Deepika Padukone: ರೆಡ್ ಗೌನ್ನಲ್ಲಿ ಬಾಲಿವುಡ್ ಬ್ಯೂಟಿಯ ಕ್ಯೂಟ್ ಲುಕ್! ಇಲ್ಲಿವೆ ಫೋಟೋಸ್...!
ಬಾಲಿವುಡ್ನ ಲೇಡಿ ಸೂಪರ್ಸ್ಟಾರ್ ದೀಪಿಕಾ ಬಹು ಬೇಡಿಕೆಯ ನಟಿ. ಸದ್ಯ ತಾಯ್ತನದ ಬಳಿಕ ನಟಿ ದೀಪಿಕಾ ಪಡುಕೋಣೆ ಚಿತ್ರ ರಂಗಕ್ಕೆ ಕಮ್ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ. ಈ ನಡುವೆ ನಟಿ ಸ್ಟಾಕ್ಹೋಮ್ನಲ್ಲಿ ನಡೆದ ಕಾರ್ಟಿಯರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.



ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾನಲ್ಲಿ ನಟಿ ದೀಪಿಕಾ ನಟಿಸ್ತಾರೆ ಎನ್ನಲಾಗಿತ್ತು. ಆದರೆ ಈ ಸಿನಿಮಾದಿಂದ ನಟಿ ಹೊರ ಬಂದಿದ್ದು ಈಗ ಅಲ್ಲು ಅರ್ಜುನ್ ಅವರ ಹೊಸ ಸಿನಿಮಾ ಸೇರಿಕೊಂಡಿದ್ದಾರೆ. ಈ ನಡುವೆ ನಟಿ ಸ್ಟಾಕ್ ಹೋಮ್ನಲ್ಲಿ ನಡೆದ ಕಾರ್ಟಿಯರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕೆಂಬಣ್ಣದ ಗೌನ್ ಧರಿಸಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಕಾರ್ಟಿಯರ್ನ ಬ್ರಾಂಡ್ ರಾಯಭಾರಿಯಾಗಿರುವ ದೀಪಿಕಾ ಆಶಿ ಸ್ಟುಡಿಯೋದಿಂದ ತಯಾರಿಸಲಾದ ರೆಡ್ ಗೌನ್ ಧರಿಸಿದ್ದರು. ತನ್ನ ಲುಕ್ ಮತ್ತಷ್ಟು ಹೆಚ್ಚಿಸಲು ವಜ್ರದ ನೀಲಿ ಮಣಿಯ ನೆಕ್ಲೆಸ್ ಧರಿಸಿದ್ದರು.

ದೀಪಿಕಾ ತನ್ನ ಉಡುಗೆಗೆ ಮ್ಯಾಚ್ ಆಗುವಂತೆ ಸಿಂಪಲ್ ಮೇಕಪ್ ಮಾಡಿಕೊಂಡಿದ್ದು ಈ ಉಡುಪಿನಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದರು. ಸದ್ಯ ನಟಿಯ ವಿವಿಧ ಭಂಗಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ಅಭಿಮಾನಿಗಳು ನಟಿಯ ಲುಕ್ಗೆ ಫಿದಾ ಆಗಿದ್ದು, ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಈ ಪೋಟೋ ಬಹಳಷ್ಟು ಸುಂದರವಾಗಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ನಿಮ್ಮ ಈ ಲುಕ್ ಮತ್ತಷ್ಟು ಅಂದವನ್ನು ಹೆಚ್ಚಿಸಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ತಾಯ್ತನದ ಬಳಿಕ ನಟಿ ದೀಪಿಕಾ ಚಿತ್ರರಂಗಕ್ಕೆ ಮರಳಲು ಸಜ್ಜಾಗಿದ್ದಾರೆ. ಈಗಾಗಲೇ ಅವರು ಶಾರುಖ್ ಖಾನ್ ಜೊತೆಗೆ ‘ಕಿಂಗ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದಲ್ಲೂ ಆಯ್ಕೆ ಆಗಿದ್ದರು. ಆದರೆ ಸಂಭಾವನೆ ವಿಚಾರದಿಂದ ದೀಪಿಕಾ ಹೊರಬಂದಿದ್ದಾರೆ..