Tuesday, 28th May 2024

ಪೇಡಾ ನಗರಿಯ ಹುಡುಗಿ ದೀಪಾ

ಪ್ರತಿಭೆ ಇದ್ದರೆ ಖಂಡಿತ ಅವಕಾಶಗಳು ಸಿಕ್ಕೇ ಸಿಗುತ್ತವೆ. ಅಂತೆಯೇ ಕನ್ನಡ ಚಿತ್ರರಂಗದಲ್ಲಿ ಹಲವು ಪ್ರತಿಭಾನ್ವಿಿತ ನಟ- ನಟಿಯರಿದ್ದಾಾರೆ. ಅವರಲ್ಲಿ ಧಾರವಾಡದ ಬೆಡಗಿ ದೀಪಿಕಾ ಕೂಡ ಒಬ್ಬರು. ಸದಾ ಹಸನ್ಮುಖಿಯಾಗಿರುವ ದೀಪಿಕಾಗೆ ಬಾಲ್ಯದಿಂದಲೂ ಅಭಿನಯ ಎಂದರೆ ಅಚ್ಚುಮೆಚ್ಚು. ಚಿಕ್ಕ ವಯಸ್ಸಿಿನಿಂದಲೇ ತಾನೊಬ್ಬಳು ನಟಿಯಾಗಬೇಕು ಎಂದು ಕನಸು ಕಟ್ಟಿಿಕೊಂಡವಳು ದೀಪಿಕಾ.

ಸದ್ಯ ವ್ಯಾಾಸಾಂಗ ಮಾಡುತ್ತಿಿರುವ ದೀಪಿಕಾ ಕಲೆಯ ಹೌದು. ಅದೇ ದಾರಿಯಲ್ಲಿ ನಡೆದು ಬಾಲ್ಯದಲ್ಲಿ ಕಂಡ ಕನಸನ್ನು ನನಸು ಮಾಡಿಕೊಳ್ಳುವಲ್ಲಿಯೂ ಯಶಸ್ವಿಿಯಾಗಿದ್ದಾಾಳೆ. ಪವರ್ ಸ್ಟಾಾರ್ ಪುನೀತ್ ರಾಜಕುಮಾರ್ ಎಂದರೆ ಈಕೆಗೆ ಅಚ್ಚುಮೆಚ್ಚು. ಅವರ ಅಪ್ಪಟ ಅಭಿಮಾನಿಯಾಗಿರುವ ದೀಪಿಕಾ, ಮುಂದೆ ಒಂದು ದಿನ ಅವರೊಂದಿಗೆ ಚಿತ್ರದಲ್ಲಿ ಅಭಿನಯಿಸುವ ಕನಸನ್ನು ಕಟ್ಟಿಿಕೊಂಡಿದ್ದಾಳೆ. ನಟನೆಯ ಅಭಿರುಚಿ ಇದ್ದ ಈಕೆ ಕನ್ನಡ ಕಿರುತೆಯ ‘ಮಹಾಸತಿ’, ‘ಬ್ರಹ್ಮಾಾಸ್ತ್ರ’ ಧಾರವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ತೆಲುಗಿನ ’ಪ್ರೇಮ ನಗರ’ ಧಾರಾವಾಹಿಯಲ್ಲೂ ಮುಖ್ಯ ಪಾತ್ರದಲ್ಲಿ ನಟಿಸಿದ್ದಾಳೆ. ಜತೆಗೆ, ’ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ’ ಎಂಬ ಕನ್ನಡದ ಚಿತ್ರದಲ್ಲಿ ನಟಿಸಿದ್ದಾಳೆ. ’ಕ್ರಿಿಟಿಕಲ್ ಕೀರ್ತನೆಗಳು’ ಎಂಬ ಇನ್ನೊೊಂದು ಚಿತ್ರದಲ್ಲಿ ನಟಿಸುವ ಅವಕಾಶಧವೂ ಅರಸಿ ಬಂದಿದೆ. ಹಾಗೇ ಕೆಲವು ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾಳೆ. ಪರಭಾಷಾ ಚಿತ್ರದಲ್ಲಿ ಅವಕಾಶಗಳು ಸಿಕ್ಕರೂ ತಾನು ಕನ್ನಡ ಚಿತ್ರರಂಗದಲ್ಲಿ ಒಬ್ಬ ನಟಿಯಾಗಿ ಗುರುತಿಸಿಕೊಳ್ಳಬೇಕು ಎಂಬ ಹಂಬಲ ಆಕೆಗೆಇದೆ. ಆಕೆ ಕಂಡ ಕನಸು ನನಸಾಗಲಿ ಎಂಬುದೇ ನಮ್ಮ ಆಶಯ.

Leave a Reply

Your email address will not be published. Required fields are marked *

error: Content is protected !!