇ ಗರಿಷ್ಠ ವಿಕೆಟ್‌ (537) ಪಡೆದ ಸಾಧಕರಾಗಿದ್ದಾರೆ.



ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಆರ್‌.ಅಶ್ವಿನ್‌ ಪ್ರಸಕ್ತ ಸಾಗುತ್ತಿರುವ ಐಪಿಎಲ್‌ 2025ರ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಶ್ರೀಜೇಶ್‌ ಭಾರತದ ಜೂನಿಯರ್‌ ಹಾಕಿ ತಂಡದ ಪ್ರಧಾನ ಕೋಚ್‌ ಆಗಿದ್ದಾರೆ. 2004ರಲ್ಲಿ ಜೂನಿಯರ್‌ ತಂಡದೊಂದಿಗೆ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದರು. 2006ರಲ್ಲಿ ಸೀನಿಯರ್‌ ತಂಡ ಸೇರಿಕೊಂಡರು. ಒಟ್ಟು 4 ಒಲಿಂಪಿಕ್ಸ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಎರಡು ಕಂಚಿನ ಪದಕ ಗೆದ್ದ ತಂಡದ ಭಾಗವಾಗಿದ್ದರು. 2014 ಮತ್ತು 2018ರ ಏಷ್ಯಾಡ್‌ನ‌ಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕ ಜಯಿಸಿದ ತಂಡದಲ್ಲಿದ್ದರು. 2022ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಬೆಳ್ಳಿ ಗೆದ್ದಾಗಲೂ ತಂಡದಲ್ಲಿದ್ದರು. 2021 ಮತ್ತು 2022ರಲ್ಲಿ ಎಫ್ಐಎಚ್‌ ವರ್ಷದ ಗೋಲ್‌ಕೀಪರ್‌ ಪ್ರಶಸ್ತಿ, 2021ರಲ್ಲಿ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಗೌರವಕ್ಕೆ ಭಾಜನರಾಗಿದ್ದರು.

ಇದನ್ನೂ ಓದಿ IPL 2025: ಗೆಲುವಿನೊಂದಿಗೆ ದಾಖಲೆ ಬರೆದ ರಜತ್‌ ಪಾಟೀದಾರ್‌