ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kunal Kamra: ಏಕನಾಥ್ ಶಿಂಧೆ ಪ್ರಕರಣ; ಕುನಾಲ್ ಕಮ್ರಾಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್‌

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ವಿವಾದಾತ್ಮಕ ಹೇಳೀಕೆ ನೀಡಿದ್ದ ಕುನಾಲ್‌ ಕಾಮ್ರಾಗೆ ಇದೀಗ ಬಿಗ್‌ ರಿಲೀಫ್‌ ಸಿಕ್ಕಿದೆ. ಹಾಸ್ಯನಟ ಅವರಿಗೆ ಬಾಂಬೆ ಹೈಕೋರ್ಟ್ ಸ್ವಲ್ಪ ರಿಲೀಫ್ ನೀಡಿದೆ. ಶುಕ್ರವಾರ ಬೆಳಿಗ್ಗೆ ನ್ಯಾಯಾಲಯವು ಶ್ರೀ ಕಮ್ರಾ ಅವರನ್ನು ಈ ಸಮಯದಲ್ಲಿ ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಕುನಾಲ್ ಕಮ್ರಾಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್‌

Profile Vishakha Bhat Apr 25, 2025 1:40 PM

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ವಿವಾದಾತ್ಮಕ ಹೇಳೀಕೆ ನೀಡಿದ್ದ ಕುನಾಲ್‌ ಕಾಮ್ರಾಗೆ ಇದೀಗ ಬಿಗ್‌ ರಿಲೀಫ್‌ ಸಿಕ್ಕಿದೆ. ಹಾಸ್ಯನಟ ಅವರಿಗೆ ಬಾಂಬೆ ಹೈಕೋರ್ಟ್ ಸ್ವಲ್ಪ ರಿಲೀಫ್ ನೀಡಿದೆ. ಶುಕ್ರವಾರ ಬೆಳಿಗ್ಗೆ ನ್ಯಾಯಾಲಯವು ಶ್ರೀ ಕಮ್ರಾ ಅವರನ್ನು ಈ ಸಮಯದಲ್ಲಿ ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಆದಾಗ್ಯೂ, ನ್ಯಾಯಮೂರ್ತಿ ಸಾರಂಗ್ ಕೊತ್ವಾಲ್ ಮತ್ತು ನ್ಯಾಯಮೂರ್ತಿ ಎಸ್.ಎಂ. ಮೋಡಕ್ ಅವರ ಪೀಠವು, ಶಿಂಧೆ ಅವರನ್ನು ದೇಶದ್ರೋಹಿ ಎಂದು ಕರೆದಿರುವ ಪ್ರಕರಣದ ತನಿಖೆ ನಡೆಸಲು ಅವಕಾಶವಿದೆ ಎಂದು ಹೇಳಿದೆ. ಆರೋಪಗಳನ್ನು ರದ್ದುಗೊಳಿಸುವಂತೆ ಕಾಮ್ರಾ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿದೆ.

ಬಂಧನದಿಂದ ತಪ್ಪಿಸಿಕೊಳ್ಳಲು ಕಾಮ್ರಾ ಕೋರ್ಟ್‌ ಮೊರೆ ಹೋಗಿದ್ದರು. ತನಿಖೆ ಮುಂದುವರಿಯಬಹುದು (ಆದರೆ) ಅರ್ಜಿದಾರರನ್ನು (ಕುನಾಲ್ ಕಮ್ರಾ) ಅರ್ಜಿಯ ವಿಚಾರಣೆಯ ಸಮಯದಲ್ಲಿ ಬಂಧಿಸಬಾರದು" ಎಂದು ನ್ಯಾಯಾಧೀಶರು ತೀರ್ಪು ನೀಡಿದರು, ಮುಂಬೈ ಪೊಲೀಸರು ಅವರನ್ನು ಪ್ರಶ್ನಿಸಲು ಬಯಸಿದರೆ, ಅವರು ಚೆನ್ನೈನಲ್ಲಿರುವ ಅವರ ಪ್ರಸ್ತುತ ನಿವಾಸದಲ್ಲಿ ಸೂಕ್ತ ಸೂಚನೆ ನೀಡಿ ತೆರಳಬಹುದು ಎಂದು ಕೋರ್ಟ್‌ ಹೇಳಿದೆ. ಕೊಲೆ ಬೆದರಿಕೆ ಬಂದ ನಂತರ ಪೊಲೀಸರು ವಿಚಾರಣೆಗೆ ಕರೆ ಮಾಡಿದಾಗ ಮಹಾರಾಷ್ಟ್ರಕ್ಕೆ ಪ್ರಯಾಣಿಸುವ ಬಗ್ಗೆ ಚಿಂತಿತರಾಗಿರುವುದಾಗಿ ಕಮ್ರಾ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಏನಿದು ವಿವಾದ?

ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಮಹಾರಾಷ್ಟ್ರ ಡಿಸಿಎಂ ಏಕನಾಥ್‌ ಶಿಂಧೆ(Eknath Shinde) ಬಗ್ಗೆ ನಾಲಿಗೆ ಹರಿಬಿಟ್ಟು ಭಾರೀ ವಿವಾದಕ್ಕೀಗಿದ್ದಾರೆ. ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಕುನಾಲ್ ಕಾಮ್ರಾ(Kunal Kamra) ಅವರು ತಮ್ಮ ಶೋನಲ್ಲಿ ಏಕನಾಥ್‌ ಶಿಂಧೆ ಅವರನ್ನು ನಂಬಿಕೆದ್ರೋಹಿ ಎಂದು ಕರೆದಿದ್ದರು. ಏಕನಾಥ್ ಶಿಂಧೆ ಅವರನ್ನು ನಂಬಿಕೆದ್ರೋಹಿ ಎಂದು ಕರೆದಿರುವುದನ್ನು ಕಾಣಬಹುದು. ಕುನಾಲ್ ಕಮ್ರಾ ತಮ್ಮ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಶಿವಸೇನೆಯನ್ನು ಟೀಕಿಸಿದ್ದರು.

ಈ ಸುದ್ದಿಯನ್ನೂ ಓದಿ: Kunal Kamra: ಕುತ್ತು ತಂದ ಕಾಮಿಡಿ; FIR ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಕುನಾಲ್‌ ಕಮ್ರಾ

ಕುನಾಲ್ ಕಾಮ್ರಾ ಅವರು ಏಕನಾಥ್ ಶಿಂಧೆ ಮತ್ತು ಶಿವಸೇನೆಯನ್ನು ಟೀಕಿಸುತ್ತಾ, 'ಶಿವಸೇನೆ ಬಿಜೆಪಿಯಿಂದ ಹೊರಬಂದಿತು, ನಂತರ ಶಿವಸೇನೆಯೇ ಶಿವಸೇನೆಯಿಂದ ಹೊರಬಂದಿತು' ಎಂದು ಹೇಳಿದರು. ನಂತರ ಎನ್‌ಸಿಪಿ ಎನ್‌ಸಿಪಿ ತೊರೆದಿತು. ಒಬ್ಬ ಮತದಾರನಿಗೆ 9 ಬಟನ್‌ಗಳನ್ನು ನೀಡಿದರು. ಎಲ್ಲರೂ ಗೊಂದಲಕ್ಕೊಳಗಾದರು. ಇದನ್ನು ಒಬ್ಬ ವ್ಯಕ್ತಿ ಪ್ರಾರಂಭಿಸಿದ್ದು, ಆತನ ಮುಂಬೈನ ಒಂದು ದೊಡ್ಡ ಜಿಲ್ಲೆ ಥಾಣೆಯಿಂದ ಬಂದವರು ಎಂದು ಏಕನಾಥ್‌ ಶಿಂಧೆಯನ್ನು ಪರೋಕ್ಷವಾಗಿ ಟೀಕಿಸಿದ್ದರು. ಸಾಲದೆನ್ನುವಂತೆ ಸ್ವತಃ ತಾವೇ ಬರೆದ ಹಾಡೊಂದು ಹಾಡಿ ಅದರಲ್ಲಿ ಶಿಂಧೆಯನ್ನು ನಂಬಿಕೆದ್ರೋಹಿ ಎಂದು ಕರೆದಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು.