ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dalit MLA: ಛೇ... ಇದೆಂಥಾ ಕರ್ಮ! ದಲಿತ ಶಾಸಕರ ಭೇಟಿ ಬಳಿಕ ದೇವಸ್ಥಾನಕ್ಕೆ ಗಂಗಾಜಲ ಪೋಕ್ಷಣೆ

Dalit MLA: ದಲಿತ ಕಾಂಗ್ರೆಸ್ ಶಾಸಕ ಭೇಟಿ ನೀಡಿದ ಅನಂತರ ದೇವಾಲಯವನ್ನು ಶುದ್ಧೀಕರಿಸಿದ ರಾಜಸ್ಥಾನದ ಬಿಜೆಪಿ ನಾಯಕ ಜ್ಞಾನದೇವ್ ಅಹುಜಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅಲ್ವಾರ್‌ನ ದೇವಾಲಯಕ್ಕೆ ದಲಿತ ಕಾಂಗ್ರೆಸ್ ನಾಯಕ ಟಿಕಾರಾಮ್ ಜುಲ್ಲಿ ಭೇಟಿ ನೀಡಿದ್ದು, ಬಳಿಕ ದೇವಸ್ಥಾನ ಆವರಣವನ್ನು ಗಂಗಾಜಲ ಸಿಂಪಡಿಸಿ ಶುದ್ದೀಕರಣ ಮಾಡಲಾಗಿತ್ತು. ಇದಾಗಿ ಕೆಲವು ದಿನಗಳ ಬಳಿಕ ಜ್ಞಾನದೇವ್ ಅಹುಜಾ ಅವರನ್ನು ಬಿಜೆಪಿ ನಾಯಕರು ಅಮಾನತುಗೊಳಿಸಿದ್ದಾರೆ.

ದಲಿತ ಶಾಸಕರ ಭೇಟಿ ಬಳಿಕ ದೇವಸ್ಥಾನಕ್ಕೆ ಗಂಗಾಜಲ ಪೋಕ್ಷಣೆ

ಜೈಪುರ: ದಲಿತ ಕಾಂಗ್ರೆಸ್ ಶಾಸಕ (Dalit MLA) ಭೇಟಿ ನೀಡಿದ ಅನಂತರ ದೇವಾಲಯವನ್ನು ಶುದ್ಧೀಕರಿಸಿದ ರಾಜಸ್ಥಾನದ ಬಿಜೆಪಿ ನಾಯಕ (BJP leader) ಜ್ಞಾನದೇವ್ ಅಹುಜಾ (Gyandev Ahuja) ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅಲ್ವಾರ್‌ನ ದೇವಾಲಯಕ್ಕೆ ದಲಿತ ಕಾಂಗ್ರೆಸ್ ನಾಯಕ ಟಿಕಾರಾಮ್ ಜುಲ್ಲಿ (Tikaram Jully) ಭೇಟಿ ನೀಡಿದ್ದು, ಬಳಿಕ ದೇವಸ್ಥಾನ ಆವರಣವನ್ನು ಗಂಗಾಜಲ ಸಿಂಪಡಿಸಿ ಶುದ್ದೀಕರಣ ಮಾಡಲಾಗಿತ್ತು. ಇದಾಗಿ ಕೆಲವು ದಿನಗಳ ಬಳಿಕ ಜ್ಞಾನದೇವ್ ಅಹುಜಾ ಅವರನ್ನು ಬಿಜೆಪಿ ನಾಯಕರು ಅಮಾನತುಗೊಳಿಸಿದ್ದಾರೆ. ದಲಿತ ಮತದಾರರೇ ಹೆಚ್ಚಾಗಿರುವ ರಾಜಸ್ಥಾನದಲ್ಲಿ ಜ್ಞಾನದೇವ್ ಅಹುಜಾ ಅವರ ಶುದ್ದೀಕರಣ ಕಾರ್ಯದಿಂದ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಯಾವುದೇ ಹಾನಿಯಾಗದಂತೆ ತಡೆಯಲು ರಾಜ್ಯ ಬಿಜೆಪಿ ಅಹುಜಾ ಅವರಿಗೆ ನೋಟಿಸ್ ನೀಡಿದೆ. ಶುದ್ದೀಕರಣ ಕಾರ್ಯಕ್ಕೆ ಸಂಬಂಧಿಸಿ ರಾಜ್ಯ ಪಕ್ಷದ ಮುಖ್ಯಸ್ಥ ಮದನ್ ರಾಥೋಡ್‌ ಅವರಿಗೆ ಮೂರು ದಿನಗಳಲ್ಲಿ ಉತ್ತರ ನೀಡುವಂತೆ ನೋಟಿಸ್ ನಲ್ಲಿ ಅಹುಜಾ ಅವರಿಗೆ ಬಿಜೆಪಿ ಸಂಸದ ಮತ್ತು ರಾಜಸ್ಥಾನದ ಹಿರಿಯ ನಾಯಕ ದಾಮೋದರ್ ಅಗರ್ವಾಲ್ ತಿಳಿಸಿದ್ದು, ಒಂದು ವೇಳೆ ಉತ್ತರ ನೀಡದೇ ಇದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು,

ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ತೆಗೆದುಕೊಳ್ಳುವಾಗ ಜಾತಿ, ಲಿಂಗ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದು ಪ್ರಮಾಣವಚನ ಮಾಡಿ ಟಿಕಾರಾಮ್ ಜಲ್ಲಿ ಅವರ ಭೇಟಿಯನ್ನು ಪ್ರತಿಭಟಿಸಲು ಗಂಗಾಜಲ ಸಿಂಪಡಿಸಿದ್ದೀರಿ. ಇದು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಅವರು ನೋಟಿಸ್ ನಲ್ಲಿ ತಿಳಿಸಿದ್ದಾರೆ.

ಏನಾಗಿತ್ತು?

ರಾಜಸ್ಥಾನದ ಅಲ್ವಾರ್‌ನಲ್ಲಿರುವ ದೇವಾಲಯದಲ್ಲಿ ಭಾನುವಾರ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ರಾಜಸ್ಥಾನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಅಲ್ವಾರ್ ಗ್ರಾಮೀಣ ಪ್ರದೇಶದಿಂದ ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿರುವ ಟಿಕಾ ರಾಮ್ ಜಲ್ಲಿ ಭಾಗವಹಿಸಿದ್ದರು. ಅವರು ದೇವಾಲಯ ಪ್ರವೇಶಿಸಿದಾಗ, ದೇವರನ್ನು ಸ್ಪರ್ಶಿಸಲು ಮುಂದಾದಾಗ ಅಹುಜಾ ಅವರು ದೇವಾಲಯವು "ಅಶುದ್ಧ"ವಾಗುತ್ತದೆ ಎಂದು ಹೇಳಿದರು.

ಮರುದಿನ ಅವರು ದೇವಾಲಯವನ್ನು ಶುದ್ಧೀಕರಿಸಲು ಗಂಗಾಜಲ ಸಿಂಪಡಿಸಿ ಪೂಜೆ ಮಾಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಕಾಂಗ್ರಸ್ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಇದನ್ನೂ ಓದಿ: Supreme Court: ಮಸೂದೆಗಳನ್ನು ತಡೆ ಹಿಡಿಯಲು ರಾಜ್ಯಪಾಲರಿಗೆ ವಿಟೋ ಅಧಿಕಾರವಿಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

ವೈರಲ್ ಆದ ವಿಡಿಯೋಗೆ ಪ್ರತಿಕ್ರಿಯೆ ನೀಡಿದ ಟಿಕಾ ರಾಮ್ ಜಲ್ಲಿ ಅವರು ಅಹುಜಾ ಅವರ ಹೇಳಿಕೆಗಳು ದಲಿತರ ಬಗ್ಗೆ ಬಿಜೆಪಿಯ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತವೆ. ಇದು ಕೇವಲ ನನ್ನ ನಂಬಿಕೆಯ ಮೇಲಿನ ದಾಳಿಯಲ್ಲ, ಅಸ್ಪೃಶ್ಯತೆಯಂತಹ ಅಪರಾಧವನ್ನು ಪ್ರೋತ್ಸಾಹಿಸುವ ಹೇಳಿಕೆಯಾಗಿದೆ. ಬಿಜೆಪಿ ದಲಿತರನ್ನು ತುಂಬಾ ದ್ವೇಷಿಸುತ್ತದೆಯೇ, ನಾವು 'ಪೂಜೆ' ಮಾಡುವುದನ್ನು ಅವರು ನೋಡುವುದಿಲ್ಲವೇ? ದೇವರುಗಳು ಬಿಜೆಪಿ ನಾಯಕರಿಗೆ ಮಾತ್ರ ಸೇರಿದ್ದಾರೆಯೇ? ಎಂದು ಹೇಳಿದರು

ಕಾಂಗ್ರೆಸ್ ಹಿರಿಯ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯಿಸಿ, ಇಂತಹ ಸಂಕುಚಿತ ಮನಸ್ಥಿತಿ 21 ನೇ ಶತಮಾನದಲ್ಲಿ ನಾಗರಿಕ ಸಮಾಜದಲ್ಲಿ ಸ್ವೀಕಾರಾರ್ಹವಲ್ಲ ಎಂದರು. ಬಿಜೆಪಿ ನಾಯಕರ ಕ್ರಮಗಳು ಭಗವಾನ್ ರಾಮನ ಆದರ್ಶಗಳನ್ನು ಅವಮಾನಿಸುತ್ತವೆ. ಈ ನಾಚಿಕೆಗೇಡಿನ ಘಟನೆಗೆ ಬಿಜೆಪಿ ನಾಯಕರು ಕ್ಷಮೆಯಾಚಿಸಬೇಕು ಎಂದು ಹಿರಿಯ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ.