Nooru Janmaku : ʻನೂರು ಜನ್ಮಕೂ...ʼ ಅತಿಮಾನುಷ ಶಕ್ತಿಯಿಂದ ಪ್ರೀತಿಯನ್ನು ಕಾಪಾಡಲು ಹೊರಟವಳ ಕಥೆ ಇದು
Nooru Janmaku : ಹಿಟ್ ಧಾರಾವಾಹಿಗಳನ್ನು ನೀಡುತ್ತಿರುವ ಕಲರ್ಸ್ ಕನ್ನಡ ವಾಹಿನಿ ಇದೀಗ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಸೆಂಬರ್ 23ರಿಂದ ಪ್ರತಿದಿನ ರಾತ್ರಿ 8:30ಕ್ಕೆ ಪ್ರಸಾರಗೊಳ್ಳಲಿರುವ ಹೊಸ ಧಾರಾವಾಹಿ ‘ನೂರು ಜನ್ಮಕೂ’ ವಿಭಿನ್ನವಾದ ರೋಚಕ ಕತೆಯನ್ನು ಹೊಂದಿದೆ.

ಬೆಂಗಳೂರು: ಹಿಟ್ ಧಾರಾವಾಹಿಗಳನ್ನು ನೀಡುತ್ತಿರುವ ಕಲರ್ಸ್ ಕನ್ನಡ (Colors Kannada) ವಾಹಿನಿ ಇದೀಗ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಸೇಡು, ದ್ವೇಷ ತ್ರೀಕೋನ ಪ್ರೇಮಕತೆಯನ್ನು ಹೊಂದಿರುವ ಧಾರಾವಾಹಿಯನ್ನು (Kannada serial) ಪ್ರೇಕ್ಷರ ಮುಂದಿಡಲು ಸಜ್ಜಾಗಿದೆ. ಡಿಸೆಂಬರ್ 23ರಿಂದ ಪ್ರತಿದಿನ ರಾತ್ರಿ 8:30ಕ್ಕೆ ಪ್ರಸಾರಗೊಳ್ಳಲಿರುವ ಹೊಸ ಧಾರಾವಾಹಿ ‘ನೂರು ಜನ್ಮಕೂ’ (Nooru Janmaku) ವಿಭಿನ್ನವಾದ ರೋಚಕ ಕತೆಯನ್ನು ಹೊಂದಿದೆ.
ನೂರು ಜನ್ಮಕೂ ಸೀರಿಯಲ್ ಕಥೆ ಏನು?
ನೂರು ಜನ್ಮಕೂ’ ಒಂದು ಉತ್ಕಟ ಪ್ರೇಮಕತೆ ಯಾಗಿದೆ. ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕತೆಯಿದು. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರಸ್ವಾಮಿಯ ಪರಮಭಕ್ತೆಯಾದ ಮೈತ್ರಿ ತನ್ನ ಶ್ರದ್ಧೆ ಹಾಗೂ ನಂಬಿಕೆಗಳ ಮುಖಾಂತರ ಅವನನ್ನು ರಕ್ಷಿಸಲು ಪಣತೊಡುತ್ತಾಳೆ. ಚಿರಂಜೀವಿಯ ಜೀವ ಕಾಪಾಡುತ್ತಲೇ ತಮ್ಮ ಪ್ರೀತಿಯನ್ನೂ ಉಳಿಸಿಕೊಳ್ಳಲು ಒದ್ದಾಡುವ ಹೆಣ್ಣಾಗಿ ಮೈತ್ರಿ ನೋಡುಗರ ಮನಸನ್ನು ಆವರಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಧಾರಾವಾಹಿಯ ಕತೆಯನ್ನು ಚಿಕ್ಕಮಗಳೂರಿನ ಸುತ್ತಮುತ್ತಲು ಚಿತ್ರೀಕರಿಸಲಾಗಿದ್ದು, ಸೀರಿಯಲ್ ಕತೆ ಮಾನವೀಯ ಅಂತಃಕರಣ ಹಾಗೂ ಅತಿಮಾನುಷ ಶಕ್ತಿಗಳ ಅಟ್ಟಹಾಸವನ್ನು ಮುಖಾಮುಖಿಯಾಗಿಸುತ್ತದೆ.
ಸೀರಿಯಲ್‌ನಲ್ಲಿ ಯಾರಿದ್ದಾರೆ?
ಶ್ರವಂತ್ ರಾಧಿಕಾ ನಿರ್ದೇಶನದಲ್ಲಿ ಮೂಡಿಬಂದ ಧಾರಾವಾಹಿಯಲ್ಲಿ ಬಹಳಷ್ಟು ತಾರಾಗಣ ನಟಿಸಿದ್ದಾರೆ. ಈ ಹಿಂದೆ ಗೀತಾ ಧಾರಾವಾಹಿಯಲ್ಲಿ ವಿಜಯ್ ಆಗಿ ತೆರೆ ಮೇಲೆ ಮಿಂಚಿದ್ದ ಧನುಷ್ ಗೌಡ ಈ ಸೀರಿಯಲ್ ನಾಯಕನಾಗಿ ನಟಿಸಿದ್ದಾರೆ. , ಹಿರಿಯ ನಟಿ ಗಿರಿಜಾ ಲೋಕೇಶ್, ಭಾಗ್ಯಶ್ರೀ, ಬಿ ಎಂ ವೆಂಕಟೇಶ್ ಮತ್ತು ಗಾಯಕಿ ಅರ್ಚನಾ ಉಡುಪ ಪಾತ್ರವರ್ಗದಲ್ಲಿದ್ದಾರೆ. ಜೊತೆಗೆ ಮಜಾ ಟಾಕೀಸ್ ಖ್ಯಾತಿಯ ರೆಮೋ ಕೂಡ ಇದ್ದಾರೆ. ಚಿತ್ರಾ ಶೆಣೈ ತಮ್ಮ ಗುಡ್ ಕಂಪನಿ ಸಂಸ್ಥೆಯಿಂದ ‘ನೂರು ಜನ್ಮಕೂ’ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ : Drishti Bottu Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ದೃಷ್ಟಿಬೊಟ್ಟು’; ರೂಪವೇ ಶಾಪವಾದವಳ ಕಥೆ
https://youtu.be/psBlP3SGJl4?si=5_5HcekG-DM-OazZ