Sunday, 23rd June 2024

ಶಿವಾನಂದ ಸರ್ಕಲ್ ಸೆಟ್ಟೇರಲು ಸಿದ್ಧ

ಬೆಂಗಳೂರಿನಲ್ಲಿ ‘ಶಿವಾನಂದ ಸರ್ಕಲ್’ ಜನಪ್ರಿಯ ಸ್ಥಳಗಳಲ್ಲಿ ಒಂದು. ಈಗ ಇದೇ ‘ಶಿವಾನಂದ ಸರ್ಕಲ್’ ಚಿತ್ರವಾಗಿ ಮೂಡಿಬರಲಿದೆ. ಅಂದರೆ ಇದೇ ಹೆಸರನ್ನು ಚಿತ್ರದ ಶೀರ್ಷಿಕೆಯಾಗಿ ಬಳಸಿಕೊಳ್ಳುತ್ತಿಿದ್ದಾಾರೆ. ಈ ಹಿಂದೆ ‘ಕಾಫಿಕಟ್ಟೆೆ’, ‘ನವಿಲ ಕಿನ್ನರಿ’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಕಪಿಲ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿಿದ್ದಾಾರೆ. ಜತೆಗೆ ಬಂಡವಾಳವನ್ನು ಹೂಡಿದ್ದು ನಿರ್ಮಾಣದ ಜವಾಬ್ದಾಾರಿಯನ್ನು ಹೊತ್ತಿಿದ್ದಾಾರೆ. ‘ಶಿವಾನಂದ ಸರ್ಕಲ್’ ಇಂದಿನ ಯವಪೀಳಿಗೆಗೆ ಅಗತ್ಯವಾದ ಸಾರಲು ತೆರೆಗೆ ಬರುತ್ತಿದೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ನಿರುದ್ಯೋೋಗ ಹೆಚ್ಚಾಾಗುತ್ತಿಿದೆ. ಹಾಗಾಗಿ ಜಿಗುಪ್ಸೆೆಗೊಂಡ ಕೆಲವು ಯುವಕರು ನೋವು ಮರೆಯಲೋ, ಅಥವಾ ಜೀವನದ ಬಗ್ಗೆೆ ಅರಿಯದೆಯೋ ಕುಡಿತಕ್ಕೆೆ ದಾಸರಾಗುತ್ತಿದ್ದಾರೆ. ಹೀಗೆ ಮದ್ಯದ ಚಟಕ್ಕೆೆ ಬಿದ್ದು ತಮ್ಮ ಜವಾಬ್ದಾಾರಿಗಳಲ್ಲೇ ಮರೆಯುತ್ತಿಿದ್ದಾಾರೆ. ಇಂದಿನ ಯುವ ಸಮೂಹವೇ ಹೀಗೆ ದಾರಿ ತಪ್ಪಿಿದರೆ, ಮುಂದೆ ಅವರ ಭವಿಷ್ಯ ಹೇಗೆ ಎನ್ನುವ ಯೋಚನೆ , ಚಿಂತೆ ಎರಡೂ ಆವರಿಸುತ್ತದೆ. ಇಂತಹ ಕಥೆಯನ್ನು ಹೆಣೆದು ಕಪಿಲ್ ಚಿತ್ರವನ್ನು ತೆರೆಗೆ ಅಗತ್ಯ ಸಿದ್ಧತೆ ನಡೆಸಿದ್ದಾಾರೆ.
ಚಿತ್ರದಲ್ಲಿ ಆರು ನಾಯಕರಿದ್ದು ಆರು ನಾಯಕಿಯರು ಇರಲಿದ್ದಾಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ನವ ಕಲಾವಿದರಿಗೆ ಅವಕಾಶ ಕಲ್ಪಿಿಸಿದ್ದಾಾರೆ ನಿರ್ದೇಶಕರು. ರಂಗಸ್ವಾಾಮಿ, ಶಿವಪ್ಪ ಕೂಡ್ಲೂರು, ಮುನಿರಾಜು, ಆನಂದ್ ರೆಡ್ಡಿಿ, ಹಾಗೂ ಪದ್ಮನಾಭ ಎಂಬ ನವ ನಟರು ಈ ಚಿತ್ರದ ಮೂಲಕವೇ ಚಂದನವನಕ್ಕೆೆ ಎಂಟ್ರಿಿಕೊಡಲಿದ್ದಾಾರೆ. ನಾಯಕಿಯರ ಆಯ್ಕೆೆ ಇನ್ನಷ್ಟೇ ನಡೆಯಲಿದೆ. ‘ಶಿವಾನಂದ ಸರ್ಕಲ್’ ಚಿತ್ರದಲ್ಲಿ ಐದು ಹಾಡುಗಳಿವೆ. ಶಿವಪ್ಪ ಕೂಡ್ಲೂರು ಸಾಹಿತ್ಯ ರಚಿಸಿದ್ದಾಾರೆ. ಉಳಿದಂತೆ ಕಪಿಲ್ ದೋತಿಕಲಾಕಾರ್ ಚಿತ್ರಕ್ಕೆೆ ಸಂಗೀತ ನೀಡಲಿದ್ದಾಾರೆ. ಈ ತಿಂಗಳ ಕೊನೆಯ ವಾರದಲ್ಲಿ ಚಿತ್ರದ ಮಹೂರ್ತ ಸಮಾರಂಭ ನಡೆಯಲಿದ್ದು, ಬೆಂಗಳೂರಿನ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!