Sunday, 8th September 2024

ಬಿಜೆಪಿ ಕೊಡೆ, ಶಿವಸೇನಾ ಬಿಡೆ

* ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ
* ಸರಕಾರ ರಚನೆಯ ಹಕ್ಕು ಮಂಡನೆ ಇಲ್ಲ
* ಪಟ್ಟುಬಿಡದ ಶೀವಸೇನೆ
* ಸೇನಾ ಶಾಸಕಾಂಗ ಪಕ್ಷದ ಸಭೆ
* ಸೂಕ್ತ ನಿರ್ಧಾರ ಕೈಗೊಳ್ಳಲು ಉದ್ಧವ್ ಠಾಕ್ರೆೆಗೆ ಅಧಿಕಾರ
* ಶಾಸಕರು ಹೋಟೆಲ್‌ಗೆ ಶಿಫ್‌ಟ್‌

ಮುಂಬೈ: ಸರಕಾರ ರಚನೆ ಕುರಿತಂತೆ ಮಹಾರಾಷ್ಟ್ರದಲ್ಲಿ ಗುರುವಾರ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದರೂ ಬಿಕ್ಕಟ್ಟು ಹಾಗೆಯೇ ಮುಂದುವರಿದಿದೆ.
ಬಿಜೆಪಿಯು ಸರಕಾರ ರಚನೆಯ ಹಕ್ಕನ್ನು ಮಂಡಿಸದೇ ಕಾದು ನೋಡುವ ತಂತ್ರಕ್ಕೆೆ ಶರಣಾಗಿದೆ. ಇತ್ತ ಶಿವಸೇನೆಯು 50:50 ಸೂತ್ರದಡಿ ಅಧಿಕಾರ ಹಂಚಿಕೆಯ ಬೇಡಿಕೆಗೆ ಪಟ್ಟುಹಿಡಿದು ಕೂತಿದೆ.

ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆೆ ಅವರು ತಲೆಬಾಗುವ ಲಕ್ಷಣಗಳು ಸದ್ಯಕ್ಕಂತೂ ಕಾಣುತ್ತಿಿಲ್ಲ. ‘ಲೋಕಸಭಾ ಚುನಾವಣೆ ವೇಳೆ ಅಧಿಕಾರ ಹಂಚಿಕೆ ಕುರಿತು ನಿರ್ಧಾರದ ಬಗ್ಗೆೆ ಸಮ್ಮತಿ ಸೂಚಿಸುವುದಾದರೆ ಬಿಜೆಪಿಯ ಹಿರಿಯರೊಂದಿಗೆ ಚರ್ಚಿಸಲು ನಾನು ಸಿದ್ಧನಿದ್ದೇನೆ. 2.5 ವರ್ಷದ ಅವಧಿಗೆ ಮುಖ್ಯಮಂತ್ರಿಿ ಹುದ್ದೆಯನ್ನು ಶಿವಸೇನಾಗೆ ಬಿಟ್ಟುಕೊಡಲು ಅವರು ನಿರ್ಧರಿಸಿದರೆ ನನ್ನನ್ನು ಮಾತುಕತೆಗೆ ಕರೆಯಲಿ, ಇಲ್ಲವಾದರೆ ಬೇಡ’ ಎಂದು ಅವರು ಬಿಜೆಪಿಗೆ ಕಡ್ಡಿಿಮುರಿದಂತೆ ಸಂದೇಶ ಕಳಿಸಿದ್ದಾಾರೆ.

ಉದ್ಧವ್ ಠಾಕ್ರೆೆ ಅವರ ನಿವಾಸ ಮಾತೋಶ್ರೀಯಲ್ಲಿ ಶಿವಸೇನಾ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸರಕಾರ ರಚನೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಠಾಕ್ರೆೆ ಅವರಿಗೆ ನೀಡಲು ನಿರ್ಧರಿಸಲಾಯಿತು. ‘ಪ್ರಸಕ್ತ ರಾಜಕೀಯ ಸನ್ನಿಿವೇಶದಲ್ಲಿ ಪಕ್ಷದ ಎಲ್ಲ ಶಾಸಕರು ಒಟ್ಟಾಾಗಿರುವುದು ಅಗತ್ಯ. ಉದ್ಧವ್ ಠಾಕ್ರೆೆಯವರು ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆೆ ಎಲ್ಲರೂ ಬದ್ಧರಾಗಿರುತ್ತಾಾರೆ’ಎಂದು ಶಿವಸೇನಾ ಶಾಸಕ ಸುನಿಲ್ ಪ್ರಭು ಹೇಳಿದರು.

ಠಾಕ್ರೆೆಯವರ ಅಧ್ಯಕ್ಷತೆಯಲ್ಲಿ ಸುಮಾರು ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ ರಾಜಕೀಯ ಸ್ಥಿಿತಿಯ ಅವಲೋಕನ ನಡೆಯಿತು. 50:50 ಸೂತ್ರದಡಿ ಅಧಿಕಾರ ಹಂಚಿಕೆ ಆಗಬೇಕೆಂಬ ಬೇಡಿಕೆಗೆ ಬದ್ಧ ಎಂಬುದನ್ನು ಸ್ಪಷ್ಟಪಡಿಸಲಾಯಿತು. ಇದರಲ್ಲಿ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಿ ಸ್ಥಾಾನವನ್ನು ಶಿವಸೇನೆಗೆ ಸೇರಿದೆ.

ಈ ನಡುವೆ, ‘ಬೆದರಿಕೆ ತಂತ್ರಗಳು ಫಲ ನೀಡುವುದಿಲ್ಲ’ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ತಿಳಿಸಿದ್ದಾಾರೆ. ‘ಸರಕಾರ ರಚಿಸಲು ನಮಗೆ ಬೇರೆ ದಾರಿ ಮತ್ತು ಅವಕಾಶಗಳಿವೆ’ ಎಂದು ಸುದ್ದಿಗಾರರಿಗೆ ತಿಳಿಸಿದರಾದರೂ ಆ ಬಗ್ಗೆೆ ಹೆಚ್ಚಿಿನ ವಿವರ ನೀಡಲಿಲ್ಲ. ಬಿಜೆಪಿಯು ಸರಕಾರ ರಚನೆಯ ಪ್ರಕ್ರಿಿಯೆಯನ್ನು ಬೇಕಂತಲೇ ವಿಳಂಬ ಮಾಡುತ್ತಿಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ವೇದಿಕೆ ಸಿದ್ಧಮಾಡುತ್ತಿಿದೆ ಎಂದು ಪತ್ರಿಿಕಾಗೋಷ್ಠಿಿಯಲ್ಲಿ ಅವರು ಆಪಾದಿಸಿದರು.

ಬಿಜೆಪಿ ನಿಯೋಗದಿಂದ ಭೇಟಿ
ಬಿಜೆಪಿ ನಿಯೋಗವು ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ಅವರನ್ನು ಗುರುವಾರ ಭೇಟಿಯಾಯಿತು. ‘ರಾಜ್ಯದಲ್ಲಿ ಸರಕಾರ ರಚನೆಯು ಅಗತ್ಯಕ್ಕಿಿಂತ ಹೆಚ್ಚು ಕಾಲವನ್ನು ತೆಗೆದುಕೊಳ್ಳುತ್ತಿಿರುವುದು ನಿಜ’ ಎಂದು ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ತಿಳಿಸಿದರು. ರಾಜ್ಯದಲ್ಲಿನ ಈಗಿನ ರಾಜಕೀಯ ಪರಿಸ್ಥಿಿತಿಯ ಕಾನೂನು ಅಂಶಗಳನ್ನು ರಾಜಪಾಲರೊಂದಿಗೆ ಚರ್ಚಿಸಲಾಯಿತು ಎಂದು ಹೇಳಿದರು.

ಹೋಟೆಲ್‌ಗೆ ಶಿವಸೇನಾ ಶಾಸಕರು ಶಿಫ್‌ಟ್‌
ದೇಶದಲ್ಲಿ ಇತ್ತೀಚೆಗೆ ರೆಸಾರ್ಟ್ ರಾಜಕಾರಣ ಈಗ ಶಿವಸೇನೆ ಸಹ ಇದೇ ಹಾದಿಯಲ್ಲಿದ್ದು, ಪಕ್ಷದ ಶಾಸಕರೆಲ್ಲ ಹೋಟೆಲ್‌ಗೆ ಶ್ಟಿ್‌ೃ ಆಗಿದ್ದಾರೆ. ಮಹಾರಾಷ್ಟರದಲ್ಲಿ ಸರಕಾರ ರಚನೆ ಕುರಿತ ಬಿಕ್ಕಟ್ಟು ಹೆಚ್ಚಾಾಗುತ್ತಿಿದ್ದಂತೆ ಇದು ಮಹತ್ವ ಪಡೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!