Nora Fatehi: ನೋರಾ ಫತೇಹಿ ಹಾಟ್ ಅವತಾರ ಹೇಗಿದೆ ನೋಡಿ; ಬೋಲ್ಡ್ ಫೋಟೋಸ್ ಫುಲ್ ವೈರಲ್!
ಬಾಲಿವುಡ್ ನ ಹಲವು ಹಾಡುಗಳಿಗೆ ಸೊಂಟ ಬಳುಕಿಸಿ ಜನಪ್ರಿಯರಾದ ನಟಿಯರಲ್ಲಿ ನೋರಾ ಫತೇಹಿ ಕೂಡ ಒಬ್ಬರು. ತಮ್ಮ ನಟನೆ ಹಾಗೂ ನೃತ್ಯದಿಂದ ಹಲವು ಅಭಿಮಾನಿಗಳನ್ನು ಗಿಟ್ಟಿಸಿಕೊಂಡ ನಟಿ ಸದ್ಯ ಅಮೇರಿಕನ್ ಮ್ಯೂಸಿಕ್ ಅವಾರ್ಡ್ಸ್ 2025ರಲ್ಲಿ ಭಾಗವಹಿಸಿದ್ದು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.



ಡ್ಯಾನ್ಸಿಂಗ್ ಕ್ವೀನ್ ನೋರಾ ಫತೇಹಿ ಸೋಷಿಯಲ್ ಮೀಡಿಯಾದಲ್ಲೂ ಸದಾ ಸಕ್ರಿಯರಾಗಿದ್ದಾರೆ. ಆಗಾಗ ಬೋಲ್ಡ್ ಫೋಟೋ ಶೂಟ್ ಮಾಡಿಸಿಕೊಳ್ಳುವ ನಟಿ ಈ ಭಾರಿ ಅಮೆರಿಕನ್ ಮ್ಯೂಸಿಕ್ ಅವಾರ್ಡ್ಸ್ನಲ್ಲಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ನ ಅನೇಕ ಸೂಪರ್ ಹಿಟ್ ಗೀತೆಗಳಲ್ಲಿ ಡ್ಯಾನ್ಸ್ ಮಾಡುವ ಮೂಲಕ ನೋರಾ ಫತೇಹಿ ಫೇಮಸ್ ಆಗಿದ್ದಾರೆ. ಅವರು ನರ್ತಿಸಿದ ಎಲ್ಲಾ ಐಟಂ ಸಾಂಗ್ಗಳು ಹಿಟ್ ಲಿಸ್ಟ್ ಸೇರಿದೆ.

ನೋರಾ ಫತೇಹಿ ಅಮೆರಿಕನ್ ಮ್ಯೂಸಿಕ್ ಅವಾರ್ಡ್ಸ್ ನಲ್ಲಿ ಬ್ಲಾಕ್ ಆ್ಯಂಡ್ ಸೀಲ್ವರ್ ಬಣ್ಣದ ಪ್ರಿಂಟೆಡ್ ಡ್ರೆಸ್ನಲ್ಲಿ ಕಂಗೊಳಿಸಿದ್ದಾರೆ. ನೆಕ್ಲೈನ್ ಡಿಸೈನ್ ಹೊಂದಿರುವ ಈ ಡ್ರೆಸ್ ಮಾಡರ್ನ್ ಜೊತೆಗೆ ಟ್ರೆಂಡಿ ಲುಕ್ ನೀಡಿದೆ.

ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 4 ಕೋಟಿಗೂ ಅಧಿಕ ಜನರು ಫಾಲೋವರ್ಸ್ ಹೊಂದಿರುವ ಈ ನಟಿಯ ಖ್ಯಾತಿ ದಿನ ದಿಂದ ದಿನಕ್ಕೆ ಹೆಚ್ಚುತ್ತಲೆ ಇದ್ದು ಇದೀಗ ನಟಿಯ ಬೋಲ್ಡ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ಈ ಡ್ರೆಸ್ನ ವಿನ್ಯಾಸವು ಡಿಫ್ರೆಂಟ್ ಆಗಿದ್ದು ಪ್ರಿಂಟೆಡ್ ಡಿಸೈನ್ ಗೆ ಮಾಡರ್ನ್ ಲುಕ್ ನೀಡಿದೆ. ನೋರಾ ಮ್ಯಾಟ್ ಫಿನಿಷ್ ಫೌಂಡೇಶನ್ ಬಳಸಿದ್ದು ಕಣ್ಣುಗಳಿಗೆ ಐಶಾಡೋ, ಐಲೈನರ್ ಮತ್ತು ಮಸ್ಕಾರಾ ಮೂಲಕ ಹೆಚ್ಚು ಆ್ಯಟ್ರಾಕ್ವೀವ್ ಕಂಡಿದ್ದಾರೆ. ತುಟಿಗಳಿಗೆ ಮ್ಯಾಟ್ ಶೇಡ್ ಲಿಪ್ಸ್ಟಿಕ್ ಬಳಸಿ ಫ್ರೀ ಹೇರ್ ಸ್ಟೈಲ್ ಮಾಡಿದ್ದಾರೆ. ನಟಿ ನೋರಾ ಫತೇಹಿ ಅವರಿಗೆ ಹಿಂದಿ ಚಿತ್ರ ರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅದರ ಜೊತೆ ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.