Saturday, 7th September 2024

ನಗರ ಸ್ಥಳೀಯ ಸಂಸ್ಥೆ ಚುನಾವಣೆ: ರಜೆ ಘೋಷಣೆ

ನಗರ ಸ್ಥಳೀಯ ಸಂಸ್ಥೆೆಗಳ ಚುನಾವಣೆ ಮತದಾನ ಮಂಗಳವಾರ ನಡೆಯಲಿದ್ದು, ಸರಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಾಜ್ಯ ಚುನಾವಣಾ ಆಯೋಗ ರಜೆ ಘೋಷಿಸಿ ಆದೇಶ ಹೊರಡಿಸಿದೆ.
ರಾಜ್ಯದ 2 ಮಹಾನಗರ ಪಾಲಿಕೆ, 6 ನಗರಸಭೆ, 3 ಪುರಸಭೆ, 3 ಪಟ್ಟಣ ಪಂಚಾಯಿತಿಗಳಿಗೆ ಮತದಾನ ನಡೆಯಲಿದೆ. ಈ ಹಿಂದೆಯೇ ರಾಜ್ಯ ಚುನಾವಣಾ ಆಯೋಗ ಜಿಲ್ಲಾ/ತಾಲೂಕು ಪಂಚಾಯತಿ ಹಾಗೂ ಗ್ರಾಾಮ ಪಂಚಾಯಿತಿ ಕ್ಷೇತ್ರಗಳಿಗೆ ಚುನಾವಣೆ ಪ್ರಕಟಿಸಿತ್ತು. ಆಯೋಗ ಅಕ್ಟೋೋಬರ್ 20ರಿಂದಲೇ ಚುನಾವಣೆ ನಡೆಯಲಿರುವ ಸ್ಥಳೀಯ ಸಂಸ್ಥೆೆಗಳ ವ್ಯಾಾಪ್ತಿಿಯಲ್ಲಿ ನೀತಿ ಸಂಹಿತೆ ಜಾರಿಗೊಳಿಸಿತ್ತು. ಕಳೆದ ಅ.31ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ನಾಮಪತ್ರ ಹಿಂಪಡೆಯಲು ನ.4ರವರೆಗೆ ಅವಕಾಶವಿತ್ತು.

ಮಂಗಳೂರು ಮಹಾನಗರ ಪಾಲಿಕೆ, ಶಿವಮೊಗ್ಗ ಜಿಲ್ಲೆಯ ಜೋಗ್ ಕಾರ್ಗಲ್ ಪಟ್ಟಣ ಪಂಚಾಯಿತಿ, ಬಳ್ಳಾರಿ ಕಂಪ್ಲಿ ಪುರಸಭೆ, ಕೂಡ್ಲಿಿಗಿ ಪಟ್ಟಣ ಪಂಚಾಯಿತಿ ಸೇರಿ 14 ನಗರ ಸ್ಥಳೀಯ ಸಂಸ್ಥೆೆಗಳಿಗೆ ಚುನಾವಣೆ ನಡೆಯಲಿದೆ. ಸ್ಥಳೀಯ ಸಂಸ್ಥೆೆಗಳ 1,388 ಮತಗಟ್ಟೆೆಗಳಲ್ಲಿ, 13, 04,614 ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ನ.12 ರಂದು ಬೆಳಗ್ಗೆೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮರು ಮತದಾನ ಇದ್ದಲ್ಲಿ ನ.13 ರಂದು ಬೆಳಗ್ಗೆೆ 7 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ. ನಂತರ ನ.14 ರಂದು ಆಯಾ ತಾಲೂಕು ಕೇಂದ್ರ ಸ್ಥಳದಲ್ಲಿ ಮತಗಳ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.

ಚುನಾವಣೆ ನಡೆಯಲಿರುವ ಜಿಲ್ಲೆಗಳು
ಕೋಲಾರ: ಕೋಲಾರ(ನಗರಸಭೆ), ಮುಳಬಾಗಿಲು(ನಗರಸಭೆ), ಕೆಜಿಎಫ್(ನಗರಸಭೆ)
ಚಿಕ್ಕಬಳ್ಳಾಾಪುರ: ಗೌರಿಬಿದನೂರು(ನಗರಸಭೆ), ಚಿಂತಾಮಣಿ(ನಗರಸಭೆ)
ರಾಮನಗರ: ಕನಕಪುರ(ನಗರಸಭೆ), ಮಾಗಡಿ(ಪುರಸಭೆ)
ಶಿವಮೊಗ್ಗ: ಜೋಗ ಕಾರ್ಗಲ್(ಪಟ್ಟಣ ಪಂಚಾಯತ್)
ಚಿಕ್ಕಮಗಳೂರು: ಬೀರೂರು(ಪುರಸಭೆ)
ದಾವಣಗೆರೆ: ದಾವಣಗೆರೆ(ಮಹಾನಗರ ಪಾಲಿಕೆ)
ದಕ್ಷಿಣ ಕನ್ನಡ: ಮಂಗಳೂರು(ಮಹಾನಗರ ಪಾಲಿಕೆ)
ಧಾರವಾಡ: ಕುಂದಗೋಳ(ಪಟ್ಟಣ ಪಂಚಾಯತ್)
ಬಳ್ಳಾಾರಿ: ಕಂಪ್ಲಿಿ(ಪುರಸಭೆ), ಕೂಡ್ಲಗಿ(ಪಟ್ಟಣ ಪಂಚಾಯತ್)

ಉಪ ಚುನಾವಣೆ ನಡೆಯುವ ಜಿಲ್ಲೆಗಳು
ಹೊಳೆನರಸೀಪುರ ಪುರಸಭೆ ವಾರ್ಡ್ ನಂ.4
ಕೊಳ್ಳೆೆಗಾಲ ನಗರಸಭೆ ವಾರ್ಡ್ ನಂ.19
ಚಡಚಣ ಪಟ್ಟಣ ಪಂಚಾಯತ್ ವಾರ್ಡ್ ನಂ.5
ಮಹಾಲಿಂಗಪುರ ಪುರಸಭೆ ವಾರ್ಡ್ ನಂ.17
ಚಿತ್ತಾಾಪುರ ಪುರಸಭೆ ವಾರ್ಡ್ ನಂ.10

Leave a Reply

Your email address will not be published. Required fields are marked *

error: Content is protected !!