ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL: ಮುಂದಿನ ಐಪಿಎಲ್​ನಲ್ಲಿ ಪಂದ್ಯಗಳ ಸಂಖ್ಯೆ ಹೆಚ್ಚಳ; ಸುಳಿವು ನೀಡಿದ ಅಧ್ಯಕ್ಷ

IPL 2028: ಭಾರತ ಮಾತ್ರವಲ್ಲದೆ, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌, ಶ್ರೀಲಂಕಾ ಕೂಡ ಸ್ವದೇಶಿ ಫ್ರಾಂಚೈಸಿ ಟಿ20 ಪಂದ್ಯಾವಳಿಗಳನ್ನು ಹೊಂದಿವೆ. ಹೀಗಿರುವಾಗ 94 ಪಂದ್ಯಗಳ ಐಪಿಎಲ್ ಪಂದ್ಯಗಳನ್ನು ನಡೆಸಲು ಸಾಧ್ಯವೇ ಎಂಬ ಸವಾಲು ಕೂಡ ಮುಂದಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಂತೂ ನಡೆಯುತ್ತಿದೆ. ಇದು ಯಶಸ್ವಿಯಾದರೆ ಖಂಡಿತವಾಗಿಯೂ ಮುಂದಿನ ಐಪಿಎಲ್‌ನಲ್ಲಿ 94 ಪಂದ್ಯ ನಡೆಯಲಿದೆ ಎಂದು ಧುಮಾಲ್ ಹೇಳಿದ್ದಾರೆ.

ಮುಂದಿನ ಐಪಿಎಲ್​ನಲ್ಲಿ ಪಂದ್ಯಗಳ ಸಂಖ್ಯೆ ಹೆಚ್ಚಳ; ಸುಳಿವು ನೀಡಿದ ಅಧ್ಯಕ್ಷ

Profile Abhilash BC Apr 28, 2025 6:03 PM

ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ 2028ರ(IPL 2028) ಆವೃತ್ತಿಯಲ್ಲಿ ಮಹತ್ವದ ಬದಲಾವಣೆ ನಡೆಸಲು ಬಿಸಿಸಿಐ(BCCI) ಯೋಚಿಸುತ್ತಿದ್ದು, ಇನ್ನೂ 20 ಪಂದ್ಯಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್(Arun Dhumal) ಬಹಿರಂಗಪಡಿಸಿದ್ದಾರೆ. ಪ್ರಸ್ತುತ, ಐಪಿಎಲ್ 60-65 ದಿನಗಳ ಅವಧಿಯಲ್ಲಿ 74 ಪಂದ್ಯಗಳನ್ನು ಹೊಂದಿದೆ. ಬದಲಾವಣೆಯಾದರೆ 94 ಪಂದ್ಯಗಳು ನಡೆಯಲಿದೆ.

ಕ್ರಿಕ್‌ ಇನ್ಫೋ ಜತೆ ಮಾತನಾಡಿದ ಅರುಣ್ ಧುಮಾಲ್, ಬಿಸಿಸಿಐ ಮಾಧ್ಯಮ ಹಕ್ಕುಗಳು ಮತ್ತು ಪ್ರಾಯೋಜಕತ್ವದ ಒಪ್ಪಂದಗಳ ಪ್ರಕಾರ, 2025 ಐಪಿಎಲ್​ ಸೀಸನ್​ನಲ್ಲಿಯೇ 74 ಪಂದ್ಯಗಳ ಬದಲಿ 84 ಪಂದ್ಯಗಳ ಸ್ವರೂಪಕ್ಕೆ ವಿಸ್ತರಿಸಲು ಯೋಜಿಸಲಾಗಿತ್ತು. ಆದರೆ ಹಾಲಿ ಆವೃತ್ತಿಗೂ ಮುನ್ನ ಆಸ್ಟ್ರೇಲಿಯಾ ಪ್ರವಾಸ ಮತ್ತು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಇದ್ದ ಕಾರಣ ಆಟಗಾರರು ಅತಿಯಾಗಿ ಬಳಲಿದ್ದರು. ಹೀಗಿರುವಾಗ ಪಂದ್ಯಗಳ ಹೆಚ್ಚಳ ಮಾಡಿದರೆ ಸಮಂಜಸವಲ್ಲ. ಹೀಗಾಗಿ 2028ರ ಆವೃತ್ತಿ ವೇಳೆಗೆ ಪಂದ್ಯಗಳ ಸಂಖ್ಯೆಯನ್ನು 94ಕ್ಕೆ ವಿಸ್ತರಿಸಲಾಗುತ್ತದೆ ಎಂದು ಹೇಳಿದರು.

'ನಾವು ಐಸಿಸಿಯಲ್ಲಿ ಇದರ ಬಗ್ಗೆ ಚರ್ಚಿಸುತ್ತಿದ್ದೇವೆ, ಬಿಸಿಸಿಐ ಜತೆಯೂ ಆಂತರಿಕವಾಗಿಯೂ ಚರ್ಚಿಸುತ್ತಿದ್ದೇವೆ. ದ್ವಿಪಕ್ಷೀಯ ಮತ್ತು ಐಸಿಸಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ, ಫ್ರಾಂಚೈಸಿ ಕ್ರಿಕೆಟ್ ಮತ್ತು ಟಿ20 ಕ್ರಿಕೆಟ್‌ಗೆ ಸಂಬಂಧಿಸಿದಂತೆ ಅಭಿಮಾನಿಗಳ ಆಸಕ್ತಿ ಬದಲಾಗುತ್ತಿದೆ' ಎಂದು ಅರುಣ್ ಧುಮಾಲ್ ಸಂದರ್ಶನದಲ್ಲಿ ಹೇಳಿದರು.

ಇದನ್ನೂ ಓದಿ IPL 2025: ಕಾಂತಾರ ಶೈಲಿಯಲ್ಲೇ ರಾಹುಲ್‌ಗೆ ತಿರುಗೇಟು ಕೊಟ್ಟ ಕೊಹ್ಲಿ; ಇಲ್ಲಿದೆ ವಿಡಿಯೊ

ಭಾರತ ಮಾತ್ರವಲ್ಲದೆ, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌, ಶ್ರೀಲಂಕಾ ಕೂಡ ಸ್ವದೇಶಿ ಫ್ರಾಂಚೈಸಿ ಟಿ20 ಪಂದ್ಯಾವಳಿಗಳನ್ನು ಹೊಂದಿವೆ. ಹೀಗಿರುವಾಗ 94 ಪಂದ್ಯಗಳ ಐಪಿಎಲ್ ಪಂದ್ಯಗಳನ್ನು ನಡೆಸಲು ಸಾಧ್ಯವೇ ಎಂಬ ಸವಾಲು ಕೂಡ ಮುಂದಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಂತೂ ನಡೆಯುತ್ತಿದೆ. ಇದು ಯಶಸ್ವಿಯಾದರೆ ಖಂಡಿತವಾಗಿಯೂ 94 ಪಂದ್ಯ ನಡೆಯಲಿದೆ ಎಂದು ಧುಮಾಲ್ ಖಚಿತಪಡಿಸಿದರು.