ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kichcha Sudeep: ಸುದೀಪ್‌ಗೆ ಏನಾಯ್ತು? ಕೈಗೆ ಬ್ಯಾಂಡೇಜ್‌ ಸುತ್ತಿಕೊಂಡ ಕಿಚ್ಚನನ್ನು ನೋಡಿ ಫ್ಯಾನ್ಸ್‌ಗೆ ಆತಂಕ

ಬಿಗ್‌ಬಾಸ್‌ ಖ್ಯಾತಿಯ ನಟ ರಾಕೇಶ್‌ ಅಡಿಗ-ರಚನಾ ಇಂದರ್‌ ಅಭಿನಯದ ಮುಂದಿನ 'ನಾನು ಮತ್ತು ಗುಂಡ 2' ಸಿನಿಮಾಕ್ಕೆ ವಿಡಿಯೊ ಮೂಲಕ ಕಿಚ್ಚ ಸುದೀಪ್‌ ವಿಷ್‌ ಮಾಡಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಬ್ಯಾಂಡೇಜ್‌ ಕಂಡು ಬಂದಿದ್ದು, ಫ್ಯಾನ್ಸ್‌ ಆತಂಕಗೊಂಡಿದ್ದಾರೆ. ಸುದೀಪ್‌ ಕೈಗೆ ಏನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ.

ಬ್ಯಾಂಡೇಜ್‌ ಸುತ್ತಿಕೊಂಡ ಕಿಚ್ಚನನ್ನು ನೋಡಿ ಫ್ಯಾನ್ಸ್‌ಗೆ ಆತಂಕ

ರಾಕೇಶ್‌ ಅಡಿಗ ಮತ್ತು ಸುದೀಪ್‌.

Profile Ramesh B May 25, 2025 9:22 PM

ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್‌ (Kichcha Sudeep) ಸದ್ಯ ಬಹುನಿರೀಕ್ಷಿತ ʼಬಿಲ್ಲ ರಂಗ ಭಾಷʼ (Billa Ranga Baasha) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಅನೂಪ್‌ ಭಂಡಾರಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಸಿನಿಮಾ 185 ವರ್ಷಗಳ ಬಳಿಕ ಏನಾಗಲಿದೆ ಎನ್ನುವುದನ್ನು ಹೇಳಲಿದೆ. ಈ ಚಿತ್ರಕ್ಕಾಗಿ ದೇಹ ದಂಡಿಸಿ ಫಿಟ್‌ ಆಗಿರುವ ಸುದೀಪ್‌ ಕೈಗೆ ಇದೀಗ ಗಾಯವಾಗಿದ್ದು, ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸುದೀಪ್‌ ತಮ್ಮ ಕೈಗೆ ಬ್ಯಾಂಡೇಜ್‌ ಹಾಕಿಕೊಂಡಿರುವ ವಿಡಿಯೊ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬಿಗ್‌ಬಾಸ್‌ ಖ್ಯಾತಿಯ ನಟ ರಾಕೇಶ್‌ ಅಡಿಗ-ರಚನಾ ಇಂದರ್‌ ಅಭಿನಯದ ಮುಂದಿನ 'ನಾನು ಮತ್ತು ಗುಂಡ 2' (Naanu Matthu Gunda 2) ಸಿನಿಮಾಕ್ಕೆ ವಿಶ್‌ ಮಾಡಿ ಸುದೀಪ್‌ ವಿಡಿಯೊ ಮಾಡಿದ್ದಾರೆ. ಈ ವಿಡಿಯೊದಲ್ಲಿ ಅವರ ಕೈಯಲ್ಲಿ ಬ್ಯಾಂಡೇಜ್‌ ಇರುವುದು ಕಂಡು ಬಂದಿದೆ.

ʼಬಿಲ್ಲ ರಂಗ ಭಾಷʼ ಸಿನಿಮಾದ ಚಿತ್ರೀಕರಣದಲ್ಲಿ ಸುದೀಪ್‌ ಬ್ಯುಸಿ ಇದ್ದಾರೆ. ಬೆಂಗಳೂರಿನಲ್ಲಿ ಹಾಕಿರುವ ವಿಶೇಷ ಸೆಟ್‌ನಲ್ಲಿ ಭರದಿಂದ ಶೂಟಿಂಗ್‌ ನಡೆಯುತ್ತಿದೆ. ಹೀಗಾಗಿ ಸುದೀಪ್‌ ಇತ್ತೀಚೆಗೆ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರು ʼನಾನು ಮತ್ತು ಗುಂಡ 2' ಚಿತ್ರತಂಡಕ್ಕೆ ಬೆಂಬಲ ಸೂಚಿಸಿ ವಿಡಿಯೊ ಮಾಡಿದ್ದು, ಇದರಲ್ಲಿ ಅವರ ಕೈಗೆ ಬ್ಯಾಂಡೇಜ್‌ ಸುತ್ತಿಕೊಂಡಿರುವುದನ್ನು ಫ್ಯಾನ್ಸ್‌ ಗಮನಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ ಪೋಸ್ಟ್‌:

ಈ ಸುದ್ದಿಯನ್ನೂ ಓದಿ: Billa Ranga Baasha: ಬಹುನಿರೀಕ್ಷಿತ ʼಬಿಲ್ಲ ರಂಗ ಭಾಷʼದ ಶೂಟಿಂಗ್‌ ಆರಂಭ; ಕಿಚ್ಚ ಸುದೀಪ್‌ ಹೊಸ ಅವತಾರಕ್ಕೆ ಫ್ಯಾನ್ಸ್‌ ಫಿದಾ

ʼಬಿಲ್ಲ ರಂಗ ಭಾಷಾʼ ಸಿನಿಮಾದ ಶೂಟಿಂಗ್​ ವೇಳೆ ಸುದೀಪ್ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ. ಹೀಗಾಗಿ ಆತಂಕಗೊಂಡಿರುವ ಫ್ಯಾನ್ಸ್‌ ಸುದೀಪ್‌ ಆರೋಗ್ಯ ವಿಚಾರಿಸುತ್ತಿದ್ದಾರೆ. ವಿಡಿಯೊದಲ್ಲಿ ಸುದೀಪ್‌ ಆರೋಗ್ಯವಂತರಾಗಿಯೇ ಕಾಣಿಸಿಕೊಂಡಿರುವುದು ಫ್ಯಾನ್ಸ್‌ಗೆ ತುಸು ಸಮಾಧಾನ ತಂದಿದೆ. ಈ ಬಗ್ಗೆ ಸುದೀಪ್‌ ಶೀಘ್ರದಲ್ಲೇ ಮಾಹಿತಿ ನೀಡುವ ನಿರೀಕ್ಷೆ ಇದೆ.

'ನಾನು ಮತ್ತು ಗುಂಡ 2' ಚಿತ್ರದ ಟ್ರೈಲರ್‌ ಇಲ್ಲಿದೆ:



ಶುಭ ಹಾರೈಸಿದ ಸುದೀಪ್‌ ಹೇಳಿದ್ದೇನು?

ಇತ್ತೀಚೆಗೆ ʼನಾನು ಮತ್ತು ಗುಂಡ 2ʼ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿತ್ತು. ನಾಯಿ ಮತ್ತು ಮನುಷ್ಯನ ನಡುವಿನ ಸುಮಧುರ ಬಾಂಧವ್ಯವನ್ನು ತಿಳಿಸುವ ಈ ಚಿತ್ರವನ್ನು ರಘು ಹಾಸನ್ ನಿರ್ದೇಶಿಸಿದ್ದಾರೆ. ಮೊದಲ ಬಾರಿಗೆ ರಾಕೇಶ್‌ ಅಡಿಗ ಮತ್ತು ರಚನಾ ಇಂದರ್‌ ಜತೆಯಾಗಿ ನಟಿಸಿದ್ದು, ಶ್ವಾನ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಶುಭ ಹಾರೈಸಿದ ಸುದೀಪ್‌, ''2020ರಲ್ಲಿ ʼನಾನು ಮತ್ತು ಗುಂಡʼ ಮೊದಲ ಪಾರ್ಟ್‌ ರಿಲೀಸ್‌ ಆಗಿತ್ತು. ಆ ಟ್ರೈಲರ್‌ ನನಗೆ ಬಹಳ ಇಷ್ಟವಾಗಿತ್ತು. ಈಗ ಭಾಗ ಎರಡರ ಟ್ರೈಲರ್‌ ಕೂಡ ನೋಡಿದೆ. ಅದೂ ಇಷ್ಟ ಆಯ್ತು. ಇತ್ತೀಚೆಗೆ ʼ777 ಚಾರ್ಲಿ' ಸಿನಿಮಾ ಕೂಡ ಬಂದಿತ್ತು. ಸಾಕುಪ್ರಾಣಿಗಳೊಂದಿಗೆ ಎಮೋಷನ್ಸ್‌ ಇಟ್ಕೊಂಡು ಸಿನಿಮಾ ಮಾಡಿದ್ದಾರೆ. ರಾಕೇಶ್‌ ಕೂಡ ಒಳ್ಳೆಯ ಪ್ರತಿಭೆ. ಇವರು ಕೂಡ ಅದ್ಭುತವಾದ ಸಿನಿಮಾ ಪ್ರಯತ್ನ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರ ರಿಲೀಸ್‌ ಆಗಲಿದ್ದು, ಥಿಯೇಟರ್‌ನಲ್ಲೇ ನೋಡಿʼʼ ಎಂದು ಹೇಳಿದ್ದಾರೆ.

ಊಟಿ, ತೀರ್ಥಹಳ್ಳಿ ಮತ್ತು ಶಿವಮೊಗ್ಗ ಚಿತ್ರೀಕರಣ ನಡೆದಿದ್ದು, ಕನ್ನಡ, ತೆಲುಗು ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಯುವನ್‌ ಸಾಯಿ, ಗೋವಿಂದೇ ಗೌಡ, ಸಾಧು ಕೋಕಿಲ, ಅವಿನಾಶ್‌, ನಯನಾ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಗುಂಡ ಪಾತ್ರದಲ್ಲಿ ಸಿಂಬ ಜಾಕ್ಸ್‌ನ್‌ ಮತ್ತು ಬಂಟಿ ಹೆಸರಿನ ಶ್ವಾನಗಳು ಕಾಣಿಸಿಕೊಂಡಿವೆ.